ಬೆಂಗಳೂರು: ಸರ್ಕಾರ ಬಹಮನಿ ಸುಲ್ತಾನರ ಆಚರಣೆಯನ್ನು ಮಾಡುತ್ತಿಲ್ಲ. ಇದ್ಯಾವುದು ನನಗೆ ಗೊತ್ತಿಲ್ಲವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸೂಫಿ ಸಂತರ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಬಹುಮನಿ ಉತ್ಸವಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನುವ ಸುದ್ದಿಗೆ ಅವರು, ಸರ್ಕಾರದಿಂದ ಯಾವುದೇ ಉತ್ಸವ ಆಚರಣೆ ಮಾಡುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
Advertisement
ಈ ವೇಳೆ ಕಲಬುರಗಿ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಬಹಮನಿ ಸುಲ್ತಾನರ ಉತ್ಸವ ಆಚರಣೆ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ನೀವು ಅವರನ್ನೇ ಕೇಳಿ ಎಂದ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.
Advertisement
ಬಹಮನಿ ಸುಲ್ತಾನರು ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ಸೂಫಿ ಸಂತರ ಸಾಹಿತ್ಯದ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬಹುಮನಿ ಉತ್ಸವ ನಡೆಸಬಾರದೆಂದು ಬಿಜೆಪಿ ಮತ್ತು ಕೆಲ ಕನ್ನಡಪರ ಸಂಘಟನೆಗಳು, ಮಾರ್ಚ್ 6 ರಂದು ನಗರದ ಬಹುಮನಿ ಕೋಟೆ ಮತ್ತು ಹಫ್ತ್ ಗುಮ್ಮಜ್ ಬಳಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಈಗ ರಾಹುಲ್ ರಾಜ್ಯ ನಾಯಕ, ಸಿದ್ದರಾಮಯ್ಯ ರಾಷ್ಟ್ರೀಯ ನಾಯಕ: ಶೋಭಾ ಕರಂದ್ಲಾಜೆ
Advertisement
ಕಾಂಗ್ರೆಸ್ ನಾಯಕರು ಶತಾಯಗತಾಯ ಬಹಮಾನಿ ಸುಲ್ತಾನರ ಹೆಸರಿನಲ್ಲಿಯೇ ಉತ್ಸವವನ್ನು ಮಾಡಿಯೇ ತೀರುತ್ತೇವೆಂದು ನಿರ್ಧರಿಸಿದ್ದು, ಮಾರ್ಚ್ 6 ರಂದು ಖವಾಲಿ ಮತ್ತು ಬಹಮಾನಿ ಸುಲ್ತಾನರ ಸಂಸ್ಕೃತಿಯನ್ನು ಅನಾವರಣ ಮಾಡಲು ಸಜ್ಜಾಗಿದ್ದಾರೆ. ಈ ಕುರಿತು ಕಲಬುರಗಿ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆಯೋಜಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಯಾರು ಏನೇ ಹೇಳಿದರೂ ಉತ್ಸವ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.