LatestLeading NewsMain PostNational

ಮೋರ್ಬಿ ದುರಂತ ರಾಜಕೀಯಗೊಳಿಸೋದು ಅಗೌರವ – ಮೃದು ಸ್ವಭಾವ ತೋರಿದ ರಾಹುಲ್

ಗಾಂಧಿನಗರ/ಹೈದರಾಬಾದ್: ಬಿಜೆಪಿ (BJP) ಆಡಳಿತ ರಾಜ್ಯದ ಪ್ರತಿಯೊಂದು ಹಗರಣಗಳ ಬಗ್ಗೆ ಕಿಡಿ ಕಾರುತ್ತಿದ್ದ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಗುಜರಾತಿನ ಮೋರ್ಬಿ ತೂಗು ಸೇತುವೆ ದುರಂತದ ವಿಷಯದಲ್ಲಿ ಮೃದು ಸ್ವಭಾವ ತಾಳಿದ್ದಾರೆ.

ತೆಲಂಗಾಣದ ಭಾರತ್ ಜೋಡೋ ಯಾತ್ರೆಯಲ್ಲಿರುವ (Bharat Jodo Yatra) ರಾಹುಲ್ ಗಾಂಧಿ ಅವರು ಪ್ರತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಇದನ್ನು ರಾಜಕೀಯಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

ಮೋರ್ಬಿ ಸೇತುವೆ ಕುಸಿತಕ್ಕೆ (Morbi Bridge Collapse) ಯಾರು ಹೊಣೆ ಎಂದು ನೀವು ಭಾವಿಸುತ್ತೀರಿ? ಎಂಬ ಪ್ರಶ್ನೆಗೆ ನಾನು ಈ ಘಟನೆಯನ್ನು ರಾಜಕೀಯಗೊಳಿಸಲು (Politicise) ಬಯಸೋದಿಲ್ಲ. ಜನರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದನ್ನು ರಾಜಕೀಯಗೊಳಿಸುವುದು ಅಗೌರವ. ನಾನು ಅದನ್ನು ಮಾಡಲು ಹೋಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ, 9 ಮಂದಿ ಅರೆಸ್ಟ್‌ – ಟೆಂಡರ್‌ ಪಡೆದು ಇನ್ನೊಂದು ಕಂಪನಿಯಿಂದ ರಿಪೇರಿ

150 ವರ್ಷಗಳಷ್ಟು ಹಳೆಯದ್ದಾದ ಗುಜರಾತ್‌ನ ಮೋರ್ಬಿ ಸೇತುವೆ ಕುಸಿದು 141 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಸುಮಾರು 2 ವರ್ಷದೊಳಗಿನ 47 ಮಕ್ಕಳೂ ಇದ್ದಾರೆ. 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಕೇಂದ್ರದ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.

ಸದ್ಯ ಮೋದಿ ತವರಿನಲ್ಲೇ ಈ ದುರಂತ ಘಟನೆ ನಡೆದಿದ್ದು, ಮಂಗಳವಾರ ಮೊರ್ಬಿಗೆ ಭೇಟಿ ನೀಡುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಈ ಘಟನೆಯನ್ನು 2016ರಲ್ಲಿ ಮಧ್ಯ ಕೋಲ್ಕತ್ತಾದಲ್ಲಿ ಫ್ಲೈಒವರ್ ಕುಸಿತಕ್ಕೆ ಹೋಲಿಸಿದ್ದು, ಮೋದಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button