ಬೆಂಗಳೂರು: ಹಿಂದೂ ಧರ್ಮದ (Hindu Religion) ವಿರುದ್ಧ ಅವಹೇಳನಕಾರಿಯಾಗಿ ನಾನು ಮಾತಾಡಿಲ್ಲ. ಅದನ್ನ ಬೇರೆ ರೀತಿ ಅರ್ಥೈಸುವ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. ನಾವೆಲ್ಲ ಹಿಂದೂಗಳು ಎಂದು ಗೇಹ ಸಚಿವ ಪರಮೇಶ್ವರ್ (G. Parameshwar) ಸ್ಪಷ್ಟಣೆ ನೀಡಿದ್ದಾರೆ.
ಹಿಂದೂ ಧರ್ಮ ಬಗ್ಗೆ ವಿವಾದಿತ ಹೇಳಿಕೆ ಸಂಬಂಧ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಎದ್ದರೆ ಗಣಪತಿಯನ್ನ ನೆನಪು ಮಾಡಿಕೊಳ್ತೀವಿ. ನಾನು ಬೆಳೆಗ್ಗೆ ಎದ್ದ ಕೂಡಲೇ ಲಕ್ಷ್ಮಿ ಶ್ಲೋಕ ಹೇಳುತ್ತೇನೆ. ಮಲಗೋವಾಗ ಹನುಮನ ಶ್ಲೋಕ ಹೇಳ್ತೀನಿ ಎಂದು ಎರಡೂ ಶ್ಲೋಕ ಹೇಳಿದರು.
Advertisement
Advertisement
ಬಿಜೆಪಿಯವರಿಗೆ (BJP) ಈ ಶ್ಲೋಕಗಳು ಬರೊಲ್ಲ. ಅವರಿಗೆ ಕೇಳಿ ನೋಡಿ ಇದನ್ನ ಹೇಳ್ತಾರಾ ಅಂತ ಬಿಜೆಪಿ ನಾಯಕರಿಗೆ ಪರಮೇಶ್ವರ್ ಸವಾಲೆಸೆದರು. ಅದಕ್ಕೆ ನಾನು ಹೇಳಿದ್ದು ಕೃಷ್ಣ ಹುಟ್ಟಿದ ದಿನ ಧರ್ಮ ಅಧರ್ಮ ಆದಾಗ, ನೀತಿ, ಅನೀತಿ ಆದಾಗ ಕೃಷ್ಣ ಮತ್ತೆ ಹುಟ್ಟಿ ಬರುತ್ತೇನೆ ಅಂತ ಹೇಳುತ್ತಾನೆ. ಇದನ್ನೇ ನಾನು ಹೇಳಿದ್ದು ಯಧಾ ಯಧಾಹೀ ಧರ್ಮಸ್ಯ ಅಂತ. ಹಿಂದೂ ಧರ್ಮ ಯಾವಾಗ ಹುಟ್ಟಿತು ಅಂತ ನಾನು ಪ್ರಶ್ನೆ ಮಾಡಿಲ್ಲ. ಪದೇ ಪದೇ ನಾನು ಅದನ್ನೇ ಹೇಳಲು ಉದ್ಯೋಗ ಅಲ್ಲ ಎಂದರು. ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್
Advertisement
ನಾನು ಹೇಳಿದ್ದು ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಈ ದೇಶದಲ್ಲಿ ಹುಟ್ಟಿದ ಧರ್ಮದ ಬಗ್ಗೆ ಸ್ಟಡಿ ಮಾಡಿದ್ರು. ಅದನ್ನ ನಾನು ಹೇಳಿದ್ದು. ಅವರು ಹೇಳಿದ್ದನ್ನ ನಾನು ಹೇಳಿದ್ದು. ಅವರ ಪ್ರಕಾರ ಜೈನ, ಮುಸ್ಲಿಂ ಧರ್ಮ ಸ್ಥಾಪನೆ ಮಾಡಿದವರು ಇದ್ದರು. ಆದರೆ ಹಿಂದೂ ಧರ್ಮಕ್ಕೆ ಇಲ್ಲ ಅಂತ ಹೇಳಿದ್ದರು. ಅಷ್ಟು ಹೇಳಿದ್ದಕ್ಕೆ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಾನೇನು ಅವಹೇಳನಕಾರಿಯಾಗಿ ಮಾತಾಡಿಲ್ಲ. ಹಿಂದೂ ಧರ್ಮದ ಮೇಲೆ ನಮಗೆ ಇರೋ ಗೌರವ ಅವರಿಗೆ ಇದೆಯಾ ಎಂದು ಪರಂ ಪ್ರಶ್ನಿಸಿದರು.
Advertisement
ಬಿಜೆಪಿಯವರು ಇದನ್ನ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಅದೇ ಕೆಲಸ. ಅವರು ಅದನ್ನೆ ಮಾಡಬೇಕು. ಅಭಿವೃದ್ಧಿ ಬಗ್ಗೆ ಮಾತಾಡೋದಿಲ್ಲ. ಕೇಂದ್ರ ಸರ್ಕಾರ ಇನ್ನು ನಮಗೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಈ ವರ್ಷದಲ್ಲಿ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಅದರ ಬಗ್ಗೆ ಬಿಜೆಪಿ ಅವರು ಮಾತಾಡಲಿ. ಅಭಿವೃದ್ಧಿ ಬಗ್ಗೆ ಮಾತಾಡಲಿ ಸಲಹೆ ಕೊಡಲಿ. ಅದು ಬಿಟ್ಟು ಯಾವುದರ ಬಗ್ಗೆಯೋ ಮಾತಾಡ್ತಾರೆ ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ಕಿಡಿಕಾರಿದರು.
ಇನ್ನು ಪರಮೇಶ್ವರ್ ಹೇಳಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಟ್ವೀಟ್ ನೋಡಿದೆ.ಅವರಿಗೂ ಇತ್ತು ಒಂದು ಕಾಲದಲ್ಲಿ ಹಾಗೆ. ಅವರು ದೊಡ್ಡವರು,ಹಿರಿಯರು ಇದ್ದಾರೆ. ನಾನು ಅವರ ಬಗ್ಗೆ ಮಾತಾಡೊಲ್ಲ.ನಾನು ಅವಹೇಳನಕಾರಿಯ ಮಾತು ಆಡಿಲ್ಲ.ಮುಂದೆ ಮತ್ತೆ ಅದನ್ನ ವಿಶ್ಲೇಷಣೆ ಮಾಡೋದು ಅರ್ಥವಿಲ್ಲ ಎಂದರು.
ಬಿಜೆಪಿಯವರು ಇದನ್ನ ರಾಜಕೀಯಕ್ಕೆ ಬಳಕೆ ಮಾಡಿಕೊಳ್ತಿದ್ದಾರೆ.ಅವರಿಗೆ ಅದೇ ಕೆಲಸ.ಅವರು ಅದನ್ನೆ ಮಾಡಬೇಕು.ಅಭಿವೃದ್ಧಿ ಬಗ್ಗೆ ಮಾತಾಡೋದಿಲ್ಲ. ಕೇಂದ್ರ ಸರ್ಕಾರ ಇನ್ನು ನಮಗೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ.ಈ ವರ್ಷದಲ್ಲಿ ಒಂದು ರೂಪಾಯಿ ಹಣ ಕೊಟ್ಟಿಲ್ಲ.ಅದರ ಬಗ್ಗೆ ಬಿಜೆಪಿ ಅವರು ಮಾತಾಡಲಿ. ಅಭಿವೃದ್ಧಿ ಬಗ್ಗೆ ಮಾತಾಡಲಿ ಸಲಹೆ ಕೊಡಲಿ. ಅದು ಬಿಟ್ಟು ಯಾವುದರ ಬಗ್ಗೆಯೋ ಮಾತಾಡ್ತಾರೆ ಅಂತ ಬಿಜೆಪಿ ವಿರುದ್ದ ಪರಮೇಶ್ವರ್ ಕಿಡಿಕಾರಿದರು.
Web Stories