ಬೆಂಗಳೂರು: ಅಪರಿಚಿತರಿಗೆ ಮೊಬೈಲ್ (Mobile) ಕೊಡೋ ಮುನ್ನ ಎಚ್ಚರವಾಗಿರಿ. ಅರ್ಜೆಂಟ್ ಒಂದು ಕಾಲ್ ಮಾಡಿ ಕೊಡ್ತೀನಿ ಅಂತ ಮೊಬೈಲ್ ತಗೊಂಡು ವ್ಯಕ್ತಿಗೆ ಮೋಸ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಯಶವಂತಪುರ (Yeshwanthpura) ದ ಮತ್ತಿಕೆರೆಯಲ್ಲಿ ಮೊಬೈಲ್ ಕೊಟ್ಟ ತಪ್ಪಿಗೆ ವ್ಯಕ್ತಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ದೇವವ್ರಾತ್ ಸಿಂಗ್ ಅನ್ನೋರ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ನನ್ನ ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಅರ್ಜೆಂಟ್ ಕಾಲ್ ಮಾಡಬೇಕು ಅಂದಿದ್ದ. ಅವನ ಮಾತು ಕೇಳಿ ದೇವವ್ರಾತ್ ಸಿಂಗ್ ಅವರು ಅಪರಿಚತನ ಕೈಗೆ ಮೊಬೈಲ್ ಕೊಟ್ಟಿದ್ದರು.
ಮೊಬೈಲ್ ಕೈಗೆ ಕೊಟ್ಟ ತಕ್ಷಣ ಆತ ಮತ್ತೊಂದು ಬೈಕ್ (Bike) ಹತ್ತಿ ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದಾನೆ. ಮೊಬೈಲ್ ನಲ್ಲಿ ದೇವವ್ರಾತ್ ಮತ್ತವನ ಗರ್ಲ್ ಫ್ರೆಂಡ್ ಖಾಸಗಿ ವೀಡಿಯೋಗಳಿದ್ದವು. ಇದನ್ನು ನೋಡಿದ ಅಪರಿಚಿತ, ಇದೀಗ ವ್ಯಕ್ತಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕೋದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಹೊಸ ವರ್ಷಕ್ಕೆ ದೇವಾಲಯಕ್ಕೆ ಹೋಗಿ ಬರುತ್ತಿದ್ದಾಗ ಅಪಘಾತ – ದಂಪತಿ ಸಾವು, ಮಗು ಸ್ಥಿತಿ ಚಿಂತಾಜನಕ
ಮೂದಲಿಗೆ ಒಂದು ಲಕ್ಷ ಹಣ ಕೇಳಿದ್ದ ಆತ, ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡೋಕೆ ಶುರುಮಾಡಿದ್ದ. ಇದರಿಂದ ಬೇಸತ್ತ ಮೊಬೈಲ್ ಮಾಲೀಕ, ಯಶವಂತಪುರ ಪೊಲೀಸರಿಗೆ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ನೀಡುವ ನೆಪದಲ್ಲಿ ಆರೋಪಿಯನ್ನು ಕರೆಸಿ ಬಂಧಿಸಿದ್ದಾರೆ.
ಪವನ್, ಸೈಯದ್, ಬಂಧಿತ ಆರೋಪಿಗಳಾಗಿದ್ದು, ಇವರಿಂದ ಮೊಬೈಲ್ ಗಳು, ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.