ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಬೀಫ್ ಬಿರಿಯಾನಿ ಪಾರ್ಸಲ್ ಕಳುಹಿಸಲು ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಚಂದ್ರಶೇಖರ್ ರಾವ್ ಗೆ ಹೇಳ್ತಿನಿ ಅಂದಿದ್ದ ಓವೈಸಿಯ ಕಲ್ಯಾಣಿ ಬಿರಿಯಾನಿ ಗುರುವಾರದಿಂದ ಭಾರೀ ಸುದ್ದಿಯಲ್ಲಿದೆ.
ಸಾರ್ವಜನಿಕ ಸಭೆಯಲ್ಲಿ ಮಜಲೀಸ್-ಈ- ಮಸ್ಲಿಮೀನ್ (ಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಾತನಾಡಿ, ಚಂದ್ರಶೇಖರ್ ರಾವ್ ಅವರು ಎಲ್ಲರಿಗೂ ಬಿರಿಯಾನಿ ತಿನ್ನಿಸಿದ್ದರೆಂದು ಅಮಿತ್ ಶಾ ಹೊಟ್ಟೆ ಉರಿಸಿಕೊಳ್ಳುವುದು ಯಾಕೆ? ಅಮಿತ್ ಶಾ ಅವರಿಗೆ ಬಿರಿಯಾನಿ ಅಷ್ಟೊಂದು ಇಷ್ಟ ಅಂತಾ ನಂಗೆ ಗೊತ್ತಿರಲಿಲ್ಲ. ಅಮಿತ್ ಶಾ ದೆಹಲಿಗೆ ಹಿಂತಿರುಗುವ ಮುನ್ನ ಅವರಿಗೊಂದು ಕಲ್ಯಾಣಿ ಬಿರಿಯಾನಿ ಪಾರ್ಸಲ್ ಕಳಿಹಿಸಲು ನಾನು ಕೆಸಿಆರ್ ಅವರಿಗೆ ಮಾನವಿ ಮಾಡುತ್ತೇನೆ ಎಂದು ಓವೈಸಿ ವ್ಯಂಗವಾಗಿ ಮಾತನಾಡಿದ್ದರು.
Advertisement
Advertisement
ಈ ಮೂಲಕ ತೆಲಂಗಾಣ ಚುನಾವಣೆ ಅಖಾಡದಲ್ಲಿ ಈಗ ಬೀಫ್ ಪಾಲಿಟಿಕ್ಸ್ ಶುರುವಾಗಿದೆ. ಚುನಾವಣೆಯ ಪ್ರಚಾರದ ವೇಳೆ ಈ ರೀತಿ ಸಂಸದ ಓವೈಸಿ ಅವರು ಕೇಂದ್ರ ಸರ್ಕಾರದ ನಾಯಕರಿಗೆ ವ್ಯಂಗವಾಡಿರುವ ಸುದ್ದಿ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.
Advertisement
Advertisement
ಕ್ಯಾಣಿ ಬಿರಿಯಾಣಿ ಕರ್ನಾಟಕದ್ದು:
ಹೈದರಾಬಾದ್ ನಲ್ಲಿ ಪ್ರಸಿದ್ಧಿ ಪಡೆದಿರುವ ಈ ಕಲ್ಯಾಣಿ ಬಿರಿಯಾನಿ ಮೂಲ ಮಾತ್ರ ಕರ್ನಾಟಕದ್ದು. 1634ರಲ್ಲಿ ಬೀದರ್‍ನಲ್ಲಿದ್ದ ದೇಶದ ಅತೀ ದೊಡ್ಡ ಬಹುಮನಿ ಸಾಮ್ರಾಜ್ಯದಲ್ಲಿ ಕಲ್ಯಾಣಿಯ ಬೀಫ್ ಮಾಂಸ ಮತ್ತು ನಿರ್ಣಾ ಗ್ರಾಮದ ಅಕ್ಕಿ ಹಾಕಿ ಕಲ್ಯಾಣಿ ಬಿರಿಯಾನಿ ತಯಾರಿ ಮಾಡಲಾಗ್ತಿತ್ತು. ಬಳಿಕ ಇದು ಕಲ್ಯಾಣಿ ಬಿರಿಯಾನಿ ಅಂತಲೇ ಫೇಮಸ್ ಆಯ್ತು. ಕಲ್ಯಾಣಿಯ ಮೂಲ ಕರ್ನಾಟಕ ಅಂತ ತಿಳಿಯಲು ಸದ್ಯ ತೆಲಂಗಾಣ ಎಲೆಕ್ಷನ್ ವೇದಿಕೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv