ರಾತ್ರಿ ಅಳುತ್ತಿದ್ದೆ, ಬೆಳಗ್ಗೆ ಪ್ರಾರ್ಥಿಸುತ್ತಿದ್ದೆ: ಕರಾಳ ದಿನಗಳ ನೆನೆದ ವಿದ್ಯಾ ಬಾಲನ್

Public TV
1 Min Read
Vidya Balan

ಬಾಲಿವುಡ್ ನಲ್ಲಿರುವ ನೆಪೋಟಿಸಂ (Nepotism) ಬಗ್ಗೆ ನಟಿ ವಿದ್ಯಾ ಬಾಲನ್ ಮಾತನಾಡಿದ್ದಾರೆ. ನನಗೆ ಯಾರೇ ತೊಂದರೆ ಕೊಟ್ಟರೂ ನಾನು ಇಲ್ಲಿಯೇ ಇರುವೆ ಎಂದಿದ್ದಾರೆ. ಮೂರು ವರ್ಷಗಳಿಂದ ನನಗೆ ಯಾವುದೇ ಅವಕಾಶ ಸಿಗಲಿಲ್ಲ. ಬಂದಿರೋ ಆಫರ್ ಹಾಗೆಯೇ ಹೋಗಿ ಬಿಡುತ್ತಿತ್ತು. ಆ ದಿನಗಳಲ್ಲಿ ರಾತ್ರಿ ಅಳುತ್ತಿದ್ದೆ, ಮತ್ತೆ ಬೆಳಗ್ಗೆ ಎದ್ದಾಗ ಪ್ರಾರ್ಥಿಸುತ್ತಿದ್ದೆ. ಈಗ ನೆಮ್ಮದಿಯಾಗಿ ನಿದ್ದೆ ಮಾಡುತ್ತಿರುವ ಎಂದಿದ್ದಾರೆ ವಿದ್ಯಾ ಬಾಲನ್.

vidya balan

ಮೊದಲಿನಿಂದಲೂ ತಮ್ಮನ್ನು ಹತ್ತಿಕ್ಕುವಂತಹ ಕೆಲಸವನ್ನು ಹಲವರು ಮಾಡುತ್ತಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ. ಒಂದು ಕಡೆ ಬಾಲಿವುಡ್ ನವರಿಂದ ವಿದ್ಯಾ ತೊಂದರೆಗೆ ಒಳಗಾಗುತ್ತಿದ್ದರೆ, ಇನ್ನೊಂದು ಕಡೆ ಇವರ ಹೆಸರಿನಲ್ಲಿ ಮೋಸ ಮಾಡುವಂತಹ ಕೆಲಸ ಕೂಡ ನಡೆದಿದೆ.

vidya balan 1

ನಟ ನಟಿಯರ ಹಾಗೂ ಅವರ ಸಂಸ್ಥೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ದೋಚುವ ಪ್ರಕರಣಗಳು ಒಂದರ ಮೇಲೊಂದು ನಡೆಯುತ್ತಲೇ ಇದೆ. ಈ ಹಿಂದೆ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಇಂಥದ್ದೊಂದು ದೋಖಾ ನಡೆದಿತ್ತು. ಅದಕ್ಕೆ ಸಲ್ಮಾನ್ (Salman Khan) ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ವಿದ್ಯಾ ಬಾಲನ್ (Vidya Balan) ಹೆಸರಿನಲ್ಲೂ ಇಂಥದ್ದೊಂದು ಕೃತ್ಯ ನಡೆದಿದೆ.

vidya balan

ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ನಟಿಯ ಹೆಸರಿನಲ್ಲಿ ಹಣ ಮಾಡುತ್ತಿದ್ದಾರಂತೆ.  ಈ ವಿಷಯ ಅವರಿಗೆ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ವಿದ್ಯಾ ಬಾಲನ್. ಇಂತಹ ಕೃತ್ಯ ಮಾಡುತ್ತಿರುವವರನ್ನು ಬಂಧಿಸಿ, ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಅವರು ಮನವಿ ಮಾಡಿದ್ದಾರೆ.

 

ತಮ್ಮ ಹೆಸರನ್ನು ಬಳಸಿಕೊಂಡು ಕೆಲವರು ಹಣ ಮಾಡುತ್ತಿದ್ದಾರೆ. ನನ್ನ ಹೆಸರನ್ನು ಅವರು ದುರ್ಬಳಕ್ಕೆ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಇಂತಹ ಕೆಲಸ ಮಾಡುತ್ತಿರುವವರನ್ನು ಪತ್ತೆ ಮಾಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Share This Article