`ಪಬ್ಲಿಕ್ ಟಿವಿ’ ಮೂಲಕ ಮನವಿ ಮಾಡ್ತೀನಿ, ತಂದೆ-ತಾಯಿ ಬಿಟ್ಟು ಹೋದ್ರೆ ಆಸ್ತಿ ಸಿಗಲ್ಲ: ಶರಣ ಪ್ರಕಾಶ್ ಪಾಟೀಲ್

Public TV
1 Min Read
SHARANA PRAKASH PATIL

ಬೆಂಗಳೂರು: ವೃದ್ಧ ತಂದೆ, ತಾಯಿಯನ್ನು ಬಿಟ್ಟು ಹೋಗುತ್ತಿರುವ ಪ್ರಕರಣಗಳು ಜಾಸ್ತಿ ಆಗುತ್ತಿದೆ. ಹೀಗಾಗಿ `ಪಬ್ಲಿಕ್ ಟಿವಿ’ ಮೂಲಕವೇ ಮನವಿ ಮಾಡ್ತೀನಿ, ತಂದೆ-ತಾಯಿ ಬಿಟ್ಟು ಹೋದರೆ ಆಸ್ತಿ ಸಿಗಲ್ಲ ಎಂದು ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ (Sharana Prakash Patil) ಹೇಳಿದರು.ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆ ಮೂಲಕ ಸರ್ಕಾರ ಮುಸ್ಲಿಮರ ಆಸ್ತಿ ಕಬಳಿಕೆ ಮಾಡುವ ಹುನ್ನಾರ: ಓವೈಸಿ ಆಕ್ರೋಶ

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಒಂದರಲ್ಲಿಯೇ 150 ಪ್ರಕರಣಗಳು ಇವೆ. ಇದರಲ್ಲಿ 70 ಪ್ರಕರಣಗಳಲ್ಲಿ ಮಕ್ಕಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಗಾಗಿ ಮಕ್ಕಳ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಿದ್ದೇವೆ. ಜೊತೆಗೆ ವೃದ್ಧ ತಂದೆ, ತಾಯಿಯನ್ನು ಬಿಟ್ಟು ಹೋಗುತ್ತಿರುವ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಈ ಹಿನ್ನೆಲೆ ಮಕ್ಕಳ ಆಸ್ತಿ, ವಿಲ್ ರದ್ದು ಮಾಡಲಾಗುವುದು ಎಂದು ಹೇಳಿದರು.

ಪಬ್ಲಿಕ್ ಟಿವಿ ಮೂಲಕವೇ ನಾನು ಮನವಿ ಮಾಡುತ್ತಿದ್ದೇನೆ. ನಿಮ್ಮ ತಂದೆ, ತಾಯಿಯನ್ನ ಆಸ್ಪತ್ರೆಗಳಲ್ಲಿ ಬಿಟ್ಟು ಹೋಗಬೇಡಿ. ಕೇಂದ್ರ ಸರ್ಕಾರದ ಕಾನೂನು ರಾಜ್ಯದಲ್ಲೂ ಜಾರಿ ಮಾಡುತ್ತೇವೆ. ಪೋಷಕರು, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯ ಮೂಲಕ ಆಸ್ತಿ, ವಿಲ್ ರದ್ದು ಮಾಡಬಹುದು. ರಾಜ್ಯದ ಎಲ್ಲ ಕಡೆಗಳಲ್ಲೂ ಮಾಹಿತಿ ಕಲೆ ಹಾಕಲು ಸೂಚಿಸಿದ್ದೇನೆ. ಮುಲಾಜಿಲ್ಲದೆ ಕ್ರಮ ಆಗಲಿದೆ. ಅಮಾನವೀಯವಾಗಿ ತಂದೆ, ತಾಯಿಯನ್ನ ಬಿಟ್ಟು ಹೋಗಬೇಡಿ. ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾನೂನು ಬೇಕಿಲ್ಲ. ಈಗಾಗಲೇ ಕೇಂದ್ರ ಸರ್ಕಾರದ ಕಾನೂನು ಇದೆ. ಅದರ ಮೂಲಕವೇ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಮುಸಲ್ಮಾನರಿಗೆ ಕಾಮಗಾರಿಯಲ್ಲಿ ಮೀಸಲಾತಿ ವಿರುದ್ಧ ಉಗ್ರ ಹೋರಾಟ; ಹಿಂದೂಗಳಲ್ಲಿ ಹಾಗಿದ್ದರೆ ಬಡವರಿಲ್ಲವೇ: ವಿಜಯೇಂದ್ರ

 

Share This Article