ಕೆಜಿಎಫ್ 2 ಸಿನಿಮಾದ ನಂತರ ಯಶ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಈ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆಯುತ್ತಾ ಬಂದರೂ, ಈವರೆಗೂ ಯಶ್ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಆದರೆ, ಅವರ ಮುಂದಿನ ಸಿನಿಮಾ ಬಗ್ಗೆ ತಿಂಗಳಿಗೊಂದು ಸುದ್ದಿ ಹೊರ ಬರುತ್ತಿವೆ. ಏನೇ ಸುದ್ದಿಗಳು ಹೊರ ಬಂದರೂ, ಅದನ್ನು ಒಪ್ಪುವುದಾಗಲಿ ಅಥವಾ ನಿರಾಕರಿಸುವುದಾಗಲಿ ಯಶ್ ಮಾಡಿರಲಿಲ್ಲ.
ಇದೇ ಮೊದಲ ಬಾರಿಗೆ ಮಾಧ್ಯಮವೊಂದರ ಜೊತೆ ತಮ್ಮ ಹೊಸ ಸಿನಿಮಾ ಬಗ್ಗೆ ಮಾತನಾಡಿದ ಯಶ್, ‘ನನಗೆ ಸಿನಿಮಾ ಮಾಡುವಂತಹ ಅವಸರ ಏನೂ ಇಲ್ಲ. ಕೆಲವರು ಹೇಳಿದರು ಕೆಜಿಎಫ್ ಯಶಸ್ಸನ್ನು ಎನ್ ಕ್ಯಾಶ್ ಮಾಡಿಕೊಳ್ಳಿ ಅಂತ. ನಾನು ಹಾಗೆ ಮಾಡುವುದಿಲ್ಲ. ನಾನು ಕೇಳುತ್ತಿರುವ ಕಥೆ ನನ್ನ ಎಕ್ಸೈಟ್ ಮಾಡಬೇಕು. ನನಗೇ ಅದು ಹಿಡಿಸದಿದ್ದರೆ ಜನರೇಕೆ ಅದನ್ನು ನೋಡಬೇಕು? ಹಾಗಾಗಿ ನಾನು ಅವಸರ ಮಾಡುವುದಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ
ಒಂದೊಳ್ಳೆ ಸಿನಿಮಾದ ಜೊತೆಗೆ ಬರುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದು, ಕಥೆ ಸಿದ್ಧವಾಗಿ ಆ ಕಥೆಯನ್ನು ಸಿನಿಮಾ ಮಾಡಬಹುದು ಅಂತ ಅನಿಸಿದಾಗ ತಾವೇ ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೊಸ ಬಗೆಯ ಸಿನಿಮಾ ಕೊಡಬೇಕು ಎನ್ನುವ ತುಡಿತ ಯಾವಾಗಲೂ ಅವರ ಜೊತೆ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.