DistrictsKarnatakaKoppalLatestMain Post

ಮುಂದೆಯೂ ನಾನೇ ಶಾಸಕನಾಗ್ತೀನಿ: ಹಾಲಪ್ಪ ಆಚಾರ್

ಕೊಪ್ಪಳ: ನೀವು ಬರೀ ಆರು ತಿಂಗಳು ಇರ್ತೀರಿ ಎಂದ ಮತದಾರರಿಗೆ ಮುಂದೆಯೂ ನಾನೇ ಶಾಸಕ ಎಂದು ಯಲಬುರ್ಗಾ ಕ್ಷೇತ್ರದ ಶಾಸಕರಾಗಿ, ಸಚಿವರಾಗಿರೋ ಹಾಲಪ್ಪ ಆಚಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ನೀವು ಇರೋದು ಬರೀ 6 ತಿಂಗಳು ನಮಗೆ ಕೆಲಸ ಮಾಡಿಕೊಡಿ ಎಂದು ಜನ ಹೇಳಿದರು. ಈ ವೇಳೆ ಸಾರ್ವಜನಿಕ ವೇದಿಕೆ ಮೇಲೆ ನಾನೇ ಮುಂದೆ ಶಾಸಕನಾಗ್ತಿನಿ ಎಂದು ಅವರು ತಿಳಿಸಿದರು.

ಈ ಮೂಲಕ ಸಮಾರಂಭದ ವೇದಿಕೆಯಲ್ಲಿ ಮತ್ತೊಮ್ಮೆ ಶಾಸಕನಾಗೋ ಆಸೆ ವ್ಯಕ್ತಪಡಿಸಿದರು. ಜನರ ಸಮಸ್ಯೆ ಆಲಿಸಿ, ನಮ್ಮ ಕೆಲಸ ಮಾಡಿಕೊಡಿ ಎಂದ ಮತದಾರರು. ನಾನೇ ಮುಂದೆ ಶಾಸಕನಾಗಿ ನಿಮ್ಮ ಕೆಲಸ ಮಾಡಿಕೊಡ್ತೀನಿ ಅಂದರು.

ಯಲಬುರ್ಗಾವು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ, ಸಚಿವ ಹಾಲಪ್ಪ ಆಚಾರ್ ನಡುವೆ ನೇರ ಹಣಾಹಣೆ ಇರೋ ಕ್ಷೇತ್ರವಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

Live Tv

Leave a Reply

Your email address will not be published.

Back to top button