ಟಿವಿ ಪರದೆ ಮೂಲಕ ಅಪಾರ ಅಭಿಮಾನಿಗಳನ್ನ ಗೆದ್ದಂತಹ Weekend With Ramesh 5 ಶೋನಲ್ಲಿ ಡಾಲಿ ಧನಂಜಯ್ ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ಬಣ್ಣದ ಬದುಕಿಗೆ ಕಾಲಿಟ್ಟಾಗ ಡಾಲಿಗೆ ಎದುರಾದ ಅವಕಾಶಗಳ ಕೊರತೆ, ಹೀಯಾಳಿಸಿದ ದಿನಗಳ ಬಗ್ಗೆ ಕಣ್ಣೀರಿಟ್ಟಿದ್ದಾರೆ. ಐರನ್ ಲೆಗ್ ಎಂದು ಕೆಟ್ಟ ಪದಗಳಲ್ಲಿ ಕುಟುಕಿದ ದಿನಗಳ ಬಗ್ಗೆ ಡಾಲಿ ಭಾವುಕರಾಗಿದ್ದಾರೆ.
2013ರಲ್ಲಿ ’ಡೈರೆಕ್ಟರ್ಸ್ ಸ್ಪೆಷಲ್ʼ (Directors Special) ಸಿನಿಮಾ ಮೂಲಕ ಡಾಲಿ ಧನಂಜಯ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಹೀರೋ ಆಗಿ ನಟಿಸುತ್ತಿದ್ದ ಡಾಲಿಗೆ, ತಿರುವು ಕೊಟ್ಟ ಸಿನಿಮಾ ಅಂದ್ರೆ ಶಿವಣ್ಣ ಜೊತೆಗಿನ ‘ಟಗರು’ (Tagaru) ಚಿತ್ರ. ಶಿವರಾಜ್‌ಕುಮಾರ್ ಮುಂದೆ ಡಾಲಿ (Daali) ಆಗಿ ಅಬ್ಬರಿಸಿದ ಮೇಲೆಯೇ ಧನಂಜಯ್ ಲಕ್ ಚೇಂಜ್ ಆಗಿದ್ದು, ಪ್ರತಿಭಾನ್ವಿತ ನಟ ಡಾಲಿಗೆ ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬಂದ್ವು. ಇಂದು ನಟ, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಬೆಳೆದಿದ್ದಾರೆ. ಆದರೆ ತಾವು ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಮ್ಮ ಕಷ್ಟದ ದಿನಗಳು ಹೇಗಿತ್ತು ಎಂಬುದನ್ನ ಮಾತನಾಡಿದ್ದಾರೆ. ಇದನ್ನೂ ಓದಿ:ಚುನಾವಣಾ ರಾಯಭಾರಿಯಾಗಿ ಖ್ಯಾತನಟ ಸತೀಶ್ ನೀನಾಸಂ ನೇಮಕ
ಧನಂಜಯ್ ಐರನ್ ಲೆಗ್ (Iron Leg) ಅವನನ್ನು ಹಾಕೋಂಡು ಸಿನಿಮಾ ಮಾಡಿದರೆ ಜನ ಬರಲ್ಲ ಅಂತ ಹೇಳುತ್ತಿದ್ದರು. ಎಲ್ಲಾ ತೆಗೆದುಕೊಂಡು ಧನಂಜಯ್ ಮೇಲೆ ಹಾಕಿದ್ರೆ ಹೇಗೆ ಎಲ್ಲರ ಎದುರು ಕೆಟ್ಟ ಪದಗಳಲ್ಲಿ ಹೇಳಿಬಿಟ್ಟರೆ ನಮಗೆ ಹೇಗಾಗುತ್ತೆ. ಯಾಕೆ ನೀವು ನಿಮ್ಮ ಹೀರೋನಾ ಹೀರೋ ರೀತಿ ನೋಡಿಕೊಳ್ಳಲ್ಲ. ನಾನು ಸಿನಿಮಾ ಕಲಿತುಕೊಂಡು ಬಂದಿದ್ದೀನಿ ಅಲ್ವಾ? ಹೀಗಾಗಿ ನನ್ನ ಕೋಪ ಎಲ್ಲಾ ತೆಗೆದು ಡಾಲಿ ಮೇಲೆ ಹಾಕಿ ಪಾತ್ರ ಮಾಡಿದಕ್ಕೆ ಇಂಡಸ್ಟ್ರಿಯಲ್ಲಿ ನಿಂತುಕೊಂಡೆ ಎಂದು ಧನಂಜಯ್ ಹೇಳಿದ್ದಾರೆ.
ಬಳಿಕ ಡಾಲಿ ಬಗ್ಗೆ ಶಿವಣ್ಣ ಹಾಡಿ ಹೊಗಳಿದ್ದಾರೆ. ಧನಂಜಯ್ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಅವರಲ್ಲಿ ಸದಾ ಜೋಶ್ ಇರುತ್ತೆ. ನನ್ನ ಪ್ರೀತಿ ಮತ್ತು ವಿಶ್ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ವಿಡಿಯೋ ಮೂಲಕ ಮಾತನಾಡಿದ್ದಾರೆ. ಶಿವಣ್ಣ ಅವರ ಜೊತೆ ನಾನು ಎಮೋಷನಲ್ ಆಗಿ ಕನೆಕ್ಟ್ ಆಗುತ್ತೀನಿ ನನ್ನನ್ನು ಮಗನ ರೀತಿ ನೋಡಿಕೊಂಡಿದ್ದಾರೆ ಎಂದು ಧನಂಜಯ್ ಹೇಳಿದ್ದಾರೆ. ಮತ್ತೊಂದು ಖುಷಿ ಏನೆಂದರೆ ಅಪ್ಪು ಸರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು, ನೆನಪುಗಳು ಅಷ್ಟೇ ನಮ್ಮ ಜೀವನದಲ್ಲಿ ದೊಡ್ಡ ಕಲೆಕ್ಷನ್ ಆಗಿ ಉಳಿಯುವುದು. ಏನ್ ಏನ್ ಕೊಡಬೇಕು ಪ್ರತಿಯೊಂದನ್ನು ತುಂಬಾ ಪ್ರೀತಿಯಿಂದ ಕೊಟ್ಟಿದ್ದಾರೆ ಎಂದು ಡಾಲಿ ಮಾತನಾಡಿದ್ದಾರೆ.