Connect with us

Cinema

ಕೆಲಸಕ್ಕಾಗಿ ನನಗೆ ಪ್ರಭಾಸ್‍ರನ್ನು ಬಿಡಲು ಸಾಧ್ಯವಿಲ್ಲ: ಅನುಷ್ಕಾ ಶೆಟ್ಟಿ

Published

on

ಹೈದರಾಬಾದ್: ಬಾಹುಬಲಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಕೆಲಸಕ್ಕಾಗಿ ನನಗೆ ಪ್ರಭಾಸ್ ಅವರನ್ನು ನಾನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ.

ಅನುಷ್ಕಾ ತಮ್ಮ ಮುಂಬರುವ ‘ನಿಶಬ್ದಂ’ ಚಿತ್ರದ ಪ್ರಮೋಶನ್‍ಗಾಗಿ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅನುಷ್ಕಾ, “ಕೆಲಸಕ್ಕಾಗಿ ನನಗೆ ಪ್ರಭಾಸ್ ಅವರ ಸ್ನೇಹವನ್ನು ಬಿಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಅನುಷ್ಕಾ, “ಕಳೆದ 15 ವರ್ಷಗಳಿಂದ ನನಗೆ ಪ್ರಭಾಸ್ ಗೊತ್ತು. ಪ್ರಭಾಸ್ ನನ್ನ 3 ಎಎಂ ಫ್ರೆಂಡ್. ನಮ್ಮಿಬ್ಬರ ನಡುವೆ ಅದ್ಭುತವಾದ ಗೆಳತನವಿದೆ. ನಮ್ಮಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್‍ಗಳು ಹರಿದಾಡುತ್ತಿರುತ್ತೆ. ನಮ್ಮಿಬ್ಬರಿಗೂ ಮದುವೆ ಆಗಿಲ್ಲ ಎಂದು ನಮ್ಮ ಬಗ್ಗೆ ಗಾಸಿಪ್‍ಗಳು ಹರಿದಾಡುತ್ತಲೇ ಇರುತ್ತೆ. ನಮ್ಮ ಆನ್‍ಸ್ಕ್ರೀನ್ ಕೆಮಿಸ್ಟ್ರೀ ತುಂಬಾ ಚನ್ನಾಗಿದೆ, ಅದಕ್ಕೆ ಹೀಗೆ ಕೆಲ ಗಾಸಿಪ್‍ಗಳು ಮಾಡಲಾಗುತ್ತೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರೂ ಒಂದೇ ತರಹದ ವ್ಯಕ್ತಿತ್ವ ಹೊಂದಿದ್ದೇವೆ, ನಮ್ಮ ಭಾವನೆಗಳನ್ನು ನಾವು ಮುಚ್ಚಿಡುವುದಿಲ್ಲ” ಎಂದು ಹೇಳಿದ್ದರು.

ಅನುಷ್ಕಾ ಶೆಟ್ಟಿ `ನಿಶಬ್ದಂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೆ ಟೀಸರ್ ಮತ್ತು ಪೋಸ್ಟರ್‍ಗಳ ಮೂಲಕ ಸಿನಿಮಾ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಸ್ವೀಟಿ ಹೊಸ ಚಿತ್ರದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾದ ಕುಳಿತಿದ್ದಾರೆ.

ಇತ್ತ ಪ್ರಭಾಸ್ ‘ಓ ಡಿಯರ್’ ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಧಾಕೃಷ್ಣ ಕುಮಾರ್ ನಿರ್ದೇಶಿಸುತ್ತಿದ್ದು, ಯುಗಾದಿ ಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗುತ್ತೆ ಎಂದು ಹೇಳಲಾಗುತ್ತಿದೆ.

Click to comment

Leave a Reply

Your email address will not be published. Required fields are marked *