ಬೆಂಗಳೂರು: 2023ರ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಹಾಗೂ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಬೆಂಗಳೂರಿನ ಹೋಟೆಲ್‌ನಲ್ಲಿ ವಿಪಕ್ಷಗಳ ಮೈತ್ರಿಕೂಟದ ಸಭೆ ನಡೆಸಲಾಯಿತು. 26 ಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ (I-ಇಂಡಿಯನ್, N-ನ್ಯಾಷನಲ್, D-ಡೆವಲಪ್‌ಮೆಂಟ್, I-ಇನ್‌ಕ್ಲೂಸಿವ್, A-ಅಲಯನ್ಸ್) ಎಂದು ಹೆಸರಿಡಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಹೆಸರನ್ನು ಘೋಷಿಸಿದವು. ಪತ್ರಿಕಾಗೋಷ್ಠಿಗೂ ಮುನ್ನ ಸಭೆಯಲ್ಲಿ 26 ರಾಷ್ಟ್ರೀಯ ವಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಡುವ ಪ್ರಸ್ತಾಪವನ್ನು ರಾಹುಲ್ ಗಾಂಧಿ ಅವರು ಮುಂದಿಟ್ಟಿದ್ದರು. ಇದರ ಜೊತೆಗೆ ಸಭೆಯಲ್ಲಿ ನಾಲ್ಕು ಹೆಸರುಗಳ ಶಿಫಾರಸು ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪಿಡಿಎ (ಪ್ರೊಗ್ರೆಸ್ಸಿವ್ ಡೆಮಾಕ್ರಟಿಕ್ ಅಲೈನ್ಸ್), ಎನ್‌ಪಿಎ (ನ್ಯಾಷನಲ್ ಪ್ರೊಗ್ರೆಸ್ಸಿವ್ ಅಲಯನ್ಸ್) ಐಡಿಎ (ಇಂಡಿಯಾ ಡೆಮಾಕ್ರಟಿಕ್ ಅಲಯನ್ಸ್) ಎಂಬ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಇದನ್ನೂ ಓದಿ: ಪ್ರಧಾನ ಮಂತ್ರಿ ಸ್ಥಾನದ ಮೇಲೆ ಕಾಂಗ್ರೆಸ್‌ಗೆ ಆಸಕ್ತಿಯಿಲ್ಲ: ವಿಪಕ್ಷಗಳ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟನೆ
Advertisement
Advertisement
ಮೈತ್ರಿಕೂಟದ ನಾಯಕತ್ವದ ಬಗ್ಗೆಯೂ ಮಾತುಕತೆ ನಡೆದಿದೆ. ಸೋನಿಯಾ ಗಾಂಧಿ, ಶರದ್ ಪವಾರ್, ನಿತೀಶ್ ಕುಮಾರ್ ಹೆಸರು ಮುಂಚೂಣಿಯಲ್ಲಿ ಚರ್ಚೆಯಲ್ಲಿವೆ. ಅಂತಿಮವಾಗಿ ಮೂರ್ನಾಲ್ಕು ಸುತ್ತಿನ ಸಭೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Advertisement
ಮೊದಲ ದಿನದ ಸಭೆಯು ಅನೌಪಚಾರಿಕವಾಗಿತ್ತು. ಚರ್ಚೆಗಳ ನಂತರ ಭೋಜನ ಕೂಟದ ವ್ಯವಸ್ಥೆ ಮಾಡಲಾಗಿತ್ತು. ಇಂದು ಮಹಾಘಟಬಂಧನ ಮೈತ್ರಿಕೂಟದ ಹೆಸರಿನ ಬಗ್ಗೆ ಚರ್ಚೆಯಾಗಿತ್ತು. ಅಲ್ಲದೇ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
Advertisement
ಒಕ್ಕೂಟದ ಉದ್ದೇಶ ಹಾಗೂ ಗುರಿಗೆ ಸಂಬಂಧಿಸಿ ಸಾಮೂಹಿಕ ಸಂಕಲ್ಪ ಮಾಡಲಾಗಿದೆ. ದ್ವೇಷ ರಾಜಕಾರಣದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯಿಸಲಾಗಿದೆ. ಮಣಿಪುರದ ಗಲಭೆ ವಿಚಾರ ಕೂಡ ಸಾಮೂಹಿಕ ಸಂಕಲ್ಪದ ವೇಳೆ ಪ್ರಸ್ತಾಪವಾಗಿದೆ. ಲೋಕಸಭೆಗೆ ಒಟ್ಟಾಗಿ ಸ್ಪರ್ಧೆ ಮಾಡುವ ನಿರ್ಣಯ ಕೂಡ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮಹಾಘಟಬಂಧನ್ ಸಭೆಗೆ IAS ಅಧಿಕಾರಿಗಳ ಬಳಕೆ ಅತ್ಯಂತ ಕೆಟ್ಟ ಸಂಪ್ರದಾಯ: ಹೆಚ್‍ಡಿಕೆ
ಸೀಟು ಹಂಚಿಕೆಗೆ ಸಂಬಂಧಿಸಿ ರಾಜ್ಯವಾರು ಸಮಿತಿಗಳ ರಚನೆಗೆ ಚರ್ಚೆ ನಡೆದಿದೆ. ಯಾವ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟು ಹಂಚಿಕೆ ಎಂಬ ನಿರ್ಧಾರ ಮಾಡಲು ಪ್ರತ್ಯೇಕ ಸಮಿತಿ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯವಾರು ಸಮಿತಿ ಮಾಡಿ ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚಿಸಲಾಗಿದೆ. ಸಾಮೂಹಿಕ ಸಂಕಲ್ಪಕ್ಕೆ ಸಮ್ಮತಿ ಸೂಚಿಸಿ 26 ಪಕ್ಷಗಳ ನಾಯಕರು ಸಹಿ ಹಾಕಿದ್ದಾರೆ.
ವಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ, ತೃಣಮೂಲ ಕಾಂಗ್ರೆಸ್ ನಾಯಕರಾದ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಓ ಬ್ರೀನ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಡಿ ರಾಜಾ, ಸಿಪಿಐಎಂನ ಸೀತಾರಾಂ ಯೆಚೂರಿ, ಎನ್‌ಸಿಪಿ ನಾಯಕರಾದ ಶರದ್ ಪವಾರ್, ಜಿತೇಂದ್ರ ಆಹ್ವಾದ್, ಸುಪ್ರಿಯಾ ಸುಳೆ, ಜೆಡಿಯು ನಾಯಕರಾದ ನಿತೀಶ್ ಕುಮಾರ್, ಲಲ್ಲನ್ ಸಿಂಗ್, ಸಂಜಯ್ ಝಾ, ಡಿಎಂಕೆ ನಾಯಕರಾದ ಎಂ.ಕೆ. ಸ್ಟಾಲಿನ್, ಟಿಆರ್ ಬಾಲು, ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್, ಭಗವಂತ್ ಮಾನ್, ಜೆಎಂಎಂನ ಹೇಮಂತ್ ಸೊರೇನ್, ಶಿವಸೇನಾದ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವತ್, ಆರ್‌ಜೆಡಿ ನಾಯಕರಾದ ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಮನೋಜ್ ಝಾ, ಸಂಜಯ್ ಯಾದವ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ರಾಮಗೋಪಾಲ್ ಯಾದವ್, ಜಾವೇದ್ ಅಲಿ ಖಾನ್, ಲಾಲ್ ಜಿ ವರ್ಮಾ, ರಾಮ್ ಅಚಲ್ ರಾಜಭರ್, ಆಶಿಶ್ ಯಾದವ್, ಜೆಕೆಎನ್ಸಿಯ ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಸಿಪಿಐಎಂಎಲ್‌ನ ದೀಪಂಕರ್ ಭಟ್ಟಚಾರ್ಯ, ಆರ್‌ಎಲ್‌ಡಿ ಪಕ್ಷದ ಜಯಂತ್ ಸಿಂಗ್ ಚೌಧರಿ, ಐಯುಎಂಎಲ್ ಪಕ್ಷದ ಕೆ.ಎಂ ಕಡೆರ್ ಮೊಹಿದ್ದೀನ್, ಪಿಕೆ ಕುನಾಲಿಕುಟ್ಟಿ, ಕೇರಳ ಕಾಂಗ್ರೆಸ್ (ಮಣಿ) ಜೋಸ್ ಕೆ ಮಣಿ, ಎಂಡಿಎಂಕೆ ಪಕ್ಷದ ತಿರು ವೈಕೋ, ಜಿ ರೇಣುಕಾದೇವಿ, ವಿಸಿಕೆ ಪಕ್ಷದ ತಿರು ತಿರುಮಾವಳನ್, ರವಿಕುಮಾರ್, ಆರ್.ಎಸ್. ಪಿಯ ಎನ್.ಕೆ ಪ್ರೇಮಚಂದ್ರನ್, ಕೇರಳ ಕಾಂಗ್ರೆಸ್‌ನ ಪಿ.ಜೆ ಜೋಸೆಫ್, ಫ್ರಾನ್ಸಿಸ್ ಜಾರ್ಜ್, ಕೆಎಂಡಿಕೆ ಪಕ್ಷದ ತಿರು ಇ ಆರ್ ಈಶ್ವರನ್, ಎಕೆಪಿ ಚಿನ್ನರಾಜ್, ಎಐಎಫ್‌ಬಿ ಪಕ್ಷದ ಜಿ. ದೇವರಾಜನ್ ಪಾಲ್ಗೊಂಡಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ನಡೀತಿರೋದು ಕಡು ಭ್ರಷ್ಟರ ಸಮ್ಮೇಳನ, ಹೆಚ್ಚು ಭ್ರಷ್ಟರಿಗೆ ಹೆಚ್ಚು ಗೌರವ – ಮಹಾಘಟಬಂಧನ್ ವಿರುದ್ಧ ಮೋದಿ ವಾಗ್ದಾಳಿ
ಮಹಾಘಟಬಂಧನ್‌ನಲ್ಲಿ ಪಾಲ್ಗೊಂಡಿರುವ ರಾಜಕೀಯ ಪಕ್ಷಗಳು
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿಯು, ಆರ್‌ಜೆಡಿ, ಜೆಎಂಎಂ, ಎನ್‌ಸಿಪಿ, ಶಿವಸೇನಾ – ಉದ್ಧವ್ ಠಾಕ್ರೆ ಬಣ, ಎಸ್‌ಪಿ, ರಾಷ್ಟ್ರೀಯ ಲೋಕದಳ, ಅಪನಾ ದಳ್, ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ(ಎಮ್), ಸಿಪಿಐ, ಸಿಪಿಐ(ಎಂಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ), ಕೆಎಂಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ, ಎಂಎಂಕೆ (ಮಣಿತನೆಯ ಮಕ್ಕಳ್ ಕಚ್ಚಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳ ಕಾಂಗ್ರೆಸ್ – ಮಣಿ, ಕೇರಳ ಕಾಂಗ್ರೆಸ್ – ಜೋಸೆಫ್
Web Stories