ಬೆಂಗಳೂರು: ಆರೋಪ ಮಾಡಿ ಓಡಿಹೋಗುವ ಬಹಳ ಮಂದಿಯನ್ನು ನಾನು ನೋಡಿದ್ದೇನೆ ಎಂದು ಸಂಸದ ಡಿಕೆ ಸುರೇಶ್ (DK Suresh) ಅವರು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಗೆ (HD Kumaraswamy) ತಿರುಗೇಟು ನೀಡಿದ್ದಾರೆ.
ಬಿಬಿಎಂಪಿ (BBMP) ದಾಖಲೆ ಬಿಡುಗಡೆ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಸದಾಶಿವನಗರದಲ್ಲಿ (Sadashivangar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ (Politics) ಕೆಲಸ ಇಲ್ಲದೇ ಇದ್ದಾಗ ಈ ರೀತಿಯಾಗಿ ಮಾತನಾಡುತ್ತಾರೆ. ಮಾಧ್ಯಮದವರ ಗಮನ ಸೆಳೆಯಲು ಆರೋಪ ಮಾಡುತ್ತಾರೆ. ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳುವ ಸಲುವಾಗಿ ಇದನ್ನೆಲ್ಲಾ ಮಾಡುತ್ತಾರೆ. ಚೆಲುವರಾಯಸ್ವಾಮಿ ದೂರು ಕೊಟ್ಟು ತನಿಖೆಗೆ ಹೇಳಿದ್ದಾರೆ. ಸರ್ಕಾರದ ಗಮನ ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಅಕ್ಕಿ ವಿಚಾರದಲ್ಲಿ ಬಾಯಿಬಾಯಿ ಬಡಿದುಕೊಂಡರು. ಜನರಿಗೆ ಬಸ್, ಕರೆಂಟ್ ಎಲ್ಲಾ ಕೊಟ್ಟಿದ್ದೇವೆ. ಪಾಪ ಅವರು ಇನ್ನೇನು ಮಾಡಬೇಕು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ: ಬೊಮ್ಮಾಯಿ ಆಗ್ರಹ
Advertisement
Advertisement
ಎರಡೂವರೆ ವರ್ಷದಿಂದ ಬಿಲ್ ಬಾಕಿ ಇದೆ. 40% ಕಮಿಷನ್, ಕಳಪೆ ಕಾಮಗಾರಿ ಆರೋಪ ಇದೆ. ಈ ಕುರಿತು ತನಿಖೆ ಮಾಡಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಹಾಗೂ ಡಿಸಿಎಂ ಹೇಳಿದ್ದಾರೆ. ಆರೋಪ ಮಾಡಿದರೆ ಪ್ರಚಾರದಲ್ಲಿ ಇರುತ್ತೇವೆ ಎಂದುಕೊಂಡರೆ ನಾವೇನು ಮಾಡಲಾಗುವುದಿಲ್ಲ. ಕೇವಲ ಪ್ರಚಾರಕ್ಕಾಗಿ ಆರೋಪ ಮಾಡುವುದಲ್ಲ. ಈಗಾಗಲೇ ನಾಲ್ಕು ತಂಡ ರಚನೆ ಮಾಡಲಾಗಿದೆ. ಸಣ್ಣ ಕಂಟ್ರಾಕ್ಟರ್‌ಗಳಿಗೆ ತೊಂದರೆ ಆಗೋದು ಬೇಡ ಎಂದು ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ದೇವರಾಜ ಅರಸು ಉತ್ಸವವನ್ನು ಸರ್ಕಾರ ಕೈಬಿಟ್ಟಿದೆ: ಕೋಟಾ ಶ್ರೀನಿವಾಸ ಪೂಜಾರಿ
Advertisement
ಲೋಕಸಭೆ ಚುನಾವಣೆ ಬಗ್ಗೆ ವರಿಷ್ಠರು ಸಭೆ ನಡೆಸಿದ್ದಾರೆ. ರಾಜ್ಯದ ಎಲ್ಲಾ ಮಂತ್ರಿಗಳು ಹಾಗೂ ನಾಯಕರಿಗೆ ತಯಾರಿ ಮಾಡಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಮುಂದೆ ಸರ್ಕಾರ ಯಾವ ರೀತಿ ನಡೆದುಕೊಂಡು ಹೋಗಬೇಕು, ಅಭ್ಯರ್ಥಿ ಆಯ್ಕೆ ಮಾನದಂಡ ಹೇಗಿರಬೇಕು ಎಂದು ಹೇಳಿದ್ದಾರೆ. ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಎಲ್ಲರ ಮಾತು ಮುಗಿಯಲಿ, ನಮಗೆ ಉತ್ತರ ನೀಡಲು ಸಾಕಷ್ಟು ಸಮಯವಿದೆ: ಡಿಕೆಶಿ
Advertisement
ಆಪರೇಶನ್ ಹಸ್ತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಪ್ರಾಥಮಿಕವಾಗಿ ನನಗೆ ಯಾವ ವಿಚಾರವೂ ಗೊತ್ತಿಲ್ಲ. ನಾನು ಕ್ಷೇತ್ರದ ಕಡೆ ಹೆಚ್ಚು ಒತ್ತು ಕೊಡುತ್ತಿದ್ದೇನೆ. ಸೇರಿಸಿಕೊಳ್ಳಬೇಕಾ? ಬೇಡ್ವಾ? ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: PM ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ- 5% ಬಡ್ಡಿಯಲ್ಲಿ ಸಾಲ
Web Stories