ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‍ಕೆ ಬೌಲರ್ ಹರ್ಭಜನ್ ಸಿಂಗ್ ಕುರಿತು ಪ್ರಶ್ನೆಗೆ ಉತ್ತರಿಸಿ ತನ್ನ ಬಳಿ ಇರುವ ಎಲ್ಲಾ ಬೈಕ್‍ಗಳನ್ನು ಒಮ್ಮೆಲೆ ರೈಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ ಐಪಿಎಲ್ ಫೈನಲ್ ಪಂದ್ಯದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಧೋನಿ ಅವರಿಗೆ ಪತ್ರಕರ್ತರು ಹರ್ಭಜನ್ ಸಿಂಗ್ ಅವರಿಗೆ ಟೂರ್ನಿಯಲ್ಲಿ ಹೆಚ್ಚಿನ ಓವರ್ ಬೌಲ್ ಮಾಡಲು ನೀಡದಿರುವ ಕುರಿತು ಪ್ರಶ್ನಿಸಿದ್ದರು. ಈ ವೇಳೆ ಧೋನಿ ಕಾರು ಬೈಕ್ ಗಳ ಉದಾಹಣೆಯೊಂದಿಗೆ ಹೇಳಿಕೆ ನೀಡಿ ಎಲ್ಲರನ್ನು ನಗೆಗಾಡಲಲ್ಲಿ ತೇಲುವಂತೆ ಮಾಡಿದ್ದಾರೆ.
Advertisement
ನನ್ನ ಮನೆಯಲ್ಲಿ ಹಲವು ಬೈಕ್ ಹಾಗೂ ಕಾರುಗಳಿದೆ. ಆದರೆ ಒಂದೇ ಸಮಯದಲ್ಲಿ ಅವುಗಳೆಲ್ಲವನ್ನು ಚಲಾಯಿಸಲು ಸಾಧ್ಯವಿಲ್ಲ. ತಂಡದಲ್ಲಿ 6 ರಿಂದ 7 ಬೌಲರ್ ಗಳು ಇರುವ ವೇಳೆ ಪಂದ್ಯದ ಪರಿಸ್ಥಿತಿಗಳು, ಎದುರಾಳಿ ಬ್ಯಾಟ್ಸ್ ಮನ್ ಯಾರು ಎಂಬ ಎಲ್ಲ ಅಂಶಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಉತ್ತರಿಸಿದರು.
Advertisement
What goes into @msdhoni mind before he chooses a particular bowler? The @ChennaiIPL captain offers a very interesting analogy????. #VIVOIPL #Final #CSKvSRH pic.twitter.com/XEIEDdBEtH
— IndianPremierLeague (@IPL) May 26, 2018
Advertisement
ಈ ಹಿಂದಿನ ಟೂರ್ನಿಗಳಲ್ಲಿ ತಂಡದಲ್ಲಿ ನೇಗಿ ಮತ್ತು ಜಡೇಜಾ ಅವರಿಗೂ ಭಿನ್ನ ಸಂದರ್ಭಗಳಲ್ಲಿ ಬೌಲ್ ಮಾಡಲು ಅವಕಾಶ ನೀಡಿದ್ದೇನೆ. ಪಂದ್ಯದ ಪರಿಸ್ಥಿತಿ ಹಾಗೂ ಎದುರಾಳಿ ಆಟಗಾರರ ಸಾಮರ್ಥ್ಯವನ್ನು ಗಮನಿಸಿ ಬೌಲಿಂಗ್ ನಿರ್ಧರಿಸುತ್ತೇನೆ. ಈ ಹಿಂದಿನ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಬೌಲಿಂಗ್ ಅಗತ್ಯವಾಗಿದ್ದರಿಂದ ಅವಕಾಶ ನೀಡಿದ್ದೆ. ಆದರೆ ಕ್ರಿಕೆಟ್ ನ ಎಲ್ಲಾ ಮಾದರಿಯ ಪಂದ್ಯಗಳನ್ನು ಗಮನಿಸಿದರೆ ಹರ್ಭಜನ್ ಹೆಚ್ಚಿನ ಅನುಭವ ಪಡೆದ ಆಟಗಾರರಾಗಿದ್ದಾರೆ ಎಂದು ವಿವರಿಸಿದರು.
Advertisement
ಈ ಬಾರಿ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಸ್ಪೀನ್ ಬೌಲರ್ ಎನಿಸಿಕೊಂಡಿದ್ದ ಹರ್ಭಜನ್ 13 ಪಂದ್ಯಗಳಲ್ಲಿ ಆಡಿದ್ದು, 8.48 ರ ಸರಾಸರಿಯಲ್ಲಿ 7 ವಿಕೆಟ್ ಪಡೆದಿದ್ದಾರೆ.
It was a bit emotional at the start, but once tournament starts you have to be professional than emotional. @ChennaiIPL fans have waited and wanted us to do well. @msdhoni #VIVOIPL #FInal #CSKvSRH pic.twitter.com/6MDZTcv5WP
— IndianPremierLeague (@IPL) May 26, 2018