ಹಾಸನ: ನಮ್ಮ ಪಕ್ಷದವರಲ್ಲದವರು ಅಡ್ಡ ಮತದಾನ ಮಾಡಿರುವುದಕ್ಕೆ ನಾನ್ಯಾಕೆ ಉತ್ತರ ಕೊಡಲಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಕೋಲಾರ ಶಾಸಕ ಶ್ರೀನಿವಾಸ್ ಗೌಡ ಅವರು ಅಡ್ಡ ಮತದಾನ ಮಾಡಿರುವುದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಗೌಡ ಅವರನ್ನು ಪಾರ್ಟಿಯಿಂದ ಅಮಾನತು ಮಾಡಲಾಗಿದೆ. ಅವರನ್ನು ನಮ್ಮ ಪಾರ್ಟಿ ಶಾಸಕ ಅಂತ ಹೇಗೆ ಹೇಳೋದು? ಅವರು ಮತ ಹಾಕಿರುವುದನ್ನು ಅಡ್ಡ ಮತದಾನ ಅಂತ ಹೇಗೆ ಹೇಳೋದು? ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಶಾಸಕರ ಅಡ್ಡ ಮತದಾನ ವಿಚಾರವಾಗಿ ಈಗಲೇ ಮಾತನಾಡುವುದು ಸೂಕ್ತವಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್
Advertisement
Advertisement
ಮನಸ್ಸಿಗೆ ತೋಚಿದಂತೆ ಅವರು ಮತ ಹಾಕಿದ್ದಾರೆ. ನಮ್ಮ ಪಕ್ಷದಿಂದ ಸಸ್ಪೆಂಡ್ ಮಾಡಿದ ಮೇಲೆ ಯಾರಿಗೆ ಬೇಕಾದರೂ ಅವರು ವೋಟ್ ಮಾಡಬಹುದು. ಆ ಮನಸ್ಸು, ಶಕ್ತಿ ಅವರಿಗಿರುತ್ತೆ. ಹಾಲಿ ನಮ್ಮ ಪಾರ್ಟಿ ಶಾಸಕರಾಗಿ ಅಡ್ಡ ಮತದಾನ ಮಾಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಚರ್ಚೆ ಮಾಡಬಹುದಿತ್ತು. ನಮ್ಮ ಪಕ್ಷದವರಲ್ಲದವರು ಅಡ್ಡ ಮತದಾನ ಮಾಡಿರುವುದಕ್ಕೆ ನಾನ್ಯಾಕೆ ಉತ್ತರ ಕೊಡಲಿ ಎಂದರು.
Advertisement
Advertisement
ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಎ-ಟೀಂ, ಬಿ-ಟೀಂ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ನಾವು ಕ್ಯಾಂಡಿಡೇಟ್ ಹಾಕ್ತೀವಿ ಅಂತ ಕಾಂಗ್ರೆಸ್‍ನವರಿಗೆ ಮೊದಲೇ ಗೊತ್ತಿತ್ತು. ರಾಜ್ಯಸಭೆ ಚುನಾವಣೆಯಿಂದ ಕಾಂಗ್ರೆಸ್-ಬಿಜೆಪಿ ಎ-ಟೀಂ, ಬಿ-ಟೀಂ ಅಂತ ಜನತೆಗೆ ಗೊತ್ತಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಈಕೆಯ ಸಾಧನೆಗೆ ಶ್ರವಣದೋಷವೂ ಅಡ್ಡಿಯಾಗಿಲ್ಲ – ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟ ಯುವತಿ
ಈ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆಗೆ, ಅದನ್ನು ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಕೇಳಬೇಕು. ದೊಡ್ಡ ದೊಡ್ಡವರ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಪ್ರತಿಕ್ರಿಯಿಸಿದರು.