ಬೆಂಗಳೂರು:ರಾಜರಾಜೇಶ್ವರಿನಗರದ ವಿಧಾನಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಹುಚ್ಚ ವೆಂಕಟ್ ಇನ್ನು ಎರಡು ತಿಂಗಳು ಸಮಾಜ ಸೇವೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿ ನೋವನ್ನು ತೋಡಿಕೊಂಡ ವೆಂಕಟ್, ಜನ ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ನಾನು ಚುನಾವಣೆಯಲ್ಲಿ ಸೋತಿಲ್ಲ. ಜನ ಸೋತಿದ್ದಾರೆ ಎಂದು ದೂರಿದರು.
Advertisement
ನಾನು ಸಮಾಜಕ್ಕೆ ಕೆಲಸ ಮಾಡಬೇಕು ಎಂದಿದ್ದೆ. ಆದರೆ ಇನ್ನು ಮುಂದೆ ಕೆಲಸ ಮಾಡಲ್ಲ. ಸಮಾಜ ಹೋರಾಟದ ವಿಚಾರಕ್ಕೆ ತಲೆ ಹಾಕಲ್ಲ ಎಂದಿದ್ದಾರೆ.
Advertisement
ಆರ್‍ಆರ್ ನಗರದಲ್ಲಿ ಲಕ್ಷಗಟ್ಟಲೇ ಜನ ತಪ್ಪು ಮಾಡಿದ್ದಾರೆ. ಒಂದು ದಿನ ನಮ್ಮ ರಾಜ್ಯ ಮಾರಾಟವಾದಾಗ ಹುಚ್ಚ ವೆಂಕಟ್ ಮಾತು ಗೊತ್ತಾಗುತ್ತದೆ ಎಂದ ಅವರು ನನಗೆ ಮತ ಹಾಕಿದ ಜನರಿಗೆ ಧನ್ಯವಾದ ಎಂದು ತಿಳಿಸಿದರು.ಇದನ್ನೂ ಓದಿ:ಹುಚ್ಚ ವೆಂಕಟ್ ಗಳಿಸಿದ ಮತಕ್ಕಿಂತ ನೋಟಾಗೆ ಬಿತ್ತು ಹೆಚ್ಚು ವೋಟು!
Advertisement
ನನ್ನನ್ನು ನಾನು ಮಾರುವುದಿಲ್ಲ. ಯಾವುದೇ ದುಡ್ಡು ತೆಗೆದುಕೊಳ್ಳದೇ ನನ್ನ ಬೆಂಬಲಿಸಿದ ಮಾಧ್ಯಮಗಳಿಗೆ ಈ ವೇಳೆ ಹುಚ್ಚ ವೆಂಕಟ್ ಧನ್ಯವಾದ ಹೇಳಿದರು.