ಬೆಂಗಳೂರು: ರಾಜ್ಯಪಾಲರಿಗೆ (Thawar Chand Gehlot) ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಟಾಂಗ್ ನೀಡಿದ್ದಾರೆ.
ದೆಹಲಿಗೆ ಹೊರಡುವ ಮುನ್ನ ಮಾಧ್ಯಮದ ಮುಂದೆ ಮಾತನಾಡಿದ ಅವರು, ಯಾವ ರೀತಿ ನಮ್ಮ ಗವರ್ನರ್ ಕಚೇರಿ ದುರುಪಯೋಗ ಆಗಿದೆ ಎಂದು ಪ್ರಾಸಿಕ್ಯೂಷನ್ ಆದಮೇಲೆ ಎಲ್ಲವನ್ನೂ ಹೈಕಮಾಂಡ್‌ಗೆ ತಿಳಿಸಬೇಕು. ಹದಿನೈದು ಬಿಲ್‌ಗಳನ್ನು ಗವರ್ನರ್ ವಾಪಸ್ ಕಳುಹಿಸಿದ್ದಾರೆ. ನಾನು ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ಕೇಳಲಿ, ಹೇಳುವುದಿಲ್ಲ ಅಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾಕೆ ಇರಬೇಕು? ಬಿಜೆಪಿ ನಾಯಕರು ಹೇಳಿದ ಕೂಡಲೇ ವಾಪಸ್ಸು ಕಳುಹಿಸಿಬಿಟ್ಟರೆ ಸರೀನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ : ನೇಪಾಳದಲ್ಲಿ ನದಿಗೆ ಉರುಳಿತು 40 ಭಾರತೀಯರಿದ್ದ ಬಸ್ಸು – 14 ಮಂದಿ ಸಾವು
Advertisement
Advertisement
ಸರ್ಕಾರ ಬೀಳಿಸುವುದಕ್ಕೆ ಯಾರು ಯಾವ ಪ್ರಯತ್ನ ಮಾಡಿದರು ಆಗುವುದಿಲ್ಲ. ನಾವು ಸುಮ್ಮನೆ ಕೂರುವುದಿಲ್ಲ, ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಜಿಂದಾಲ್‌ನಲ್ಲಿ ಕೈಗಾರಿಕೆಗಳು ಬರಬೇಕು. ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ಕೊಡಬೇಕು. ಪಾಲಿಸಿ ಪ್ರಕಾರ ನಾವು ಮಾಡಿದ್ದೇವೆ. ಹೊಸದಾಗಿ ನಾವು ಏನು ಕೊಟ್ಟಿಲ್ಲ. ಹಳೆಯ ಪದ್ಧತಿ ಪ್ರಕಾರವೇ ಬಿಜೆಪಿಯವರ ರೀತಿಯಲ್ಲಿಯೇ ನಾವು ಮಾಡಿದ್ದೇವೆ ಎಂದರು. ಇದನ್ನೂ ಓದಿ : ನಕಲಿ ಎನ್‍ಸಿಸಿ ಶಿಬಿರದಲ್ಲಿ ಲೈಂಗಿಕ ದೌರ್ಜನ್ಯ ಕೇಸ್ – ಪ್ರಕರಣದ ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಣು
Advertisement
Advertisement
ಯಾರು ಬೇಕಾದರೂ ದೆಹಲಿಗೆ ಬರಬಹುದು. ಬರುವವರನ್ನು ನಾವು ಬೇಡ ಅನ್ನುವುದಕ್ಕೆ ಹೋಗುವುದಿಲ್ಲ. ನಮಗೆ ಪಾರ್ಟಿ, ಇಲಾಖೆ ಸೇರಿ ಎಲ್ಲಾ ಕೆಲಸವೂ ಇದೆ. ಅದಕ್ಕಾಗಿ ನಾನು ಸಿಎಂ (CM Siddaramaiah) ದೆಹಲಿಗೆ ಹೋಗುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ : ಅನಿಲ್ ಅಂಬಾನಿಗೆ ಸೆಬಿ ಶಾಕ್ – ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ 5 ವರ್ಷ ಬ್ಯಾನ್, 25 ಕೋಟಿ ದಂಡ