ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆಗೆ (Upper Bhadra Project) ಅನುಮತಿ ಕೊಡಿ ಅಂತ ನಾನೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಅಂತ ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ ದೇವೇಗೌಡ (HD Devegowda) ತಿರುಗೇಟು ನೀಡಿದ್ದಾರೆ.
ಬಿಜೆಪಿ-ಜೆಡಿಎಸ್ (BJP-JDS) ಸಂಸದರು ರಾಜ್ಯದ ಪರವಾಗಿ, ಅನುದಾನ ಮತ್ತು ನೀರಾವರಿ ಯೋಜನೆ ಬಗ್ಗೆ ಮಾತಾಡ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರದವರು ಅನೇಕ ಯೋಜನೆ ಮಾಡಿದ್ದೀರಿ. ನೀರಾವರಿಗೆ ಹಣ ಇಡಲಿಲ್ಲ. ಮಾಡಿದ ಯೋಜನೆಗೆ ಹಣ ಇಡಲಿಲ್ಲ. ಅದರ ಬಗ್ಗೆ ನಾನು ಯಾಕೆ ಚರ್ಚೆ ಮಾಡಲಿ. ಅವರು ಏನ್ ಮಾಡ್ತಾರೋ ಮಾಡಲಿ ಎಂದರು.
ನಾನು ಭದ್ರಾ ಮೇಲ್ದಂಡೆಗೆ ಅನುಮತಿ ಕೊಡಿ ಅಂತ ನೀರಾವರಿ ಮಂತ್ರಿಗೆ ಪತ್ರ ಬರೆದಿದ್ದೇನೆ. ಭದ್ರಾ ಯೋಜನೆ ಬಗ್ಗೆಯೂ ನಾನು ಕುಳಿತುಕೊಳ್ಳೊಲ್ಲ. ಅದರ ಬಗ್ಗೆ ಹೋರಾಟ ಮಾಡ್ತೀನಿ ಅಂತ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ
ಮಹದಾಯಿ ಯೋಜನೆ ವಿಚಾರ ಸುಪ್ರೀಂನಲ್ಲಿದ್ದು ಯೋಜನೆಗೆ ಗೋವಾ ವಿರೋಧ ಮಾಡಿದೆ. ಗೋವಾ ಸರ್ಕಾರ ಸುಪ್ರೀಂಕೋರ್ಟ್ ಅರ್ಜಿ ಹಾಕಿದೆ. ನಮ್ಮ ಸರ್ಕಾರ ಅವರು ಪ್ರತಿಯಾಗಿ ನೀರು ಬೇಕು ಅಂತ ಅರ್ಜಿ ಹಾಕಿದೆ. ಅದು ಸುಪ್ರೀಂಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಅದಕ್ಕೂ ನಾನು ಹೋರಾಟ ಮಾಡ್ತೀನಿ. ನೀರಾವರಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನೀರಾವರಿ ಯೋಜನೆಗಳಿಗಾಗಿ ನಾನು ಸದಾ ಹೋರಾಟ ಮಾಡೋಕೆ ಸಿದ್ದ ಅಂತ ಕಾಂಗ್ರೆಸ್ ನಾಯಕರಿಗೆ ದೇವೇಗೌಡರು ತಿರುಗೇಟು ನೀಡಿದರು.