ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಗೆಲುವಿನ ನಗೆ ಬೀರಿದ್ದು, ಇದೀಗ ಸಿಎಂ ಕುರ್ಚಿಗಾಗಿ ಭಾರೀ ಫೈಟ್ ನಡೆಯುತ್ತಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹೊಟ್ಟೆಯಲ್ಲಿ ಸಮಸ್ಯೆಯಿದೆ. ಗ್ಯಾಸ್ಟಿಕ್ ಪ್ರಾಬ್ಲಂ (Gastric Problem) ಆಗಿದೆ. ವೈದ್ಯರು ಬರುತ್ತಾರೆ, ರೆಸ್ಟ್ ಮಾಡುವುದಾಗಿ ತಿಳಿಸಿದರು. ಈ ಮೂಲಕ ದೆಹಲಿ ಪ್ರವಾಸ ರದ್ದುಗೊಳಿಸುವುದಾಗಿ ಪರೋಕ್ಷವಾಗಿ ಡಿಕೆಶಿ (DK Shivakumar) ಹೇಳಿದರು.
Advertisement
Advertisement
ನಾನು ಪೂಜೆ ಪುರಸ್ಕಾರ ಮಾಡಬೇಕಿದೆ. ನನ್ನ ಜೊತೆ ಯಾವ ಶಾಸಕರು ಇಲ್ಲ. ನನಗೆ ಯಾರ ಬೆಂಬಲವೂ ಬೇಡ. ನನ್ನ ಬಂಡೆ ಅಂತಾ ಕರೆದಿದ್ದೀರಾ. ಬಂಡೆಯನ್ನು ಆಕೃತಿಯಾಗಿ ಆದ್ರೂ ಮಾಡಿ ಇಲ್ಲ ವಿಧಾನಸಭೆಗೆ ಚಪ್ಪಡಿಯಾದ್ರೂ ಮಾಡಿಕೊಳ್ಳಿ ಅಂತಾ ಹೇಳಿದ್ದೆ. ಕಂಬವಾದ್ರೂ ಮಾಡಿ, ಮರಳುಗಂಬವಾದ್ರೂ ಮಾಡಿ. ನನ್ನ ಹತ್ರ ನಂಬರ್ ಇಲ್ಲ. ನಾನು ಪಕ್ಷ ಪೂಜೆ ಮಾಡ್ತೇನೆ. ವ್ಯಕ್ತಿ ಪೂಜೆಯಲ್ಲ ಎಂದರು. ಇದನ್ನೂ ಓದಿ: ಡಿಕೆಶಿಯೇ ಸಿಎಂ ಆಗಬೇಕು- ಓಲಾ, ಊಬರ್ ಚಾಲಕರ ಸಂಘಟನೆ ಆಗ್ರಹ
Advertisement
ಕೊಟ್ರೇ ಸಿಎಂ ಸ್ಥಾನ ಕೊಡಿ ಇಲ್ಲದಿದ್ರೇ ಬೇರೆ ಸ್ಥಾನ ಬೇಡ ಅನ್ನೋ ಚರ್ಚೆಯ ಪ್ರಶ್ನೇಗೆ ಡಿಕೆಶಿ ಪ್ರತಿಕ್ರಿಯಿಸಿ, ಯಾವ ಪ್ರಶ್ನೆಗೂ ಉತ್ತರಕೊಡಲ್ಲ. ನನಗೆ ತಾಳ್ಮೆ, ಸಮಯಪ್ರಜ್ಞೆ ಹೊರಾಟದ ಪ್ರಜ್ಞೆಯಿದೆ. ಪಾಂಡವರ ಸೂತ್ರವನ್ನು ಅನುಸರಿಸತ್ತೇನೆ ಅಂತಾ ಹೇಳಿದ್ದೆ. ನನ್ನಲ್ಲಿರೋ ಎಲ್ಲಾ ತಂತ್ರಗಾರಿಕೆ ಬಳಸಿ ಪಕ್ಷವನ್ನು ಅಧಿಕಾರಕ್ಕೆ ತರಲಾಗಿದೆ, ಸಾಕಿಷ್ಟು ನನಗೆ ಎಂದು ತಿಳಿಸಿದರು.