ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದಲ್ಲಿ ನನಗೆ ನಂಬಿಕೆ ಇದ್ದು, ಪರಿಹಾರ ಸಿಗುವ ವಿಶ್ವಾಸ ಇದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ರಾಜ್ಯಪಾಲರು ನೀಡಿರೋ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಕೋರ್ಟ್‌ಗೆ ಅರ್ಜಿ ಹಾಕಿರೋ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರ ಆದೇಶದ ವಿರುದ್ಧ ಅರ್ಜಿ ಹಾಕಿದ್ದೇನೆ. ನಮ್ಮ ಲಾಯರ್‌ಗಳು ಅದನ್ನ ನೋಡ್ತಾರೆ. ರಾಜ್ಯಪಾಲರ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಪ್ರಾಸಿಕ್ಯೂಷನ್‌ಗೆ ಕೊಟ್ಟಿರೋ ಅನುಮತಿ ರದ್ದು ಮಾಡಬೇಕು ಮತ್ತು ಮಧ್ಯಂತರ ತಡೆ ಕೊಡಿ ಅಂತಾ ಕೇಳಿದ್ದೇವೆ. ನನ್ನ ಪರ ವಾದ ಮಾಡೋಕೆ ಅಭಿಷೇಕ್ ಮನುಸಿಂಘ್ವಿ ಬರ್ತಿದ್ದಾರೆ. ನ್ಯಾಯಾಲಯದಲ್ಲಿ ನಮಗೆ ವಿಶ್ವಾಸ ಇದೆ. ನ್ಯಾಯಾಲಯದಲ್ಲಿ ಪರಿಹಾರ ಸಿಗುವ ವಿಶ್ವಾಸ ಇದೆ. ನಾನೇನು ತಪ್ಪು ಮಾಡಿಲ್ಲ ಎಂದರು. ಇದನ್ನೂ ಓದಿ: ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ
Advertisement
Advertisement
ನಾನು ರಾಜಕೀಯದಲ್ಲಿ ಮಂತ್ರಿಯಾಗಿ 40 ವರ್ಷ ಆಯ್ತು ನಿನ್ನೆಗೆ. 40 ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರದ ಪುಸ್ತಕ. ರಾಜ್ಯದ ಜನರಿಗೆ ಗೊತ್ತಿದೆ. ಜನರ ಆಶೀರ್ವಾದದಿಂದ ಇಲ್ಲಿಯವರೆಗೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಅಂತಾ ರಾಜ್ಯದ ಜನರಿಗೆ ಗೊತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಮಾಡೋದೂ ಇಲ್ಲ ಎಂದು ತಿಳಿಸಿದರು.
Advertisement
ರಾಜಭವನವನ್ನ ಉಪಯೋಗ ಮಾಡಿಕೊಂಡು ಕೇಂದ್ರ, ಬಿಜೆಪಿ, ಜೆಡಿಎಸ್ ಅವರು ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ನನ್ನ ಹೆಸರಿಗೆ ಮಸಿ ಬಳಿಯಬೇಕು ಅಂತಾ ರಾಜಕೀಯ ದುರುದ್ದೇಶದಿಂದ ಮಾಡ್ತಿದ್ದಾರೆ. ನಾನು ರಾಜಕೀಯವಾಗಿಯೇ ಎದುರಿಸುವ ಕೆಲಸ ಮಾಡ್ತೀವಿ. ಲೀಗಲ್ ಫೈಟ್ ಮಾಡ್ತೀವಿ, ಜೊತೆಗೆ ರಾಜಕೀಯ ಫೈಟ್ ಕೂಡಾ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ದಲಿತ ರಾಜ್ಯಪಾಲರನ್ನು ನಿಂದಿಸಿದ್ದಕ್ಕೆ ಕಾಂಗ್ರೆಸ್ ಮೇಲೆ ಅಟ್ರಾಸಿಟಿ ಕೇಸ್ ಹಾಕಬೇಕು: ಸಿಟಿ ರವಿ ಆಗ್ರಹ
Advertisement
ಮಾನಸಿಕವಾಗಿ, ನೈತಿಕವಾಗಿ ನಾನು ಕುಗ್ಗಿಲ್ಲ. ನಾನು ಡಲ್ ಆಗಿಲ್ಲ. ರಾಜಕೀಯ ಹೋರಾಟ ಮಾಡೋವಾಗ ನನಗೆ ಇನ್ನೂ ಹೆಚ್ಚು ಜೋಶ್ ಬರುತ್ತದೆ. ನಿರಂತರವಾಗಿ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಹಿಂದೆಯೂ ಮಾಡಿದ್ದೇನೆ, ಈಗಲೂ ಮಾಡುತ್ತಿದ್ದೇನೆ. ಮುಂದೆಯೂ ಮಾಡ್ತೀನಿ ಎಂದು ಹೇಳಿದರು.
ಬಿಜೆಪಿ ಅವರಿಗೆ ನನ್ನ ಕಂಡರೆ ಭಯ. ನಾನು ಬಡವರ ಪರ ಇದ್ದೇನೆ. ಗ್ಯಾರಂಟಿ ಜಾರಿ ಮಾಡಿದ್ದೇನೆ. ಸಿದ್ದರಾಮಯ್ಯ ಅವರನ್ನ ರಾಜಕೀಯವಾಗಿ ಮುಗಿಸಿದ್ರೆ ಇಡೀ ಕಾಂಗ್ರೆಸ್ ಪಕ್ಷವನ್ನು ಮುಗಿಸಬಹುದು ಅಂತಾ ಬಿಜೆಪಿ ಅವರು ಭ್ರಮೆಯಲ್ಲಿ ಇದ್ದಾರೆ. ಅವರ ಭ್ರಮೆ ಈಡೇರೋದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಸಾಹಿತಿಗಳು – ಪ್ರತಿಭಟನೆಗೆ ಕರೆ