ನವದೆಹಲಿ: ಒಂದು ಹೊಸ ಪ್ರೇರಣೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಂದ ಸಿಗಲಿದೆ. ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ನಾನು ಭಾವಿಸುತ್ತೇನೆ ಅಂತ ಕೈ ನಾಯಕಿ ಸೋನಿಯಾ ಗಾಂಧಿ (Sonia Gandhi) ಹೇಳಿದ್ದಾರೆ.
ಖರ್ಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು. ಈವರೆಗೂ ನನ್ನ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ. ಎಲ್ಲರಿಗಿಂತ ನನಗೆ ಹೆಚ್ಚು ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕಾರ ಚುಕ್ಕಾಣಿಗೂ ಮುನ್ನ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಖರ್ಗೆ
Advertisement
Delhi | I extend my heartiest congratulations to the newly elected president Mallikarjun Kharge. Change is the rule of the world… Congress had faced a lot of difficulties earlier as well. But I’m sure we will overcome the problems: Outgoing Congress president Sonia Gandhi pic.twitter.com/5xphHp3klD
— ANI (@ANI) October 26, 2022
ನೆಲ ಮಟ್ಟದ ನಾಯಕ. ತಮ್ಮ ನಿಷ್ಠೆ ಪ್ರಮಾಣಿಕತೆಯಿಂದ ಉನ್ನತ ಹುದ್ದೆವರೆಗೂ ಏರಿದ್ದಾರೆ. ಈವರೆಗೂ ನನಗೆ ತೋರಿದ ಪ್ರೀತಿ, ಗೌರವಕ್ಕೆ ನಾನು ಆಭಾರಿಯಾಗಿದ್ದಾನೆ. ಕೊನೆ ಉಸಿರು ಇರುವವರೆಗೂ ನಾನು ನೆನಪಿಡುತ್ತೇನೆ. ನನ್ನ ಶಕ್ತಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಜವಾಬ್ದಾರಿಯಿಂದ ಈಗ ನಾನು ಮುಕ್ತವಾಗುತ್ತಿದ್ದೇನೆ ಎಂದರು. ಇದನ್ನೂ ಓದಿ: ಸೋಮಣ್ಣನ ವಿರುದ್ಧ ಪೊಲೀಸರಿಗೆ ದೂರು ಕೊಡುವಂತೆ ವಿವಿಧ ಸಂಘಟನೆಗಳಿಂದ ಬೆದರಿಕೆ- ಮಹಿಳೆ ಆರೋಪ
Advertisement
Congress President-elect Mallikarjun Kharge, former party president Sonia Gandhi, MP Rahul Gandhi and party’s General Secretary Priyanka Gandhi Vadra reach AICC headquarters in Delhi
Kharge to take charge as national president of the Congress party shortly. pic.twitter.com/mIjXg7R04g
— ANI (@ANI) October 26, 2022
ನಾನು ಎಲ್ಲರಿಗೂ ಕೃತ್ಯಜ್ಞತೆ ಸಲ್ಲಿಸುತ್ತೇನೆ. ಈಗ ಜವಾಬ್ದಾರಿ ಖರ್ಗೆ ಅವರ ಮೇಲಿದೆ. ಪರಿವರ್ತನೆ ಎಲ್ಲ ಕ್ಷೇತ್ರಗಳಲ್ಲೂ ನಡೆಯಲಿದೆ. ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಹೊಸ ಅಧ್ಯಕ್ಷರ ಆಯ್ಕೆಯಾಗಿದೆ. ಅದೇ ರೀತಿ ಎಲ್ಲ ನಾಯಕರು ಒಂದಾಗಿ ಹೊಸ ಶಕ್ತಿಯಾಗಿ ದೇಶದ ಮುಂದಿರುವ ಸಮಸ್ಯೆಗಳನ್ನು ಎದುರಿಸಬೇಕು ಎಂದು ಹೇಳಿದರು.