ಬೆಂಗಳೂರು: ನಾನೇನು ಯಾವುದೇ ಚೆಕ್ ನಲ್ಲಿ ತೆಗೆದುಕೊಂಡಿಲ್ಲ. ಆಗಲೇ ಯಡಿಯೂರಪ್ಪಗೆ ಕನಸು ಬೀಳುತ್ತಿದೆ ಬೇಕಾದರೆ ಎಸಿಬಿಗೆ ದೂರು ಕೊಡಲಿ ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಯಡಿಯೂರಪ್ಪನವರ ಜಲಸಂಪನ್ಮೂಲ ಇಲಾಖೆ ಬಿಲ್ ಪಾವತಿಗೆ ಕಮೀಷನ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇಲಾಖೆಯಲ್ಲಿ ಇನ್ನೂ ಕಣ್ಣೇ ಬಿಟ್ಟಿಲ್ಲ, ಬಿಲ್ ಕ್ಲಿಯರ್ ಮಾಡಲು ಕೈ ಹಾಕಿಲ್ಲ. ಆಗಲೇ ಯಡಿಯೂರಪ್ಪಗೆ ಕನಸು ಬೀಳುತ್ತಿದೆ. ಏನೇನು ಚಿತ್ರಹಿಂಸೆ ನೀಡಲು ಮುಂದಾಗಿದ್ದಾರೆ, ಏನು ಖುಷಿ ನೀಡುತ್ತದೆ ಎಲ್ಲಾ ಮಾಡಲಿ. ನಾನೇನು ಯಾವುದೇ ಚೆಕ್ ನಲ್ಲಿ ತೆಗೆದುಕೊಂಡಿಲ್ಲ, ಅವರ ಬಳಿ ದಾಖಲೆ ಇದ್ದರೆ ಬೇಕಾದರೆ ದೂರು ನೀಡಲಿ. ಅದನ್ನ ಬೇಕಾದರೆ ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಗೆ, ಎಸಿಬಿಗೆ ದೂರು ಕೊಡಲಿ ಎಂದು ಸವಾಲು ಎಸೆದರು.
Advertisement
Advertisement
ನಗರದ ಕುಮಾರಕೃಪಾದಲ್ಲಿ ಸಮ್ಮಿಶ್ರ ಸರ್ಕಾರದ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು. ಸಭೆಯಲ್ಲಿ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಆರ್ ವಿ ದೇಶಪಾಂಡೆ, ಹೆಚ್ ಡಿ ರೇವಣ್ಣ, ಬಂಡೆಪ್ಪ ಕಾಂಶಪೂರ್ ಭಾಗಿಯಾಗಿದ್ದರು.
Advertisement
ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ್ ದಲ್ಲಿ ರಾಜ್ಯ ಬಿಜೆಪಿಯ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಮಾತನಾಡಿ, ಹಿಂದಿನ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಬಿಲ್ ಗಳನ್ನು ಪಾವತಿ ಮಾಡಬಾರದು ಎಂದು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮೌಖಿಕ ಆದೇಶ ನೀಡಿದ್ದಾರಂತೆ. ಅಲ್ಲದೇ ಹಿಂದಿನ ಸಚಿವರಿಗೆ ಕಮಿಷನ್ ಕೊಟ್ಟಿದ್ದರು ಕೂಡಾ ಈಗ ನಮ್ಮ ಪಾಲು ಕೊಡಿ ಎಂದು ಅವರು ಕೇಳಿರುವ ಬಗ್ಗೆ ರಾಜ್ಯಾದ್ಯಂತ ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದರು.