ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ (Sadhu Kokila) ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಕ್ರಿಶ್ಚಿಯನ್ ಸಮುದಾಯ ಒತ್ತಾಯಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯ ಈ ಭಾಗದಲ್ಲಿ ಇರುವುದರಿಂದ ಸಾಧು ಕೋಕಿಲಾ ಅವರಿಗೇ ಟಿಕೆಟ್ ನೀಡುವಂತೆ ಮನವಿ ಕೂಡ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ಸಾಧು ಕೋಕಿಲಾ, ನಾನು ಒಂದು ಧರ್ಮಕ್ಕೆ ಸೀಮಿತಿ ಆಗಿಲ್ಲ. ಬೆಂಗಳೂರಿನಲ್ಲಿ ನಾನು ಜನರಲ್ ಕಂಪಾರ್ಟಮೆಂಟ್. ನನ್ನನ್ನ ಎಲ್ಲಾ ಜಾತಿ ಧರ್ಮದವರು ಗುರುತಿಸುತ್ತಾರೆ. ನನ್ನ ಹಿನ್ನಲೆ ಜನರಿಗೆ ಗೊತ್ತಿದೆ. ನನನ್ನು ಯಾವ ಜಾತಿಗೂ ಸೇರಿಸಬೇಡಿ. ನಾನು ಎಲ್ಲರಿಗೂ ಸೇರಿದವನು. ಬೆಂಗಳೂರು 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಕ್ರಿಶ್ಚಿಯನ್ ಸಮುದಾಯದಿಂದ ಸಾಧು ಕೋಕಿಲಗೆ ಟಿಕೆಟ್ ಕೊಡಿ ಅಂತ ಕೇಳಿದ್ದಾರೆ. ನನಗೆ ಗೊತ್ತಿಲ್ಲ ಪಕ್ಷ ಏನ್ ಮಾಡುತ್ತೋ.ಯಾರಿಗೆ ಟಿಕೆಟ್ ಕೊಡ್ತಾರೆ ಗೊತ್ತಿಲ್ಲ’ ಎಂದಿದ್ದಾರೆ.
ಅಲ್ಲದೇ, ಪಕ್ಷದ ತೀರ್ಮಾನಕ್ಕೆ ನಾನು ಬದ್ದ. ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೇನೆ. ಟಿಕೆಟ್ ಕೊಟ್ಟರೆ 100% ಕಾಂಗ್ರೆಸ್ ನಿಂದ ನಿಲ್ತೀನಿ ಎನ್ನುವ ವಿಶ್ವಾಸದ ಮಾತುಗಳನ್ನೂ ಸಾಧು ಕೋಕಿಲ ಆಡಿದ್ದಾರೆ.