ನಟ ಅನಿರುದ್ಧ ವಿರುದ್ಧ ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಮಾಡಿದ ಪ್ರತಿ ಆರೋಪಕ್ಕೆ ಅನಿರುದ್ಧ ಉತ್ತರ ಕೊಡುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು ಬಂತು, ಫ್ಯಾನ್ಸ್ ಹುಟ್ಟಿಕೊಂಡರು. ಹೆಸರು ಬರುತ್ತಿದ್ದಂತೆಯೇ ಕಿರಿಕಿರಿ ಮಾಡುವುದಕ್ಕೆ ಶುರು ಮಾಡಿದರು ಎಂದು ಆರೂರು ಜಗದೀಶ್ ಮಾಧ್ಯಮಗಳ ಜೊತೆ ನೋವನ್ನು ಹಂಚಿಕೊಂಡಿದ್ದರು.
ಈ ಮಾತಿಗೆ ಉತ್ತರ ನೀಡಿರುವ ಅನಿರುದ್ಧ, ನಾನು ರಂಗಭೂಮಿಯಿಂದ ಬಂದವನು. ಯಾವತ್ತೂ ಹೆಸರಿನ ಹಿಂದೆ ಹೋದವನು ಅಲ್ಲ. ಜೊತೆ ಜೊತೆಯಲಿ ಧಾರಾವಾಹಿಗಿಂತ ಮುಂಚೆಯೇ ನಾನು ಹೀರೋ ಆದವನು. ಆಗಲೂ ಫ್ಯಾನ್ಸ್ ಇದ್ದರು. ಏಕಾಏಕಿ ಫೇಮಸ್ ಆದವನೂ ಅಲ್ಲ. ಹಂತಹಂತವಾಗಿ ಬೆಳೆಯುತ್ತಾ ಬಂದಿದ್ದೇನೆ. ಯಾವತ್ತೂ ನಾನು ಯಾರಿಗೂ ಕಿರಿಕಿರಿ ಮಾಡಿಲ್ಲ. ಆರೂರು ಜಗದೀಶ್ ಅವರು ಸಲ್ಲದ ಆರೋಪ ಮಾಡುತ್ತಿದ್ದಾರೆ ಎನ್ನುತ್ತಾರೆ. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!
ಜೊತೆ ಜೊತೆಯಲಿ ಧಾರಾವಾಹಿ ಅನಿರುದ್ಧ ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದು ಸತ್ಯ. ಫ್ಯಾನ್ಸ್ ಕೂಡ ಹೆಚ್ಚಾಗಿರುವುದು ನಿಜ. ಆದರೂ, ಅನಿರುದ್ಧ ಅವರೇ ಧಾರಾವಾಹಿಯಲ್ಲಿ ಇರಬೇಕಿತ್ತು ಎನ್ನುವುದು ಅಭಿಮಾನಿಗಳ ಆಸೆಯ. ಆದರೆ, ಎಲ್ಲವೂ ಕೈ ಮೀರಿ ಹೋಗಿದೆ. ಅನಿರುದ್ಧ ಅವರನ್ನು ಕೈಬಿಟ್ಟು ಬೇರೆ ಕಲಾವಿದನ ಆಯ್ಕೆ ನಡೆಯುತ್ತಿದೆ.