ಬೆಂಗಳೂರು: `ಕೆಂಪೇಗೌಡ ಪ್ರತಿಮೆ (Kempegowda Statue) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಕರೆದಿದ್ದೇವೆ’ ಎನ್ನುವ ಸಚಿವ ಅಶ್ವಥ್ ನಾರಾಯಣ (Ashwath Narayan) ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar, ದೊಡ್ಡವರ ಸುದ್ದಿ ಮಾತಾಡೋದು ಬೇಡಪ್ಪ, ಗಂಡಸರ ಸುದ್ದಿ ನನಗೆ ಬೇಡಪ್ಪ ಎಂದು ಟಾಂಗ್ ಕೊಟ್ಟಿರು.
Advertisement
ಬೆಂಗಳೂರಿನ (Bengaluru) ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಾ, ಬಿಜೆಪಿಯವರಿಗೆ (BJP) ಸಂಸ್ಕಾರನೇ ಇಲ್ಲ. ಪ್ರೋಟೋಕಾಲ್ ಹೇಗೆ ಮೆಂಟೇನ್ ಮಾಡಬೇಕು ಅಂತಾ ಗೊತ್ತಿಲ್ಲ. ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ ಯಾರನ್ನ ಹೇಗೆ ಕರೆಯಬೇಕು ಯಾವುದೂ ಗೊತ್ತಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್
Advertisement
Advertisement
ಈ ವೇಳೆ ಅಶ್ವಥ್ ನಾರಾಯಣ ಎಲ್ಲರನ್ನೂ ಕರೆದ್ದೇವೆ ಅಂದಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿ, ನೋಡಪ್ಪ ದೊಡ್ಡವರು, ಗಂಡಸರ ಸುದ್ದಿ ಮಾತಾಡೋದು ಬೇಡಪ್ಪ. ಗಂಡಸರ ಸುದ್ದಿ ನನಗೆ ಬೇಡಪ್ಪ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್ ಜೋಶಿ ಟಾಂಗ್
Advertisement
ಕರ್ನಾಟಕ ರಾಜ್ಯದ ಇತಿಹಾಸ `ಕೆಂಪೇಗೌಡರ’ ಹೆಸರು ಇಡಲು ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಹಾಗೂ ಎಸ್.ಎಂ.ಕೃಷ್ಣ (SM Krishna) ಅವರು ಶ್ರಮಪಟ್ಟಿದ್ದರು. ಏರ್‌ಪೋರ್ಟ್ (Bengaluru Airport) ಅಥಾರಿಟಿಯವರೇ ಪ್ರತಿಮೆ ಮಾಡುತ್ತಿದ್ದರು. ಆದ್ರೆ ಇವರು ಕಮಿಷನ್ ಆಸೆಗೆ ಏನೋ ಮಾಡಿದ್ದಾರೆ. ಆ ಸಮಾಜದ ಜನರಿಗೆ ಈ ಡಬಲ್ ಇಂಜಿನ್ ಸರ್ಕಾರ ಆದಾಯ ಡಬಲ್ ಮಾಡಿದ್ರೆ ಹೊಟ್ಟೆ ತುಂಬುತ್ತಿತ್ತು. ಅದರ ಬದಲಾಗಿ ಮಾಲಾರ್ಪಣೆ ಮಾಡಿ ಹೋಗಿದ್ದಾರೆ. ಇದರಿಂದ ಏನು ಪ್ರಯೋಜನ? ಗ್ಲೋಬಲ್ ಸಿಟಿ ಬೆಂಗಳೂರಿಗೆ ಕೊಟ್ಟ ಸಂದೇಶವೇನು ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆದು ತರಲ್ಲ: ಆರ್.ಅಶೋಕ್ ನಿನ್ನೆ ಸ್ವಾಮೀಜಿ ಅವರ ಹೆಗಲ ಮೇಲೆ ಕೈಹಾಕಿಕೊಂಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಮೀಜಿಯವರ ಹೆಗಲ ಮೇಲೆ ಕೈ ಹಾಕಿದ್ದರ ಬಗ್ಗೆ ಕಾಮೆಂಟ್ ಮಾಡಲ್ಲ. ಸ್ವಾಮೀಜಿಗೂ, ಭಕ್ತರಿಗೂ ಭಗವಂತನಿಗೂ ಇರುವ ಸಂಬಂಧ ಇರಬೇಕು. ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿಯನ್ನು ಹಾಗೇ ನೋಡುತ್ತಿದ್ದೆವು. ಇವರನ್ನೂ ಹಾಗೇ ನೋಡುತ್ತೇವೆ. ರಾಜಕೀಯದ ಮಧ್ಯೆ ಸ್ವಾಮೀಜಿಗಳನ್ನ ಎಳೆದು ತರಲು ನಾನು ಸಿದ್ಧನಿಲ್ಲ ಎಂದು ಹೇಳಿದರು.