– ಕೋಲಾರ ಡಿಸಿಸಿ ಬ್ಯಾಂಕ್ ಹಗರಣ ಆಗಿದೆ
ಹುಬ್ಬಳ್ಳಿ: ನಾನು ಅಧಿಕಾರ ಮದದಿಂದ ಮಾತನಾಡಿಲ್ಲ, ಕೋಲಾರ ಡಿಸಿಸಿ ಬ್ಯಾಂಕ್ ಹಗರಣ ಆಗಿದೆ. ಅದಕ್ಕಾಗಿ ಜವಾಬ್ದಾರಿಯಿಂದ ಪ್ರಶ್ನೆ ಮಾಡಿದ್ದೇನೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು. ಇದನ್ನೂ ಓದಿ: ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಇದ್ದಾಗ ಬ್ಯಾಂಕ್ ಬಗ್ಗೆ ದೂರನ್ನ ನೀಡಲಾಗಿತ್ತು. ಆಗಲೇ ಅವರು ತನಿಖೆ ಮಾಡಬಹುದಿತ್ತು. ಈಗಲೂ ಅವರು ಭ್ರಷ್ಟಾಚಾರ ಪರವಾಗಿದ್ದಾರಾ? ಎಂದು ಪ್ರಶ್ನೆ ಮಾಡಿದರು. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
ಇದೇ ವೇಳೆ 100 ಕೋಟಿ ವ್ಯಾಕ್ಸಿನ್ ಹಾಕಿರುವ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಕೋವಿಡ್ ಸಾವಿನ ಬಗ್ಗೆ ರಾಜಕಾರಣ ಮಾಡುತ್ತಾರೆ. ನಾವು ಒಂದೇ ಮನೊಭಾವನೆಯಿಂದ ಕೋವಿಡ್ ಎದುರಿಸಲು ದೀಪ ಹಚ್ಚಿ, ಚಪ್ಪಾಳೆ ತಟ್ಟುವ ಕಾರ್ಯಕ್ರಮ ಮಾಡಿದ್ದೇವೆ ಎಂದರು. ಚಪ್ಪಾಳೆ ತಟ್ಟುವುದರಿಂದ ಕೋವಿಡ್ ಹೋಗಲ್ಲ. ಆದರೆ ಅದಕ್ಕಾಗಿ ಕೆಲಸ ಮಾಡಿದವರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದೇವೆ. ನಮ್ಮ ರಾಜ್ಯ 83 ರಷ್ಟು ಲಸಿಕೆ ನೀಡಿದ್ದು, ದೇಶದಲ್ಲೇ ನಾವು 3 ನೇ ಸ್ಥಾನದಲ್ಲಿ ಇದ್ದೇವೆ. ನಮ್ಮ ದೇಶ ನೂರು ಕೋಟಿ ವ್ಯಾಕ್ಸಿನ್ ನೀಡಿದ್ದರೆ, ಅಮೆರಿಕಾ 40 ಕೋಟಿ ಬ್ರೆಜಿಲ್ 24 ಕೋಟಿ ಲಸಿಕೆ ಕೊಟ್ಟಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ