ಮಾಜಿ ಬಿಗ್ ಬಾಸ್ ಸ್ಪರ್ಧಿ (Bigg Boss) , ಗಾಯಕ ಚಂದನ್ ಶೆಟ್ಟಿ ಅವರ ಪತ್ನಿ ನಿವೇದಿತಾ ಗೌಡ (Niveditha Gowda) ಆಗಾಗ್ಗೆ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಇರುತ್ತಾರೆ. ಅಲ್ಲದೇ, ರೀಲ್ಸ್ ಮೂಲಕ ರಂಜಿಸುತ್ತಾರೆ. ಸದಾ ಚಟುವಟಿಕೆಯಿಂದಲೇ ಇರುವ ನಿವೇದಿತಾ ಗೌಡ, ಇತ್ತೀಚೆಗಷ್ಟೇ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಮಾತನಾಡಿದ್ದು, ಅಭಿಮಾನಿಗಳು ಪದೇ ಪದೇ ಈ ಪ್ರಶ್ನೆ ಕೇಳುವ ಬಗ್ಗೆ ಅವರು ನೆನಪಿಸಿಕೊಂಡಿದ್ದಾರೆ.
ಅಭಿಮಾನಿಯೊಬ್ಬ ನೀವು ಮಕ್ಕಳನ್ನು (Kids) ಹೊಂದುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ ಅಷ್ಟೇ ಕೂಲ್ ಆಗಿಯೇ ಉತ್ತರಿಸಿರುವ ನಿವೇದಿತಾ, ‘ಸದ್ಯಕ್ಕೆ ಮಕ್ಕಳನ್ನು ಮಾಡಿಕೊಳ್ಳುವ ಯಾವುದೇ ಪ್ಲ್ಯಾನ್ (Planning) ಇಲ್ಲ. ಇನ್ನೂ ನಾನು ಜೀವನವನ್ನು ಎಂಜಾಯ್ ಮಾಡಬೇಕು. ಟೂರ್ ಮಾಡಬೇಕು. ಎಲ್ಲವೂ ಆದ ನಂತರವೇ ನೋಡೋಣ’ ಎಂದು ಉತ್ತರಿಸಿದ್ದಾರೆ. ಪದೇ ಪದೇ ಇದೇ ಪ್ರಶ್ನೆಯನ್ನೂ ಹಲವರು ಕೇಳಿದ್ದಾರೆ. ಇಷ್ಟು ಬೇಗ ನಾನು ಯಾಕೆ ಮಗು ಮಾಡಿಕೊಳ್ಳಬೇಕು ಎಂದು ಅವರೂ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಬ್ಯೂಟಿಫುಲ್ ಹುಡುಗಿಯರ ನಡುವೆ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಒಲವಿನ ಟೀಸರ್
ಮದುವೆಯಾದ ನಂತರ ನೆಚ್ಚಿನ ನಟ ನಟಿಯರು ಯಾವಾಗ ಮಗು ಮಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ಹಲವರದ್ದು. ಹಾಗಾಗಿ ಇಂತಹ ಪ್ರಶ್ನೆಗಳನ್ನು ಅಭಿಮಾನಿಗಳು ಅವಕಾಶ ಸಿಕ್ಕಾಗ ಕೇಳಿಕೊಳ್ಳುತ್ತಲೇ ಇದ್ದಾರೆ. ಸಂಜನಾ, ಪ್ರಣಿತಾ, ರಾಧಿಕಾ ಪಂಡಿತ್ ಸೇರಿದಂತೆ ಹಲವು ನಟಿಯರು ಮದುವೆಯ ನಂತರ ಪಕ್ಕಾ ಪ್ಲ್ಯಾನ್ ಮಾಡಿಕೊಂಡೆ ತಾಯಿ ಆಗಿದ್ದಾರೆ. ಹಾಗಾಗಿ ನಿವೇದಿತಾ ಗೌಡಗೂ ಕೂಡ ಅಭಿಮಾನಿಗಳು ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವಾಗಿದೆ.
ಸದ್ಯ ನಿವೇದಿತಾ ಗೌಡ ರಿಯಾಲಿಟಿ ಶೋ, ರೀಲ್ಸ್ (Reels) ಅಂದುಕೊಂಡು ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ (Chandan Shetty) ಹೀರೋ ಆಗಿ ಲಾಂಚ್ ಆಗಿದ್ದಾರೆ. ಅಲ್ಲದೇ, ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಗಾಯಕರಾಗಿಯೂ ಸಿಕ್ಕಾಪಟ್ಟೆ ಬ್ಯುಸಿ. ಮಕ್ಕಳನ್ನು ಮಾಡಿಕೊಳ್ಳದೇ ಇರುವುದಕ್ಕೆ ಇದೆಲ್ಲವೂ ಕಾರಣ ಇರಬಹುದು.