– ಜೆಡಿಎಸ್ ಮುಗಿಸೋದಕ್ಕೆ ಹಾಸನದಲ್ಲಿ ಸಮಾವೇಶ ಮಾಡ್ತಿದ್ದೀರಾ?: ಕಾಂಗ್ರೆಸ್ ವಿರುದ್ಧ ಗರಂ
– ದೇವೇಗೌಡರ ಕುಟುಂಬದ ಮೇಲಿನ ಒಕ್ಕಲಿಗರ ಪ್ರೀತಿ ಕಿತ್ತು ಹಾಕಲು 10 ಜನ್ಮ ಎತ್ತಿ ಬಂದ್ರೂ ಸಾಧ್ಯವಿಲ್ಲ
ರಾಮನಗರ: ಚನ್ನಪಟ್ಟಣ ಉಪಚುನಾವಣೆಯ ಸೋಲಿನ ಹೊಣೆ ಕಾರ್ಯಕರ್ತರು, ಮುಖಂಡರದ್ದಲ್ಲ, ಈ ಬೈಎಲೆಕ್ಷನ್ ಸೋಲಿನ ಜವಾಬ್ದಾರಿಯನ್ನ ನಾನು ವೈಯಕ್ತಿಕವಾಗಿ ತೆಗೆದುಕೊಳ್ತೇನೆ. ನಾವು ಮಾಡಿದ ಕೆಲ ವಿಳಂಬದ ನಿರ್ಧಾರವೂ ಇದಕ್ಕೆ ಕಾರಣ ಆಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಕೆಲಸ ಮಾಡ್ತೇವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು.
Advertisement
ಮಂಡ್ಯ ಲೋಕಸಭೆಗೆ ನಿಖಿಲ್ ನಿಲ್ಲಸಬೇಕು ಅಂತಾ ಸಾರಾ ಮಹೇಶ್ ಒತ್ತಡ ಹಾಕಿದ್ರು. ಆಗ ನಿಖಿಲ್ ನಾನು ಸ್ಪರ್ಧೆ ಮಾಡಲ್ಲ ಅಂದ್ರು. ರಾಮನಗರ ಜಿಲ್ಲೆಯಲ್ಲೇ ಮುಂದಿನ ಹೋರಾಟ ಮಾಡ್ತೀನಿ ಅಂದಿದ್ರು. ಆ ಹಿನ್ನೆಲೆಯಲ್ಲಿ ನಾನು ಮಂಡ್ಯದಿಂದ ಸ್ಪರ್ಧೆ ಮಾಡಿದೆ. ನಿಖಿಲ್ ಅಧಿಕಾರಕ್ಕಾಗಿ ನಿಂತಿದ್ರೆ ಮಂಡ್ಯದಲ್ಲಿ ನಿಂತು ಗೆಲ್ತಿದ್ರು. ಆದರೆ ದೇವರ ಇಚ್ಛೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಚಿವ ಸ್ಥಾನ ಉಳಿಸಿಕೊಳ್ಳಲು 1 ತಿಂಗಳ ಮೊದಲೇ ರಿಪೋರ್ಟ್ ಕಾರ್ಡ್ ಸಲ್ಲಿಸಿದ ಬೋಸರಾಜು
Advertisement
Advertisement
ನಮ್ಮನ್ನ ಟೂರಿಂಗ್ ಟಾಕೀಸ್ ಅಂತಾರೆ. ರಾಜ್ಯದಲ್ಲಿ ಯಾವುದೇ ಕಡೆ ನಿಂತು ಗೆದ್ದು ಬರೋ ಶಕ್ತಿ ಇದ್ರೆ ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ. ಈ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಅನಿರೀಕ್ಷಿತ. ಅವರನ್ನೇ ನಿಲ್ಲಿಸಬೇಕು ಅನ್ನೋದಿದ್ದಿದ್ರೆ ನಾನು ಕ್ಷೇತ್ರದಿಂದ ಹೋದಾಗಲೇ ನಿಖಿಲ್‌ಗೆ ವೇದಿಕೆ ಸಿದ್ಧ ಮಾಡ್ತಿದ್ದೆ. ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಈಗ ಗೆದ್ದಿರೋ ಅಭ್ಯರ್ಥಿ ಯಾವ ರೀತಿ ನಾಟಕ ಆಡಿದ್ರೂ ಗೊತ್ತಿದೆ. ಎಲ್ಲದಕ್ಕೂ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡ್ತೇವೆ. ಸಿಪಿವೈ, ದೇವೇಗೌಡರು ರಾಜಕೀಯ ಬಿಡಲಿ ಅಂತಾರೆ. ಸಿದ್ದರಾಮಯ್ಯ ಪ್ರಧಾನಿ ಮೋದಿ ಭೇಟಿ ಬಳಿಕ ಮಣ್ಣಿನ ಮಕ್ಕಳು ಅಂತಾ ನಮ್ಮ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ನಮ್ಮ ಮೇಲೆ ಎಷ್ಟು ಭಯ ಇದೆ ನೋಡಿ. ಇಲ್ಲಿನ ಮಹಾನುಭಾವ ದೇವೇಗೌಡರು ರಾಜಕೀಯ ನಿವೃತ್ತಿ ಪಡೆಯಲಿ ಅಂತಾರೆ. ದೇವೇಗೌಡರ ಧ್ವನಿ ಇಲ್ಲದಿದ್ರೆ ರಾಜ್ಯ ಎಲ್ಲಿ ಇರ್ತಿತ್ತು ಗೊತ್ತಾ ಎಂದು ಕಿಡಿಕಾರಿದರು.
Advertisement
ಈಗ ಯಾವುದೋ ಸಿದ್ದರಾಮೋತ್ಸವ ಮಾಡ್ತಾರಂತೆ. ಯಾವ ಉದ್ದೇಶಕ್ಕೆ ಮಾಡ್ತಿದ್ದೀರಿ. ಏನು ಸಂದೇಶ ಕೊಡೋಕೆ ಅಹಿಂದ ಸಮಾವೇಶ ಮಾಡ್ತಿದ್ದೀರಿ. ಒಂದೂವರೆ ವರ್ಷದ ಸರ್ಕಾರದಲ್ಲಿ ಆ ಸಮುದಾಯಕ್ಕೆ ಏನು ಮಾಡಿದ್ದೀರಿ? ಸಿದ್ದರಾಮಯ್ಯ ದಲಿತರಿಗೆ ಏನು ಯೋಜನೆ ಕೊಟ್ಟಿದ್ದೀರಿ. ವಾಲ್ಮೀಕಿ ಸಮುದಾಯದ ಹಣ ನುಂಗಿದ್ದೀರಿ. ಈಗ ಭೋವಿ ಸಮುದಾಯದ ಹಣ ತಿಂತಿದ್ದೀರಿ. ಈ ಸರ್ಕಾರಕ್ಕೆ ನಾಚಿಕೆ ಆಗಲ್ವಾ? ಜೆಡಿಎಸ್ ಮುಗಿಸೋದಕ್ಕೆ ಹಾಸನದಲ್ಲಿ ಸಮಾವೇಶ ಮಾಡ್ತಿದ್ದೀರಾ? ದಲಿತರಿಗೆ ಏನು ಕೊಡುಗೆ ನೀಡಿದ್ದೀರಿ ಹೇಳಿ. ಆ ಸಮುದಾಯಕ್ಕೆ ಯಾವಾಗ ಬುದ್ದಿ ಬರುತ್ತೋ ಗೊತ್ತಿಲ್ಲ. ನಿಮ್ಮ ಪ್ರಿಯಾಂಕಾ ಗಾಂಧಿ ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡ್ತಿಲ್ಲ. ನೀವು ಸಂವಿಧಾನದ ಆಶಯ ಉಳಿಸ್ತೀರಾ? ನಿಮ್ಮ ಸಚಿವರಿಗೆ ಮಾನ ಮರ್ಯಾದೆ ಇದ್ಯಾ? ಯಾವುದೊ ಮೆಡಿಷನ್ ಕೊಟ್ಟು ಬಳ್ಳಾರಿಯಲ್ಲಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಸರ್ಕಾರದ ಯಾರಾದ್ರೂ ಪ್ರತಿನಿಧಿ ಹೋಗಿದ್ದೀರಾ? ನಿಮಗೆ ನಾಚಿಕೆ ಆಗಲ್ವಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಾಕತ್ತಿದ್ರೆ ಯತ್ನಾಳ್‌ನ ಉಚ್ಚಾಟಿಸಿ – ವಿಜಯೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲ್
ಈ ಮೂರು ಬೈಎಲೆಕ್ಷನ್ ಮೇಲೆ ಫಲಿತಾಂಶದಿಂದ ಎಲ್ಲಾ ನಿರ್ಧಾರ ಆಗಲ್ಲ. ಈಗ 138 ಸ್ಥಾನದಲ್ಲಿದ್ದೀರಿ. ಮುಂದಿನ ಚುನಾವಣೆಯಲ್ಲಿ ಕೇವಲ 38 ಸ್ಥಾನ ಗೆದ್ದು ತೋರಿಸಿ. ಈಗ ಗೆದ್ದಿರೋ ಆಸಾಮಿ ನಮಗೂ, ಬಿಜೆಪಿಗೂ ಟೋಪಿ ಹಾಕಿ ಹೋದ್ರು. ನಮ್ಮನ್ನ ರಣಹೇಡಿ ಅಂದವ್ರೆ. ದೇವೇಗೌಡರ ಕುಟುಂಬ ರಣಧೀರರ ರೀತಿ ಹೋರಾಟ ಮಾಡ್ತಾರೆ. ನಿಮಗೋಸ್ಕರ ನಿಖಿಲ್ ಕುಮಾರಸ್ವಾಮಿ ಇಲ್ಲಿ ಬಂದು ತಲೆ ಕೊಟ್ಟ. ಕಾರ್ಯಕರ್ತರ ಉಳಿಸಲು ಸ್ಪರ್ಧೆ ಮಾಡಿದ. ನಿಖಿಲ್ ಕುಮಾರಸ್ವಾಮಿ ರಣಧೀರನಾಗಿ ಹೋರಾಟ ಮಾಡಲು ಸ್ಪರ್ಧೆ ಮಾಡಿದ. ಏನೋ ಜೆಡಿಎಸ್ ಮುಗಿಸ್ತೀನಿ ಅಂತಾರೆ. ಈ ಪಕ್ಷ ಉಳಿದಿರೋದೆ ಒಕ್ಕಲಿಗ ಸಮಾಜದಿಂದ. ಮಂಡ್ಯದಲ್ಲಿ ಗೆಲ್ಲಲು ಈ ಸಮುದಾಯ ಕಾರಣ. ದೇವೇಗೌಡರ ಕುಟುಂಬದ ಮೇಲಿನ ಒಕ್ಕಲಿಗರ ಪ್ರೀತಿ ಕಿತ್ತು ಹಾಕಲು ಇನ್ನೂ 10 ಜನ್ಮ ಎತ್ತಿ ಬಂದ್ರೂ ಸಾಧ್ಯವಿಲ್ಲ. ದೇವೇಗೌಡರು ಪ್ರಧಾನಿ, ಸಿಎಂ ಆಗಲು ಈ ಸಮುದಾಯ ಕಾರಣ. ಆದರೆ ನಾವು ಯಾವತ್ತೂ ಜಾತಿ ರಾಜಕೀಯ ಮಾಡಿಲ್ಲ. ನಮ್ಮ ಬಗ್ಗೆ ಮಾತನಾಡುವ ಈ ಮಹಾನುಭಾವರು ನಿಮ್ಮ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.