ನನ್ನ ಸಾವನ್ನ ಎದುರಿಸಲು ಪತ್ನಿಯನ್ನು ಸಿದ್ಧಗೊಳಿಸಿದ್ದೇನೆ- ಪೊಸಾನಿ ಕೃಷ್ಣ ಮುರಳಿ

Public TV
1 Min Read
POSANI KRISHNA MURALI 2

ಟ- ರಾಜಕಾರಣಿ ಪೊಸಾನಿ ಕೃಷ್ಣ ಮುರಳಿ (Posani Krishna Murali) ಸದಾ ವಿವಾದಗಳಿಂದಲೇ ಹೆಚ್ಚೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ತನ್ನ ಸಾವಿನ ಬಗ್ಗೆಯೇ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ. ನನ್ನ ಸಾವನ್ನು ಎದುರಿಸಲು ಪತ್ನಿಯನ್ನು ಸಿದ್ಧಗೊಳಿಸಿರೋದಾಗಿ ಸಂದರ್ಶನದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ. ನಟನ ಮಾತು ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ.

POSANI KRISHNA MURALI

ತೆಲುಗು (Telagu) ಚಿತ್ರರಂಗದ ಹಾಸ್ಯ ನಟ ಪೊಸಾನಿ ಕೃಷ್ಣ ಮುರಳಿ ಹೀಗೆ ಉಲ್ಟಾ ಮಾತಾಡೋದು ಹೊಸತೇನಲ್ಲ. ನನ್ನ ಸಾವಿಗೆ ನಾನು ಈಗಾಗಲೇ ನನ್ನ ಹೆಂಡತಿಯನ್ನು ಸಿದ್ಧಪಡಿಸಿದ್ದೇನೆ. ಜನರು ಅಳುವುದು ಮತ್ತು ನನ್ನ ಬಗ್ಗೆ ಸಹಾನುಭೂತಿ ತೋರಿಸುವುದು ನನಗೆ ಇಷ್ಟವಿಲ್ಲ. ನನ್ನ ಮೃತದೇಹ ಮುಂದೆ ಅಳಬೇಡ ಎಂದು ಹೇಳಿದ್ದೇನೆ. ಇಷ್ಟೇ ಅಲ್ಲ ನನ್ನ ಮೃತದೇಹವನ್ನು ಚಿತ್ರರಂಗದ ಮಂದಿಗೆ ತೋರಿಸಬೇಡ ಅಂತಲೂ ಹೇಳಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

POSANI KRISHNA MURALI 1

ಇದೇ ವೇಳೆ ತನ್ನ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ಕುಟುಂಬ ಪಾಲನೆಗಾಗಿ ಪತ್ನಿಯ ಹೆಸರಲ್ಲಿ 50 ಕೋಟಿ ರೂ. ಎತ್ತಿಟ್ಟಿದ್ದೇನೆ ಎಂದು ಹೇಳಿದ್ದಾರೆ. ನಾನು ಸತ್ತರೆ, ನನ್ನ ಕುಟುಂಬ ಆರ್ಥಿಕ ಸಂಕಷ್ಟವನ್ನು ಎಂದು ಎದುರಿಸುವುದಿಲ್ಲ. ಕೇವಲ ಬಾಡಿಗೆಯಿಂದಲೇ ಪ್ರತಿ ತಿಂಗಳು 8 ಲಕ್ಷ ರೂ. ಹಣ ಸಿಗುವಂತೆ ಮಾಡಿದ್ದೇನೆ ಎಂದು ನಟ ಮಾತನಾಡಿದ್ದಾರೆ. ನೆಚ್ಚಿನ ಪೊಸಾನಿ ಕೃಷ್ಣ ಮುರಳಿ ಹೀಗ್ಯಾಕೆ ಮಾತನಾಡಿದ್ರು ಎಂದು ತಲೆಕೆಡಿಸಿಕೊಂಡಿದ್ದಾರೆ.

ಸೌತ್ ಸಿನಿಮಾಗಳ ಜೊತೆ ರಾಜಕೀಯದಲ್ಲೂ ಪೊಸಾನಿ ಕೃಷ್ಣ ಮುರಳಿ ಆ್ಯಕ್ಟಿವ್ ಆಗಿದ್ದಾರೆ. ಆಂಧ್ರ ಪ್ರದೇಶ ಫಿಲ್ಮ್ಂ ಡೆವಲಪ್‌ಮೆಂಟ್ ಕಾರ್ಪೋರೇಷನ್ ಚೇರ್‌ಮೆನ್ ಆಗಿದ್ದಾರೆ. ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.

Share This Article