ಚಾಮರಾಜನಗರ: ನನಗೆ ಜ್ವರ ಇದ್ದ ಕಾರಣದಿಂದ ತೆಪ್ಪದಲ್ಲಿ ಪ್ರವಾಹ(Flood) ವೀಕ್ಷಣೆಗೆ ಹೋಗಿದ್ದೆ ಎಂದು ಶಾಸಕ ಎನ್. ಮಹೇಶ್(N Mahesh) ಸ್ಪಷ್ಟನೆ ನೀಡಿದ್ದಾರೆ
ತೆಪ್ಪದಲ್ಲಿ ಕುಳಿತು ವೀಕ್ಷಣೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅಂದು ನನಗೆ ಜ್ವರ(Fever) ಇತ್ತು. ಸೊಂಟದ ಮಟ್ಟದವರೆಗೆ ನೀರಿತ್ತು. ನೀರಿನಲ್ಲಿ ಹೋಗಬಾರದು ಎಂಬ ಕಾರಣಕ್ಕೆ ತೆಪ್ಪ ಹತ್ತಿದ್ದೆ ಎಂದು ತಿಳಿಸಿದರು.
Advertisement
ಮೂರು ಅಡಿಗಿಂತ ಹೆಚ್ಚು ನೀರು ನಿಂತಿತ್ತು. ಅರ್ಧ ಅಡಿ ನೀರಿನಲ್ಲಿ ತೆಪ್ಪ ಹೋಗುತ್ತಾ? ನಾನು ಯಾವುದೇ ನಾಟಕ ಆಡುವುದಿಲ್ಲ. ವೀಡಿಯೋ ವೈರಲ್ ಮಾಡುತ್ತರಲ್ಲ ಅವರು ನಾಟಕ ಆಡುತ್ತಿದ್ದಾರೆ ಎಂದು ಸಿಟ್ಟು ಹೊರ ಹಾಕಿದರು. ಇದನ್ನೂ ಓದಿ: ಹುಡುಗರ ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ, ಮ್ಯಾಗಿ ಹಾಗೆ ಮುಗಿದು ಹೋಗತ್ತೆ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರೆಜಿನಾ
Advertisement
Advertisement
ಏನಿದು ಘಟನೆ?
ಪ್ರವಾಹ ಬಂದ ಹಿನ್ನೆಲೆಯಲ್ಲಿ ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ನಾಲ್ಕು ದಿನಗಳ ಹಿಂದೆ ಮಹೇಶ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ತೆಪ್ಪದಲ್ಲಿ ಕುಳಿತು ಮಹೇಶ್ ನೆರೆ ವೀಕ್ಷಣೆ ಮಡಿದ್ದರು.
Advertisement
ಒಂದುವರೆ ಅಡಿ ನೀರಿನಲ್ಲಿ ಮಹೇಶ್ ಅವರಿಗೆ ನಡೆಯಬಹುದಿತ್ತು. ಆದರೂ ಅವರು ತೆಪ್ಪದಲ್ಲಿ ಕುಳಿತು ಗ್ರಾಮಸ್ಥರಿಂದ ದೋಣಿ ತಳ್ಳಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ಸಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.