ಬಾಲ್ಯದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯವಾಗಿತ್ತು: ನಟಿ ವರಲಕ್ಷ್ಮಿ

Public TV
1 Min Read
Varalakshmi Sarathkumar

ಕ್ಷಿಣದ ಹೆಸರಾಂತ ನಟ ಶರತ್ ಕುಮಾರ್ ಪುತ್ರಿ ವರಲಕ್ಷ್ಮಿ (Varalakshmi Sarath Kumar) ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಶಬರಿ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಅವರು, ಈ ಸಿನಿಮಾದ ಸಂದರ್ಶನದಲ್ಲಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ. ಬಾಲ್ಯದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದನ್ನು ನೆನಪಿಸಿಕೊಂಡರೆ, ಈಗಲೂ ಹಿಂಸೆ ಅನಿಸುತ್ತದೆ ಎಂದಿದ್ದಾರೆ.

Varalakshmi Sarathkumar 1

ಈ ಮಾತುಗಳನ್ನು ಅವರು ಆಡೋದಕ್ಕೂ ಕಾರಣವಿದೆ. ಶಬರಿ ಸಿನಿಮಾದಲ್ಲಿ ತಾಯಿಯು ತನ್ನ ಮಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವ ಕಥೆಯನ್ನು ಆಧರಿಸಿದೆ. ಈ ಸಮಯದಲ್ಲಿ ವರಲಕ್ಷ್ಮಿ ಲೈಂಗಿಕ ದೌರ್ಜನ್ಯದ ಕುರಿತಾದ ಮಾತುಗಳನ್ನು ಆಡಿದ್ದಾರೆ. ತಮ್ಮ ಜೀವನದಲ್ಲೇ ನಡೆದ ಘಟನೆಯನ್ನು ನೆಪಿಸಿಕೊಂಡಿದ್ದಾರೆ.

Varalakshmi Sarathkumar 1

ಒಂದು ಕಡೆ ಸಿನಿಮಾ ಮತ್ತೊಂದು ಕಡೆ ಮದುವೆ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ನಿಕೋಲಾಯ್ ಸಚ್‌ದೇವ್ (Nicholai Sachdev) ಎಂಬುವರ ಜೊತೆ ಮದುವೆ ನಿಶ್ಚಯವಾಗಿದೆ. ಇವರು ಅಥ್ಲೆಟ್ ಆಗಿದ್ದು ವೇಟ್‌ಲಿಫ್ಟಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ಈಗಾಗಲೇ ಅವರಿಗೆ ಮದುವೆಯಾಗಿದ್ದು, 15 ವರ್ಷದ ಮಗಳಿದ್ದಾಳೆ ಎನ್ನಲಾಗ್ತಿದೆ. ಇವರ ಜೊತೆ ವರಲಕ್ಷ್ಮಿ ನಿಶ್ಚಿತಾರ್ಥ ಹಲವು ಚರ್ಚೆಗೆ ಕಾರಣವಾಗಿದೆ.

Varalakshmi Sarathkumar

ನಿಕೋಲಾಯ್ ಅವರು ಖ್ಯಾತ ಮಾಡೆಲ್ ಕವಿತಾ (Kavitha) ಅವರನ್ನು ಮದುವೆಯಾಗಿದ್ದರು. ಅವರಿಗೆ 15 ವರ್ಷದ ಮಗಳೂ ಸಹ ಇದ್ದಾರೆ ಎನ್ನಲಾಗಿದೆ. ಈ ಜೋಡಿಗೆ ಮದುವೆ ಬಳಿಕ ಹೊಂದಾಣಿಕೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ವರಲಕ್ಷ್ಮಿ ಜೊತೆ ಎಂಗೇಜ್ ಆದರು. ನಿಕೋಲಾಯ್ ಹಾಗೂ ಕವಿತಾ ಡಿವೋರ್ಸ್ ಬಳಿಕವಷ್ಟೇ ವರಲಕ್ಷ್ಮಿ ಜೊತೆ ಡೇಟಿಂಗ್ ಶುರುವಾಗಿತ್ತು ಎಂದು ವರದಿಯಾಗಿವೆ.

ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಅಭಿಮಾನಿಗಳಿಗೆ ಮಾರ್ಚ್ 1ರಂದು ಗುಡ್ ನ್ಯೂಸ್ ಕೊಟ್ಟಿದ್ದರು. ಆಪ್ತರ ಸಮ್ಮುಖದಲ್ಲಿ ನಟಿ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆದರು. ಎಂಗೇಜ್‌ಮೆಂಟ್‌ನ ಸುಂದರ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ವರಲಕ್ಷ್ಮಿ ಅವರು ಆರ್ಟ್ ಗ್ಯಾಲರಿ ಮಾಲೀಕ ನಿಕೋಲಾಯ್ ಸಚ್‌ದೇವ್ ಜೊತೆ ಎಂಗೇಜ್ ಆಗಿದ್ದಾರೆ. ಅಂದಹಾಗೆ, ಕಳೆದ 14 ವರ್ಷದಿಂದ ನಿಕೋಲಾಯ್ ಪರಿಚಯವಿತ್ತು. ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ವರಲಕ್ಷ್ಮಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ.

Share This Article