ಕನ್ನಡದ ‘ಸೂರ್ಯಕಾಂತಿ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ರೆಜಿನಾ ಕಸೆಂದ್ರ (Regina Cassandra), ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಎರಡೇ ಎರಡು ನಿಮಿಷದಲ್ಲಿ ಮುಗಿದು ಹೋಗುವ ಮ್ಯಾಗಿಗೆ ಹೋಲಿಸಿದ್ದಾರೆ. ಹುಡುಗರು ಮತ್ತು ಮ್ಯಾಗಿ ಎರಡೂ ಒಂದೇ, ಎರಡೇ ನಿಮಿಷದಲ್ಲಿ ಮುಗಿದು ಬಿಡುತ್ತೆ ಎಂದು ಜೋಕ್ ಮಾಡುವ ಮೂಲಕ ಟ್ರೋಲ್ ಆಗಿದ್ದಾರೆ. ಈ ಮಾತು ಪಡ್ಡೆಗಳನ್ನು ರೊಚ್ಚಿಗೇಳುವಂತೆ ಮಾಡಿದ್ದು, ರೆಜಿನಾ ಬಗ್ಗೆ ಸಲ್ಲದ ಕಾಮೆಂಟ್‍ಗಳನ್ನು ಬರೆಯುತ್ತಿದ್ದಾರೆ.
Advertisement
ಸದ್ಯ ರೆಜಿನಾ ಶಾಕಿನಿ ಡಾಕಿನಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ ಕೋ ಸ್ಟಾರ್ ನಿವೇತಾ ಥಾಮಸ್ ಜೊತೆ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ರೆಜಿನಾ ಹುಡುಗರ ಸೆಕ್ಸ್ (Sex) ಸಾಮರ್ಥ್ಯವನ್ನು ಅಳೆದಿದ್ದಾರೆ. ಅದು ಎರಡೇ ನಿಮಿಷದಲ್ಲಿ ಮುಗಿಯುವಂಥದ್ದು ಎಂದು ಹೇಳುವ ಮೂಲಕ ಇಡೀ ಸಂದರ್ಶನದ ಮೂಡ್ ಅನ್ನು ಮತ್ತೊಂದು ದಿಕ್ಕಿಗೆ ತಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್
Advertisement
Advertisement
ಸಂದರ್ಶನದಲ್ಲಿ ನಿರೂಪಕರು ಒಂದು ಜೋಕ್ ಹೇಳ್ತಾ, ಮ್ಯಾಗಿ ಎರಡೇ ನಿಮಷದಲ್ಲಿ ರೆಡಿಯಾದರೂ, ಹುಡುಗಿಯರ ಮೇಕಪ್ ಮಾತ್ರ ಬೇಗ ಆಗುವುದೇ ಇಲ್ಲ ಎಂದು ಹೇಳುತ್ತಾರೆ. ಮ್ಯಾಗಿ (Maggie) ಬಗ್ಗೆ ನನಗೂ ಒಂದು ಜೋಕ್ ಗೊತ್ತು ಎನ್ನುವ ರೆಜಿನಾ, ಮ್ಯಾಗಿ ಎರಡೇ ನಿಮಿಷದಲ್ಲಿ ಮುಗಿದು ಹೋಗತ್ತೆ, ಹಾಗೆ ಹುಡುಗರದ್ದು (Boys) ಕೂಡ ಎರಡೇ ನಿಮಿಷ ಎಂದು ಜೋಕ್ ಕಟ್ ಮಾಡುತ್ತಾರೆ. ಇದು ನಿರೂಪಕನಿಗೆ ಮೊದ ಮೊದಲು ಗೊತ್ತೇ ಆಗುವುದಿಲ್ಲ. ಅಷ್ಟಕ್ಕೆ ಸುಮ್ಮನಿರದ ರೆಜಿನಾ, ನಿಮಗೆ ಜೋಕ್ ಅರ್ಥ ಆಗಲಿಲ್ಲವಾ? ಅಂತಾರೆ. ತಡವಾಗಿ ಅರ್ಥ ಮಾಡಿಕೊಂಡ ನಿರೂಪಕ, ಅಯ್ಯ.. ಈ ವಿಷಯವೇ ಬೇಡ ಎಂದು ಬೇರೆ ಪ್ರಶ್ನೆ ಮಾಡುತ್ತಾನೆ.
Advertisement
ರೆಜಿನಾ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ಚೇತನ್ ನಟನೆಯ ‘ಸೂರ್ಯಕಾಂತಿ’ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಚೇತನ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು.