– ನಾನು ಸಚಿವ ಆಗ್ಲೇಬೇಕು, ಸಹಕಾರ ಸಚಿವ ಸ್ಥಾನವೇ ಬೇಕು
– ಮಧುಗಿರಿ ಜಿಲ್ಲೆ ಮಾಡಲು ಪ್ರಯತ್ನ
ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ (Congress) ನಲ್ಲಿ ಇದೀಗ ಒಂದೆಡೆ ಸಿಎಂ ಕುರ್ಚಿಗಾಗಿ ಫೈಟ್ ನಡೆಯುತ್ತಿದ್ದರೆ ಮತ್ತೊಂದೆಡೆ ಸಚಿವ ಸ್ಥಾನಕ್ಕೆ ಒಬ್ಬೊಬ್ಬರೇ ಕರ್ಚೀಫ್ ಹಾಕುತ್ತಿದ್ದಾರೆ. ಅಂತೆಯೇ ನಾನು ಸಚಿವ ಆಗಲೇಬೇಕು, ಸಹಕಾರ ಸಚಿವ ಸ್ಥಾನವೇ ಬೇಕು ಎಂದು ಮಧುಗಿರಿ ನೂತನ ಶಾಸಕ ಕೆಎನ್ ರಾಜಣ್ಣ (KN Rajanna) ಪಟ್ಟು ಹಿಡಿದಿದ್ದಾರೆ.
ಸಿಎಂ ಆಯ್ಕೆ ಇನ್ನೂ ಕಗ್ಗಂಟು ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಗ್ಗಂಟು ಇಲ್ಲ ಯಾವ ಗಂಟೂ ಇಲ್ಲ. ಎಲ್ಲಾ ಸರಾಗವಾಗಿದೆ. 18ಕ್ಕೆ ಪ್ರಮಾಣ ವಚನ ಆಗಬಹುದು. ನನಗೆ ವಿಶ್ವಾಸ ಇದೆ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗುತ್ತಾರೆ. ಹೈಕಮಾಂಡ್ ಒಲವು ಕೂಡ ಅವರ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಹೈಕಮಾಂಡ್ ಎಲ್ಲರನ್ನ ಕರೆಸಿ ವಿಶ್ವಾಸ ತೆಗೆದುಕೊಂಡು ಸಮಾನಕರವಾದ ಘಟ್ಟ ತರಬೇಕೆಂಬ ಪ್ರಯತ್ನ ಅಷ್ಟೇ. ಶಿವಕುಮಾರ್ (DK Shivakumar) ಕೂಡ ಸಹಕಾರ ಕೊಡ್ತಾರೆಂಬ ವಿಶ್ವಾಸ ಇದೆ. ಸಿಎಂ ವಿಚಾರ ಇಂದು ಫೈನಲ್ ಆಗಲೇಬೇಕು. ಸಿದ್ದರಾಮಯ್ಯ (Siddaramaiah) ಸಿಎಂ ಆಗಲಿದ್ದಾರೆ ಎಂದರು.
Advertisement
Advertisement
ಇದೇ ವೇಳೆ ಸಚಿವ ಸಂಪುಟ ರಚನೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸಚಿವ ಸಂಪುಟ ಸ್ವಲ್ಪ ತಡವಾಗಬಹುದು. ಸದ್ಯಕ್ಕೆ ಸಿದ್ದರಾಮಯ್ಯ ಒಬ್ಬರೇ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಮೊದಲ ದಿನವೇ ಕ್ಯಾಬಿನೆಟ್ ಮಾಡುತ್ತಾರೆ. 10 ಕೆ.ಜಿ ಅಕ್ಕಿ ಘೋಷಣೆ ಮಾಡುತ್ತಾರೆ. ಅನ್ನಭಾಗ್ಯ ಯೋಜನೆ ಜಾರಿಗೆ ತರೋದೇ ಮೊದಲ ತೀರ್ಮಾನವಾಗಿದೆ. ನಾನು ಸಚಿವ ಆಗಲೇಬೇಕು. ಸಹಕಾರ ಸಚಿವ ಸ್ಥಾನವೇ ಬೇಕು. ಅದು ಬಿಟ್ಟು ಬೇರೆ ಏನೂ ಕೇಳಲ್ಲ ಎಂದು ತಿಳಿಸಿದ್ದಾರೆ.
Advertisement
ಬಿಜೆಪಿ (BJP) ಸೋಲು ವಿಚಾರದ ಕುರಿತು ಮಾತನಾಡಿ, 40% ಕಮಿಷನ್ ಹಾಗೂ ಬೆಲೆ ಏರಿಕೆಯಿಂದ ಬಿಜೆಪಿ ಸೋತಿದೆ. ಇಲ್ಲಿರುವ ಬಿಜೆಪಿ ರಾಜ್ಯ ನಾಯಕರಿಗೆ ಮತ ಸೆಳೆಯುವ ಶಕ್ತಿ ಇಲ್ಲ. ನಾಲ್ಕು ವರ್ಷಗಳಲ್ಲಿ ಒಂದು ಜನಪರ ಕಾರ್ಯ ಬಿಜೆಪಿ ನೀಡಲಿಲ್ಲ. ಮೀಸಲಾತಿ ಕೂಡ ಎಫೆಕ್ಟ್ ಆಗಿದೆ. ಜನರಿಗೆ ಸರ್ಕಾರದ ಬಗ್ಗೆ ಬೇಸರವಾಗಿತ್ತು. ರಾಜ್ಯದಲ್ಲಿ ಮೋದಿ ಅಲೆ ವರ್ಕೌಟ್ ಆಗಿಲ್ಲ ಎಂದು ಹೇಳಿದರು.
ಡಿಜಿಪಿ ಪ್ರವಿಣ್ ಸೂದ್ (Praveen Sood) ಸಿಬಿಐಗೆ ನೇಮಕ ಬಗ್ಗೆ ಮಾತನಾಡಿ, ಡಿ.ಕೆ ಶಿವಕುಮಾರ್ ಪ್ರವಿಣ್ ಸೂದ್ ರನ್ನ ಬೈದಿದ್ದರು. ಈಗ ಪ್ರವೀಣ್ ಸೂದ್ ರನ್ನ ಸಿಬಿಐಗೆ ನೇಮಿಸಿದ್ದಾರೆ. ಡಿಕೆ ಶಿವಕುಮಾರ್ ರನ್ನ ಟಾರ್ಗೆಟ್ ಮಾಡಲಿ ಅಂತಾ ನೇಮಿಸಿದ್ದಾರೆ. ಶಿವಕುಮಾರ್ ಮೇಲೆ ದ್ವೇಷ ಸಾಧಿಸಲು ಹಾಗೇ ಮಾಡಿದ್ದಾರೆ. ಹೆದರಿಸುವುದು, ಬ್ಲಾಕ್ ಮೇಲ್ ರಾಜಕಾರಣ ಮಾಡುವುದು ಅವರ ಕೆಲಸ ಎಂದ ಅವರು, ಮಧುಗಿರಿ ಜಿಲ್ಲೆ ಮಾಡಲು ಪ್ರಯತ್ನ ಮಾಡಲಾಗುವುದು. ನಾನು ಹೇಳಿದಂತೆ ನಡೆಯುವವನು. ಮಧುಗಿರಿ (Madhugiri District) ಜಿಲ್ಲೆ ಆಗಲಿದೆ ಎಂದು ತಿಳಿಸಿದರು.