ಬೆಂಗಳೂರು: ನಾನು ಮುಂಚೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ರೂ ಕ್ರಮ ತಗೋತೀವಿ ಅಂತ ಹೀಗಾಗಿ ಸಾಕ್ಷಾ÷್ಯಧಾರಗಳ ಆಧಾರದಲ್ಲಿ ಅಮೃತ್ ಪೌಲ್ ಬಂಧನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Advertisement
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಂದು ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಎಂ, ನಾನು ಮುಂಚೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ರೂ ಕ್ರಮ ತಗೋತೀವಿ ಅಂತ, ಹಾಗಾಗಿ ಪೌಲ್ ಬಂಧನವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಳಿ ದೇವಿ ಕೈಯಲ್ಲಿ ಸಿಗರೇಟು: ಇದು ಹಿಂದೂಗಳ ದೌರ್ಬಲ್ಯ – ಪ್ರಮೋದ್ ಮುತಾಲಿಕ್ ಕಿಡಿ
Advertisement
ಅಮೃತ್ ಪೌಲ್ ಬಂಧನದಿಂದ ಸರ್ಕಾರಕ್ಕೆ ಮುಖಭಂಗ ಆಗಿಲ್ಲ. ಪ್ರಕರಣದ ತನಿಖೆ ಮಾಡಿಸಿದವರು ನಾವು. ಬೇರೆ ಸರ್ಕಾರ ಆಗಿದ್ರೆ ತನಿಖೆ ಆಗುತ್ತಿರಲಿಲ್ಲ. ಹಿಂದಿನ ಸರ್ಕಾರ ಇದ್ದಾಗ ಇದೇ ಪೊಲೀಸ್ ಅಕ್ರಮ ಪ್ರಕರಣದಲ್ಲಿ ತನಿಖೆ ಮಾಡದೇ ಮುಚ್ಚಿ ಹಾಕಿದ್ರು. ನಾವು ಇರುವುದರಿಂದ ನಿಷ್ಪಕ್ಷಪಾತವಾಗಿ ತನಿಖೆ ಮಾಡ್ತಿದ್ದೀವಿ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಸಿಐಡಿಗೆ ತನಿಖೆಗೆ ಸರ್ಕಾರ ಮುಕ್ತ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಸಾಕ್ಷ್ಯಾಧಾರಗಳಿಂದ ಅಮೃತ್ ಪೌಲ್ ಬಂಧನವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ಕಂಪ್ಯೂಟರ್ ಕಳವು- ತಾಕತ್ತಿದ್ರೆ ನಮ್ಮನ್ನ ಹಿಡೀರಿ ಎಂದು ನಂಬರ್ ಬರೆದಿಟ್ಟ ಕಳ್ಳರು
ಏನಿದು ಅಮೃತ್ ಪೌಲ್ ಪ್ರಕರಣ?
ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಇಂದು ಸಿಐಡಿ ಬಂಧಿಸಿದೆ. 25 ಅಭ್ಯರ್ಥಿಗಳ ಜೊತೆ 30 ಲಕ್ಷ ರೂ. ಡೀಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಈಗ ಮತ್ತಷ್ಟು ವಿಚಾರಣೆ ನಡೆಸಲು ಬಂಧಿಸಿದೆ. 545 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಮೃತ್ ಪೌಲ್ ಅವರಿಗೆ ದೂರುಗಳು ಬಂದಿದ್ದವು. ಆದರೆ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿತ್ತು. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಅಮೃತ್ ಪೌಲ್ ಅವರ ವರ್ಗಾವಣೆಗೆ ಪೊಲೀಸ್ ವಲಯದಲ್ಲಿಯೇ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ವರ್ಗಾಯಿಸಲಾಗಿತ್ತು.