ನಾನಾಗಿ ಯಾರ ಜೊತೆ ಮಾತನಾಡಲ್ಲ, ಅವರಾಗಿ ಬಂದ್ರೆ ಮಾತ್ರ ಮಾತಾಡ್ತೀನಿ: ಸಿದ್ದರಾಮಯ್ಯ

Public TV
2 Min Read
siddu 1

– ಕೇಂದ್ರದ ವಿರುದ್ಧ ಮಾಜಿ ಸಿಎಂ ಕಿಡಿ

ಬೆಂಗಳೂರು: ನಾನು ನಾನಾಗಿ ಯಾರ ಜೊತೆಯೂ ಮಾತನಾಡಲ್ಲ, ಅವರಾಗಿ ಬಂದು ಮಾತನಾಡಿದರೆ ಮಾತ್ರ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಾನು ಬಿಟ್ಟು ಹೋದವರನ್ನ ಸೇರಿಸಿಕೊಳ್ತೇವೆಂದು ಎಲ್ಲಿ ಹೇಳಿದ್ದೇವೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದವರಿಗೆ ಸ್ವಾಗತ. ಇದನ್ನೇ ನಾನು ಹೇಳಿದ್ದೇನೆ. ಕಾಂಗ್ರೆಸ್ ಬಿಟ್ಟವರನ್ನ ಸೇರಿಸಿಕೊಳ್ಳಲ್ಲ. ಅಸೆಂಬ್ಲಿಯಲ್ಲೇ ನಾನು ಈ ಬಗ್ಗೆ ಹೇಳಿದ್ದೇನೆ. ನಾನು ನಾನಾಗಿ ಯಾರ ಜೊತೆ ಮಾತನಾಡಲ್ಲ. ಅವರಾಗಿ ಬಂದರೆ ಮಾತ್ರ ಮಾತನಾಡ್ತೇನೆ ಎಂದು ತಿಳಿಸಿದರು.

HDK 1 1

ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಅವರ ಹೇಳಿಕೆಗೆ ಮಾತನಾಡಲ್ಲ. ನೋ ನೋ ನಾನು ಮಾತನಾಡಲ್ಲ ಎಂದು ಹೆಚ್‍ಡಿಕೆ ಬಗ್ಗೆ ಮಾತನಾಡಲು ನಿರಾಕರಸಿದರು. ವಿಧಾನಸಭೆ ಚುನಾವಣೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಎಲ್ಲ ಕಡೆ ನಿಲ್ಲಿ ಅಂತಾರೆ. ಕೋಲಾರ, ಕೊಪ್ಪಳ, ಚಾಮರಾಜಪೇಟೆ, ವರುಣಾದಲ್ಲೂ ನಿಲ್ಲಿ ಅಂತಾರೆ. ಚಾಮುಂಡೇಶ್ವರಿಯಲ್ಲೂ ನಿಲ್ಲಿ ಅಂತಾರೆ. ನಾನೇ ಬೇಡ ಅಂತ ಸುಮ್ಮನಾಗಿದ್ದೇನೆ ಎಂದರು. ಇದನ್ನೂ ಓದಿ: ಹಾಸನದಲ್ಲಿ ನಾನೇ ಸಿಎಂ, ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ: ಪ್ರೀತಂಗೌಡ

siddaramaiah

ನನಗೆ ಹತ್ತು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಹೇಳ್ತಿರುವುದು ನಿಜ. ಕೊಪ್ಪಳ, ಕೋಲಾರ, ಹೆಬ್ಬಾಳ, ವರುಣ,ಚಾಮರಾಜಪೇಟೆ, ಬಾದಾಮಿಯಲ್ಲಿ ನಿಲ್ಲುವಂತೆ ಒತ್ತಡ ಹಾಕ್ತಿದ್ದಾರೆ. ಹೈಕಮಾಂಡ್ ಎಲ್ಲಿ ನಿಲ್ಲು ಎಂದು ಹೇಳ್ತಾರೆ ಅಲ್ಲಿ ನಿಲ್ಲುತ್ತೇನೆ. ಚಾಮುಂಡೇಶ್ವರಿಯಿಂದಲೂ ಸ್ಪರ್ಧೆ ಮಾಡಿ ಎಂದು ಹೇಳ್ತಿದ್ದಾರೆ. ನಾನೇ ಅಲ್ಲಿ ಸ್ಪರ್ಧೆ ಮಾಡಬಾರದು ಎಂದುಕೊಂಡಿದ್ದೇನೆ. ಇನ್ನೂ ಚುನಾವಣೆಗೆ ಒಂದು ವರ್ಷ ಎರಡು ತಿಂಗಳು ಬಾಕಿಯಿದೆ. ಎಲ್ಲಿ ನಿಲ್ಲಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಐ ಮೇಕ್ ಇಟ್ ವೇರಿ ವೇರಿ ಕ್ಲೀಯರ್ ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ನಿರ್ಧಾರ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಹೊಗೇನಕಲ್‌ನ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ: ಸೋಮಣ್ಣ

narayana guru

ಇದೇ ವೇಳೆ ನಾರಾಯಣಗುರು ಒಬ್ಬ ದಾರ್ಶನಿಕರು. ಕೇರಳದಲ್ಲಿ ಜಾತೀಯತೆ ಹೆಚ್ಚಿತ್ತು. ನಂಬೂದರಿಗಳ ದೌರ್ಜನ್ಯ ಹೆಚ್ಚಾಗಿತ್ತು. ಕೆಳಗಿನವರನ್ನ ಅಸ್ಪೃಷ್ಯರ ರೀತಿ ನೋಡುತ್ತಿದ್ದರು. ಗುರುಗಳು ಇದರ ವಿರುದ್ಧ ಚಳುವಳಿ ಆರಂಭಿಸಿದರು. ಮನುಷ್ಯರೆಲ್ಲ ಒಂದೇ ದೇವರು ಒಬ್ಬನೇ ಎಂದರು. ನೀವೇ ದೇಗುಲ ಕಟ್ಟಿ ಪೂಜೆ ಮಾಡಿ ಎಂದ ಇದ್ದರು. ಜನರಲ್ಲಿ ಜಾಗೃತಿ ಮೂಡಿಸಿದ್ದವರು. ಅಂತಹ ವ್ಯಕ್ತಿಗೆ ಟ್ಯಾಬ್ಲೋಗೆ ತಿರಸ್ಕರಿಸಿದೆ. ಪರೇಡ್ ನಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಅಕ್ಷಮ್ಯ ಅಪರಾಧವೆಸಗಿದೆ. ಜನರು ಇವತ್ತು ಪ್ರತಿಭಟನೆ ನಡೆಸ್ತಿದ್ದಾರೆ. ಅವರಿಗೆ ನೋವಾಗಿದೆ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *