ಮೈಸೂರು: ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ. ಆಕೆಯ ಜೊತೆ ನಾನು ಮಾತನಾಡಿಲ್ಲ. ದೂರನ್ನೂ ಕೊಡಿಸಿಲ್ಲ ಎಂದು ಕೆಆರ್ ನಗರದ (KR Nagar) ಶಾಸಕ ರವಿಶಂಕರ್ (D Ravishankar) ಅವರು ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಆರೋಪವನ್ನು ಅಲ್ಲಗೆಳೆದಿದ್ದಾರೆ.
ರೇವಣ್ಣ (HD Revanna) ಬಂಧನದಲ್ಲಿ ಕೆಆರ್ ನಗರ ಶಾಸಕ ರವಿಶಂಕರ್ ಕೈವಾಡವಿದೆ ಎಂಬ ಲಿಂಗೇಶ್ ಆರೋಪದ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕಂಪ್ಲೆಂಟ್ ಕೊಟ್ಟಿದ್ದು ನಾನು ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು. ಇದರಲ್ಲಿ ಯಾರೋ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡುವ ಸಲುವಾಗಿ ಪತ್ರಿಕಾಗೋಷ್ಠಿ ಕರೆದಿದ್ದೇನೆ. ನನ್ನ ಹೆಸರನ್ನು ತಂದಿದ್ದಕ್ಕೆ ನಾನು ಮಾನನಷ್ಟ ಮೊಕದ್ದಮೆಯನ್ನು ಹಾಕುತ್ತೇನೆ ಎಂದರು. ಇದನ್ನೂ ಓದಿ: ದೆಹಲಿ ಬಳಿಕ ಅಹಮದಾಬಾದ್ ಶಾಲೆಗಳಿಗೂ ಬಾಂಬ್ ಬೆದರಿಕೆ
ಕೆಆರ್ ನಗರ ಠಾಣೆಯಲ್ಲಿ ದೂರು ದಾಖಲಾಗಿರುವ ಕಾರಣ ನನ್ನ ಹೆಸರನ್ನು ಎಳೆಯುತ್ತಿದ್ದಾರೆ. ಮಹಿಳೆ ಮತ್ತು ಆಕೆಯ ಮಗ ನನ್ನ ಸಂಪರ್ಕದಲ್ಲಿಲ್ಲ. ದೂರು ಕೊಡುವ ಸಂದರ್ಭದಲ್ಲಿ ನಾನು ಚಿಕ್ಕೋಡಿಯ ನಿಪ್ಪಾಣಿಯಲ್ಲಿದ್ದೆ. ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ನನ್ನ ಹೆಸರು ಹಾಳು ಮಾಡುವ ನಿಟ್ಟಿನಲ್ಲಿ ಈ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾನು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಶಾಸಕ ರವಿಶಂಕರ್ ಷಡ್ಯಂತ್ರದಿಂದ ರೇವಣ್ಣ ಅರೆಸ್ಟ್: ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್
ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ವತಿಯಿಂದ ನಮಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದರು. ನಾನು ಇಲ್ಲಿ ಚುನಾವಣೆ ಮುಗಿದ ಮೇಲೆ ಅಲ್ಲಿಗೆ ಹೋಗಿದ್ದೆ. ನಾನು ಅಲ್ಲಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆ. ಇದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಜೊತೆಗೆ ಆ ಹುಡುಗನ ವಿಚಾರ ಅಥವಾ ಅವರ ತಾಯಿಯ ವಿಚಾರ ಯಾವುದೂ ನನ್ನ ಗಮನಕ್ಕೆ ಬಂದಿಲ್ಲ, ನನ್ನ ಸಂಪರ್ಕದಲ್ಲೂ ಅವರಿಲ್ಲ. ನನಗೆ ಅದರ ಬಗ್ಗೆ ಅರಿವೂ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ, ಎನ್‌ಡಿಎ ನಾಯಕರಿಂದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ: ಬಿ.ವಿ ಶ್ರೀನಿವಾಸ್