ಬೆಂಗಳೂರು: ನನ್ನ ಅಣ್ಣ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗಬೇಕೆಂಬ ಮಾತನ್ನು ನಾನು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ (DK Suresh) ಅವರು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಆದರೆ ನಾಯಕತ್ವ ಬದಲಾವಣೆ ಆಗಲ್ಲ ಎಂಬ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಏನೇ ಇದ್ದರೂ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಬೇಕೇ ಹೊರತು ಬೇರೆ ಯಾರು ಅಲ್ಲ. ಏನೇನಾಗುತ್ತೆ ಎನ್ನುವುದನ್ನು ಕಾದು ನೋಡೋಣ. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು. ಇದನ್ನೂ ಓದಿ: Delhi Explosion | ಇ-ಮೇಲ್ ಡ್ರಾಫ್ಟ್ ಮೂಲಕ ಸಂವಹನ ನಡೆಸುತ್ತಿದ್ದ ಉಗ್ರರು; Dead Drop ಸೀಕ್ರೆಟ್ ಏನು?
ಬಿಹಾರ ಚುನಾವಣೆಯ ಫಲಿತಾಂಶದ (Bihar Election Results) ಬಗ್ಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲವು ಎರಡೂ ಇರುತ್ತದೆ. ಬಿಹಾರದಲ್ಲಿ ನಮ್ಮ ರಾಜ್ಯದಂತೆ ಅಲ್ಲಿಯೂ ಗ್ಯಾರಂಟಿ ಅನುಷ್ಠಾನ ಮಾಡಿದ್ದರು. ಈ ಕಾರಣದಿಂದ ಮಹಿಳಾ ಮತದಾರರು ಎನ್‌ಡಿಎ ಪರ ಒಲವು ತೋರಿದ್ದಾರೆ ಎಂದು ತಿಳಿಸಿದರು.
ಜನರು ತೀರ್ಪು ನೀಡಿದ್ದನ್ನು ನಾವು ಸ್ವಾಗತ ಮಾಡುತ್ತೇವೆ. ಪಕ್ಷಕ್ಕೆ ಸೋಲು ಗೆಲುವು ಹೊಸದೇನಲ್ಲ. ಆದರೆ ನಿರಂತರವಾಗಿ ವಿರೋಧ ಪಕ್ಷವಾಗಿದ್ದರೂ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

