ನವದೆಹಲಿ: ಒಂದು ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ನಾನು ಬದುಕಲು ಬಯಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಈ ಕುರಿತು ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಾನು ಕಾಳಿ ದೇವಿ ಆರಾಧಕಿ, ಹಿಂದೂ ಧರ್ಮ ಪಾಲಿಸುವಾಕೆ, ನನ್ನ ಅಭಿಪ್ರಾಯಗಳು ನನ್ನ ಸ್ವ-ಧರ್ಮದ ಮೇಲೆಯೇ ಅವಲಂಬಿತವಾಗಿದ್ದವು. ಇದರಲ್ಲಿ ಅಪರಾಧ ಎಸಗುವ ಯಾವುದೇ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹುವಾ ವಿರುದ್ಧ ಕೇಸ್ – ನಾನು ಕಾಳಿ ಆರಾಧಕಿಯಾಗಿದ್ದು ಹೆದರಲ್ಲ ಎಂದ ಸಂಸದೆ
Advertisement
Bring it on BJP!
Am a Kali worshipper. I am not afraid of anything. Not your ignoramuses. Not your goons. Not your police. And most certainly not your trolls.
Truth doesn’t need back up forces.
— Mahua Moitra (@MahuaMoitra) July 6, 2022
Advertisement
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್‌ರನ್ನು ಅವಹೇಳನ ಮಾಡಿದರು. ಆದರೆ ನಾನು ಕಾಳಿದೇವಿಯನ್ನು ಕೊಂಡಾಡುತ್ತೇನೆ. ಹೀಗಿದ್ದೂ ಒಂದು ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ತಂಡದ ಒಂದು ಎಡವಟ್ಟಿನಿಂದಾಗಿ ರ್‍ಯಾಂಕಿಂಗ್‌ನಲ್ಲಿ ಜಿಗಿತ ಕಂಡ ಪಾಕ್
Advertisement
ಬಿಜೆಪಿ ತನ್ನ ಪರಿಕಲ್ಪನೆಯನ್ನು ಮತ್ತೊಬ್ಬರ ಮೇಲೆ ಹೇರಲು ಬಯಸುತ್ತಿದೆ. ಸಾಧ್ಯವಿದ್ದರೆ ಬಿಜೆಪಿ ನನ್ನ ತಪ್ಪುಗಳನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.
Advertisement
The comments made by @MahuaMoitra at the #IndiaTodayConclaveEast2022 and her views expressed on Goddess Kali have been made in her personal capacity and are NOT ENDORSED BY THE PARTY in ANY MANNER OR FORM.
All India Trinamool Congress strongly condemns such comments.
— All India Trinamool Congress (@AITCofficial) July 5, 2022
ಏನುದು ವಿವಾದ?: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಕಾಳಿ ಕೈಯಲ್ಲಿ ಸಿಗರೇಟು ವಿವಾದ – ಹಿಂದೂಗಳ ಕ್ಷಮೆ ಕೋರಿದ ಟೊರೆಂಟೊ ಮ್ಯೂಸಿಯಂ
ಈಚೆಗೆ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮೆಹುವಾ ಅವರು, ನನಗೆ ಕಾಳಿ ಮಾತೆಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ. ನಿಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ‍್ಯ ನಿಮಗಿದೆ ಎಂದು ಹೇಳಿ ವಿವಾದಕ್ಕೀಡಾಗಿದ್ದರು. ಸಾಮಾಜಿಕ ಜಾಲತಾಣದಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿತ್ತು.
ವಿವಾದ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಟಿಎಂಸಿ, ಮಹುವಾ ಮೊಯಿತ್ರಾ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಮಹುವಾ ಹೇಳಿಕೆ ವೈಯಕ್ತಿಕ ಎಂದು ಹೇಳಿ ವಿವಾದಿಂದ ದೂರ ಉಳಿಯಿತು. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಮಹುವಾ ಅವರನ್ನು ಬಂಧಿಸಬೇಕೆಂಬ ಬೇಡಿಕೆಯನ್ನಿರಿಸಿದೆ.
ಈ ಕುರಿತು ಬುಧವಾರ ಮತ್ತೆ ಟ್ವೀಟ್ ಮಾಡಿದ ಮಹುವಾ, ನಾನು ಕಾಳಿ ಆರಾಧಕಿಯಾಗಿದ್ದು ಯಾವುದಕ್ಕೂ ಹೆದರುವುದಿಲ್ಲ. ನಿಮ್ಮ ಮೂಢತೆ, ಗೂಂಡಾಯಿಸಂ ಅಥವಾ ಟ್ರೋಲ್‌ಗಳಿಗೆ ಬಗ್ಗುವುದಿಲ್ಲ ಎಂದಿದ್ದಾರೆ.