ಬಾಲಿವುಡ್ (Bollywood) ನಟ ಟೈಗರ್ ಶ್ರಾಫ್ ನಟನೆಯ ‘ಲವ್ ಸ್ಟಿರಿಯೊ ಎಗೇನ್’ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಟೈಗರ್ ಶ್ರಾಫ್ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಶರ್ಟಲೆಸ್ ಬಾಡಿಯಲ್ಲಿ ಅವರು ರೊಚ್ಚಿಗೆಬ್ಬಿಸುತ್ತಾರೆ. ಜೊತೆಗೆ ನಟಿ ಜಹ್ರಾ ಖಾನ್ ಇರುವುದರಿಂದ ಟೈಗರ್ ಇನ್ನಷ್ಟು ಮತ್ತಷ್ಟು ರೊಮ್ಯಾಂಟಿಕ್ ಆಗಿ ಕಂಡಿದ್ದಾರೆ. ಹಾಗಾಗಿಯೇ ಮಾಜಿ ಗೆಳೆತಿ ದಿಶಾ (Disha Patani) ಹಾಡಿ ಹೊಗಳಿದ್ದಾರೆ.
Advertisement
ಸಿನಿಮಾದ ಹಾಡೊಂದನ್ನು ಶೇರ್ ಮಾಡಿಕೊಂಡಿರುವ ದಿಶಾ ಪಟಾನಿ, ‘ನೀವು ಮಾಡಲು ಸಾಧ್ಯವಾಗದೇ ಇರುವುದು ಯಾವುದಾದರೂ ಇದೆಯಾ ಟೈಗರ್ ಶ್ರಾಫ್. ನನಗೆ ನಿಮ್ಮ ಧ್ವನಿ ಮತ್ತು ಆ ನಿನ್ನ ತೀಕ್ಷ್ಣ ನೋಟ ನನಗಿಷ್ಟ’ ಎಂದು ಬರೆದುಕೊಂಡಿದ್ದಾರೆ. ಅದನ್ನು ಟೈಗರ್ ಗೆ ಟ್ಯಾಗ್ ಕೂಡ ಮಾಡಿದ್ದಾರೆ.
Advertisement
Advertisement
‘ಭಾಘಿ 2’ ಮತ್ತು ‘ಭಾಘಿ 3’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ಟೈಗರ್ ಶ್ರಾಫ್ (Tiger Shroff)- ದಿಶಾ ಪಟಾನಿ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಸ್ಟಾರ್ ಕಿಡ್ಸ್ ಮತ್ತು ಸ್ಟಾರ್ ನಟ-ನಟಿಯರು ಆಗಿರೋ ಕಾರಣ ಈ ಜೋಡಿ ಮದುವೆ ಮಾಡಿಕೊಳ್ತಾರಾ ಎಂಬ ಬಗ್ಗೆ ಕುತೂಹಲವಿತ್ತು. ಆದರೆ ಕಳೆದ ವರ್ಷ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ರು. ಬಳಿಕ ಇಬ್ಬರೂ ಎಲ್ಲೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಬ್ರೇಕಪ್ ಸುದ್ದಿಗೆ ಇದು ಮತ್ತಷ್ಟು ಪುಷ್ಟಿ ನೀಡಿತ್ತು. ಇದನ್ನೂ ಓದಿ:ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ
Advertisement
ನಂತರ ಅಚ್ಚರಿ ಎನ್ನುವಂತೆ ಮುಂಬೈ ಟು ದೆಹಲಿಗೆ ಬರುವಾಗ ಒಟ್ಟಿಗೆ ಇಬ್ಬರೂ ಟ್ರಾವೆಲ್ ಮಾಡಿದ್ದರು. ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಜೊತೆಯಾಗಿ ಕುಳಿತು ಮಾತನಾಡುತ್ತಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಈವೆಂಟ್ನಲ್ಲಿ ದಿಶಾ ಮತ್ತು ಟೈಗರ್ ಶ್ರಾಫ್ ಇಬ್ಬರು ಅಕ್ಕ-ಪಕ್ಕದಲ್ಲಿ ಕುಳಿತಿದ್ದರು. ಇವರ ಜೊತೆ ಟೈಗರ್ ಶ್ರಾಫ್ ಸಹೋದರಿ ಕೃಷ್ಣಾ ಶ್ರಾಫ್, ತಾಯಿ ಆಯೇಶಾ ಶ್ರಾಫ್ ಕೂಡ ದಿಶಾ ಪಕ್ಕದಲ್ಲಿ ಕುಳಿತಿದ್ದರು. ಹಾಗಾಗಿ ಲವ್ ಬ್ರೇಕ್ ಆಗಿಲ್ಲ ಎಂದು ಹೇಳಲಾಗಿತ್ತು. ಈಗ ಟೈಗರ್ ನನ್ನು ದಿಶಾ ಹಾಡಿ ಹೊಗಳಿ ಮತ್ತೆ ಲವ್ ಕಹಾನಿಯನ್ನು ಜೀವಂತವಾಗಿರಿಸಿದ್ದಾರೆ.
ಸದ್ಯ ಟೈಗರ್ ಶ್ರಾಫ್- ದಿಶಾ ಪಟಾನಿ ಬೇರೆ ಬೇರೇ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ.? ಜೊತೆಗೆ ಬಾಲಿವುಡ್ನ ಸಾಲು ಸಾಲು ಜೋಡಿಗಳು ಹಸೆಮಣೆ ಏರಿವೆ. ಅದೇ ಸಾಲಿಗೆ ಈ ಜೋಡಿ ಸೇರುತ್ತಾ? ಮದುವೆ ಬಗ್ಗೆ ಸ್ವೀಟ್ ನ್ಯೂಸ್ ಕೊಡುತ್ತಾರಾ ಕಾದು ನೋಡಬೇಕು.
Web Stories