CinemaInternationalLatestLeading NewsMain PostNational

ಕಾಳಿ ಕೈಯಲ್ಲಿ ಸಿಗರೇಟು ವಿವಾದ – ಹಿಂದೂಗಳ ಕ್ಷಮೆ ಕೋರಿದ ಟೊರೆಂಟೊ ಮ್ಯೂಸಿಯಂ

Advertisements

ಒಟ್ಟೋವಾ: ಕಾಳಿ ಪೋಸ್ಟರ್ ಕುರಿತು ವಿವಾದ ಸೃಷ್ಟಿಸಿದ್ದ ಟೊರಂಟೋದ ಆಗಾಖಾನ್ ಮ್ಯೂಸಿಯಂ ಹಿಂದೂ ಸಮುದಾಯದ ಕ್ಷಮೆ ಕೇಳಿದೆ.

ಭಾರತೀಯ ರಾಯಭಾರಿ ಕಚೇರಿ ಪತ್ರಕ್ಕೆ ಸ್ಪಂದಿಸಿದ ಆಗಾಖಾನ್ ಮ್ಯೂಸಿಯಂ, ಹಿಂದೂ ಧರ್ಮ ಮತ್ತು ಇತರೆ ಸಮುದಾಯಗಳ ನಂಬಿಕೆಗೆ ಧಕ್ಕೆ ತಂದಿದ್ದಕ್ಕೆ ತೀವ್ರ ವಿಷಾದವಿದೆ. ಈ ಬಗ್ಗೆ ಕ್ಷಮೆ ಕೋರುತ್ತೇವೆ ಎಂದು ಟ್ವೀಟ್ ಮೂಲಕ ಪ್ರಕಟಿಸಿದೆ. ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ: ಕನ್ನಡಿಗ ಸಂಸದ ಬೇಸರ

ಕೆನಡಾದ ಕನ್ನಡಿಗ ಸಂಸದ ಚಂದ್ರ ಆರ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಕಾಳಿದೇವಿ ಸಾಕ್ಷ್ಯಾಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ, ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಕಾಳಿ ಕುರಿತಾದ ಸಾಕ್ಷ್ಯಾಚಿತ್ರ ಪೋಸ್ಟರ್ ನೋಡಿ ಬೇಸರವಾಗಿದೆ. ಕೆಲ ವರ್ಷಗಳಿಂದ ಕೆನಡಾದಲ್ಲೂ ಸಾಂಪ್ರದಾಯಿಕ ಹಿಂದೂ ವಿರೋಧಿ ಮತ್ತು ಭಾರತ-ವಿರೋಧಿ ಗುಂಪುಗಳು ಸೇರಿಕೊಂಡು ಮಾಧ್ಯಮಗಳಲ್ಲಿ `ಹಿಂದೂಫೋಬಿಕ್’ (ಹಿಂದೂ ಧರ್ಮದ ಬಗ್ಗೆ ಭಯ ಹುಟ್ಟಿಸುವುದು) ಲೇಖನಗಳನ್ನು ಪ್ರಕಟಿಸುತ್ತಿವೆ. ಹಿಂದೂ ಧರ್ಮದ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಕಿಡಿಕಾರಿದ್ದರು. ಇದಕ್ಕೆ ಶೀಘ್ರವೇ ಪ್ರತಿಕ್ರಿಯಿಸಿರುವ ಆಗಾಖಾನ್ ಮ್ಯೂಸಿಯಂ ಕ್ಷಮೆ ಕೇಳಿದ್ದು, ಇದನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಕಾಳಿಗೆ ಅವಮಾನ – ಸಾಕ್ಷ್ಯಚಿತ್ರ ಪ್ರದರ್ಶನ ಮಾಡದಂತೆ ಸೂಚನೆ

ಮಹುವಾ ವಿರುದ್ಧ FIR: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮಧ್ಯಪ್ರದೇಶದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಮಹುವಾ ಮೊಯಿತ್ರಾ ಅವರು, ನನಗೆ ಕಾಳಿ ಮಾತೆಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ. ನಿಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ‍್ಯ ನಿಮಗಿದೆ ಎಂದು ಹೇಳಿದ್ದರು. ಈ ಹೇಳಿಕೆ ವಿವಾದವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಇದೀಗ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Live Tv

Leave a Reply

Your email address will not be published.

Back to top button