ಕಲಬುರಗಿ: ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್ (Congress) ನಿಂದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್ ಕೂಡ ಹೊರಬಿದ್ದಿದೆ. ಈ ಮಧ್ಯೆ ಶಾಸಕರೊಬ್ಬರು ಪದೇ ಪದೇ ನನಗೆ ಟಿಕೆಟ್ ಬೇಡ ಎನ್ನುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಹೌದು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಾರ್ಯಕ್ರಮವೊಂದರಲ್ಲಿ ವಿದಾಯ ಭಾಷಣ ಮಾಡಿದ ಎಂ.ವೈ ಪಾಟೀಲ್ (M Y Patil), ನನಗೆ ಮತ್ತೆ ಟಿಕೆಟ್ ನೀಡಿದ್ರೆ ಉಪಚುನಾವಣೆ ಎದುರಿಸಬೇಕಾಗುತ್ತೆ. ಆದ್ದರಿಂದ ನನ್ನ ಬದಲಿಗೆ ಯುವಕರಿಗೆ ಟಿಕೆಟ್ ಕೊಡಿ ಎಂದು ಹೈಕಮಾಂಡ್‍ನಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.
Advertisement
Advertisement
ಈ ಮೂಲಕ 83 ವರ್ಷ ವಯಸ್ಸಿನ ಶಾಸಕ ಎಂವೈ ಪಾಟೀಲ್ ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ತೋರಿದ್ದಾರೆ. ತಮ್ಮ ಬದಲಿಗೆ ಪುತ್ರ ಅರುಣ್ ಕುಮಾರ್ ಪಾಟೀಲ್‍ಗೆ ಟಿಕೆಟ್ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: Karnataka Election 2023- ಮೇ 10 ರಂದು ಮತದಾನ, ಮೇ 13ಕ್ಕೆ ಫಲಿತಾಂಶ
Advertisement
ತನಗೆ ವಯಸ್ಸಾಗಿದೆ ಎಂದು ಪದೇ ಪದೇ ಟಿಕೆಟ್ ಬೇಡ ಎಂದು ಶಾಸಕರು ಹೇಳುತ್ತಿದ್ದಾರೆ. ಸದ್ಯ ಇದೀಗ ಅಫಜಲಪುರ ಕ್ಷೇತ್ರದ 8 ಜನ ಟಿಕೆಟ್ ಆಕಾಂಕ್ಷಿಗಳ ಪೈಕಿ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೊ ಕೂತುಹಲ ಎದ್ದಿದೆ.