ಶಿವಮೊಗ್ಗ: ಓರ್ವ ಸರ್ಕಾರದ ಮುಖ್ಯಸ್ಥನಾಗಿ ಮಂಡ್ಯ ಎಸ್ಪಿಗೆ ಹೇಳಿದ್ದೇನೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ಸಿಎಂ ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತ ಬಾವುಟ ಹಿಡಿದು ಏಕಾಏಕಿ ನಾನು ಹೋಗುತ್ತಿದ್ದ ಕಾರಿಗೆ ಅಡ್ಡ ಬಂದ. ಏನಾದರೂ ಅನಾಹುತ ಆಗಿದ್ದರೆ ಎಂಬ ಕಾರಣದಿಂದ ಎಸ್ಪಿಗೆ ಹೇಳಿದ್ದೆ. ಸರ್ಕಾರದ ಮುಖ್ಯಸ್ಥನಾಗಿ ಹೇಳಿದ್ದೇನೆ ಹೊರತು ಕಪ್ಪು ಬಾವುಟ ಪ್ರದರ್ಶನಕ್ಕೆ ಅಲ್ಲ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ನಿನಗ್ಯಾರು ಐಪಿಎಸ್ ಕೊಟ್ಟಿದ್ದು?- ಮಂಡ್ಯ ಎಸ್‍ಪಿಗೆ ಸಿಎಂ ಸಾರ್ವಜನಿಕ ಬೈಗುಳ
ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಲು ಸಿದ್ಧವಿದೆ. ಅದರೆ, ಕೇಂದ್ರ ಸರ್ಕಾರ ಮೊದಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ರಾಷ್ಟ್ರ ಮಟ್ಟದಲ್ಲಿ ಮಹಾಮೈತ್ರಿ ಅಗತ್ಯವಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಅಂತಾ ಹೇಳಿದ್ರು.
ಸಿಎಂ ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಸ್ವತಃ ಪೂರ್ವ ವಲಯ ಐಜಿ ಡಾ.ಸಲೀಂ ಉಸ್ತುವಾರಿಯ ನೇತೃತ್ವ ವಹಿಸಿದ್ದರು. ಎಸ್ಪಿ ಅಭಿನವ್ ಖರೆ ಇನ್ನಿತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮಗಳ ನಡೆಯಲಿರುವ ಸ್ಥಳಗಳ ಬಂದೋಬಸ್ತ್ ಗೆ ನಿಂತಿದ್ದರು. ಸಿವಿಲ್ ಡ್ರೆಸ್‍ನಲ್ಲೆ ಹೆಚ್ಚು ಪೊಲೀಸರು ನಿಯೋಜಿತಗೊಂಡು, ಪ್ರತಿಭಟನೆ ಹತ್ತಿಕ್ಕಲು ಸಜ್ಜುಗೊಂಡಿದ್ದರು.
ಇದನ್ನೂ ಓದಿ: ಮಂಡ್ಯ ಎಸ್‍ಪಿಗೆ ಸಿಎಂ ಜೋರು ಮಾಡಿದ್ದು ಸರಿ: ಪರಮೇಶ್ವರ್ ಸಮರ್ಥನೆ