ಮೈಸೂರು: ನಾನು ಒಂದು ಕೋಟಿ ರೂ. ಖರ್ಚು ಮಾಡಿ ಉಪಾಧ್ಯಕ್ಷ ಆಗಿದ್ದೀನಿ. ನನ್ನ ಮಾತು ಇಲ್ಲಿ ಫೈನಲ್. ನನ್ನ ಕಡೆಯವರು ಟೆಂಡರ್ ಪಡೆಯದೆ ಇಲ್ಲಿ ಹೋಟೆಲ್ ನಡೆಸಬಹುದು. ಅದನ್ನು ಪ್ರಶ್ನೆ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದು ಸಿಎಂ ಆಪ್ತ, ಮೈಸೂರಿನ ಎಪಿಎಂಸಿ ಉಪಾಧ್ಯಕ್ಷ ಬಸವರಾಜ್ ಹೋಟೆಲ್ ಮಾಲೀಕರೊಬ್ಬರಿಗೆ ಅವಾಜ್ ಹಾಕಿದ್ದಾರೆ.
ಸೋಮು ಎಂಬವರು ಎಪಿಎಂಸಿ ಆವರಣದಲ್ಲಿ ಕಾನೂನಾತ್ಮಕವಾಗಿ ಟೆಂಡರ್ ಪಡೆದು ಹೋಟೆಲ್ ನಡೆಸುತ್ತಿದ್ದಾರೆ. ಹೋಟೆಲ್ ವಿಚಾರವಾಗಿ ಬಸವರಾಜ್ ಅವರು ಸೋಮು ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಬಸವರಾಜ್ ಹಾಕಿರುವ ಬೆದರಿಕೆಯನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಲಾಗಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಸವರಾಜ್, ನಾನು ಅವಾಚ್ಯ ಶಬ್ಧದಿಂದ ಬೈದಿದ್ದು ನಿಜ. ಸೋಮು, ಎಪಿಎಂಸಿಯ ಆವರಣದಲ್ಲಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದ. ಹೀಗಾಗಿ ಆತನಿಗೆ ಬೈದಿದ್ದೇನೆ. ಆದರೆ ಆತ ಮಾಡುತ್ತಿರುವ ಬೇರೆ ಆರೋಪಗಳೆಲ್ಲಾ ಸುಳ್ಳು. ನನ್ನ ಮೇಲಿನ ಆರೋಪ ನಿಜವಾದರೆ ನಾನು ಆ ಕ್ಷಣವೇ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಸಿಎಂ ಆಪ್ತರಾಗಿರೋ ಮರೀಗೌಡ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಬೆದರಿಕೆ ಹಾಕುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೈಲಿಗೆ ಹೋಗಿದ್ದರು. ಈಗ ಸಿಎಂ ಬೆಂಬಲಿಗರಾಗಿರುವ ಬಸವರಾಜ್ ಗೂಂಡಾಗಿರಿ ವರ್ತನೆ ತೋರಿದ್ದಾರೆ.