ಕನ್ನಡದ ‘ಸೂರ್ಯಕಾಂತಿ’ ನಟಿ ರೆಜಿನಾ (Regina Cassandra) ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಉತ್ಸವಂ’ ಸಿನಿಮಾ ಪ್ರಚಾರದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಸಂದರ್ಶನದಲ್ಲಿ ನನ್ನ ಬದುಕಿನಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ ಎಂದು ಹಳೆಯ ರಿಲೇಷನ್‌ಶಿಪ್ ಬಗ್ಗೆ ನಟಿ ಮಾತನಾಡಿದ್ದಾರೆ.
ನನಗೆ ಈ ಡೇಟಿಂಗ್ ಎಲ್ಲ ತುಂಬಾನೇ ಮಾಮೂಲಿ. ಇಲ್ಲಿಯವರೆಗೆ ಹಲವಾರು ಜನರ ಜೊತೆ ನಾನು ಸುತ್ತಾಡಿದ್ದೇನೆ ಎಂದು ಹೇಳಿದ್ದಾರೆ. ನನ್ನ ಬದುಕಿನಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನೂ ನನ್ನಿಂದ ನನ್ನ ಹಳೆಯ ಸಂಬಂಧಗಳ ಕುರಿತ ವಿಚಾರವನ್ನೆಲ್ಲ ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ನಾನು ಎಲ್ಲವನ್ನೂ ನೇರವಾಗಿಯೇ ಹೇಳುವ ಅಭ್ಯಾಸ ರೂಡಿಸಿಕೊಂಡಿದ್ದೇನೆ ಎಂದು ರೆಜಿನಾ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಕೊರಗಜ್ಜ ದೈವದ ಅನುಕರಣೆ ಮಾಡಿ ಚಿತ್ರೀಕರಣ- ಕಾನೂನು ಹೋರಾಟಕ್ಕೆ ಮುಂದಾದ ದೈವಾರಾಧಕರು
ನನ್ನ ಈ ಪ್ರಾಮಾಣಿಕ ಮಾತುಗಳಿಂದ ನನ್ನ ಮಾಜಿ ಬಾಯ್‌ಫ್ರೆಂಡ್‌ಗಳ ಹೆತ್ತವರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದು ಇದೆ ಎಂದಿದ್ದಾರೆ ರೆಜಿನಾ. ನಾನು ತುಂಬಾನೇ ಸ್ವತಂತ್ರ‍್ಯವಾಗಿ ಬೆಳೆದ ಹುಡುಗಿ, ನನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಮರ್ಥವಾದ ಹುಡುಗನನ್ನೂ ಹುಡುಕುತ್ತಿದ್ದೇನೆ. ಜವಾಬ್ದಾರಿಗಳನ್ನೂ ಅರಿತು ಬದುಕು ನಡೆಸುವವರ ಜೊತೆ ಇರಲು ನನಗೆ ಇಷ್ಟವೆಂದು ಹೇಳಿದ್ದಾರೆ. ಸದ್ಯಕ್ಕೆ ರಿಲೇಷನ್‌ಶಿಪ್‌ಗಳಿಂದ ವಿರಾಮ ತೆಗೆದುಕೊಂಡಿರುವುದಾಗಿ ನಟಿ ಮಾತನಾಡಿದ್ದಾರೆ. ಈ ಮೂಲಕ ಸದ್ಯಕ್ಕೆ ತಮಗೆ ಎಂಗೇಜ್ ಆಗುವ ಆಲೋಚನೆ ಇಲ್ಲ ಎಂದಿದ್ದಾರೆ.
ಅಂದಹಾಗೆ, ಈ ಹಿಂದೆ ಪುರುಷರು ಮತ್ತು ಮ್ಯಾಗಿ ಎರಡು ಒಂದೇ. ಯಾಕೆಂದರೆ ಎರಡು ಕೂಡ ಎರಡೇ ನಿಮಿಷದಲ್ಲಿ ಮುಕ್ತಾಯವಾಗುತ್ತದೆ ಎಂದು ಹೇಳುವ ಮೂಲಕ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಅಣುಕಿಸಿದ್ದವರು ರೆಜಿನಾ.