Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದಿರಾ ಗಾಂಧಿಗೆ ಎಡಪಂಥೀಯ ಗುಂಪುಗಳ ಬೆಂಬಲ, ರಾಹುಲ್‌ ನಕ್ಸಲ್‌ ಬೆಂಬಲಿಗರೊಂದಿಗೆ ವೇದಿಕೆ ಹಂಚಿಕೊಳ್ತಾರೆ: ಅಮಿತ್‌ ಶಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇಂದಿರಾ ಗಾಂಧಿಗೆ ಎಡಪಂಥೀಯ ಗುಂಪುಗಳ ಬೆಂಬಲ, ರಾಹುಲ್‌ ನಕ್ಸಲ್‌ ಬೆಂಬಲಿಗರೊಂದಿಗೆ ವೇದಿಕೆ ಹಂಚಿಕೊಳ್ತಾರೆ: ಅಮಿತ್‌ ಶಾ

Latest

ಇಂದಿರಾ ಗಾಂಧಿಗೆ ಎಡಪಂಥೀಯ ಗುಂಪುಗಳ ಬೆಂಬಲ, ರಾಹುಲ್‌ ನಕ್ಸಲ್‌ ಬೆಂಬಲಿಗರೊಂದಿಗೆ ವೇದಿಕೆ ಹಂಚಿಕೊಳ್ತಾರೆ: ಅಮಿತ್‌ ಶಾ

Public TV
Last updated: March 30, 2026 9:37 pm
Public TV
Share
3 Min Read
Amit Shah 4
SHARE
  • ಕಾಂಗ್ರೆಸ್‌ನಿಂದ ಬೇರುಬಿಟ್ಟಿದ್ದ ನಕ್ಸಲಿಸಂ
  •  ಭಾರತ ಈಗ ನಕ್ಸಲ್‌ ಮುಕ್ತ

ನವದೆಹಲಿ: ಭಾರತಕ್ಕೆ ಈಗ ಮಾವೋವಾದಿಗಳ (Maoist) ಭೀತಿ ದೂರವಾಗಿದ್ದು, ನಕ್ಸಲ್‌ ವಾದದ ಭದ್ರಕೋಟೆಯಾಗಿದ್ದ ಛತ್ತೀಸ್‌ಗಢದ ಬಸ್ತಾರ್ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.

ನಕ್ಸಲ್‌ ನಿರ್ಮೂಲನೆಗೆ ಸರ್ಕಾರ ನೀಡಿದ್ದ ಮಾರ್ಚ್ 31ರ ಗಡುವಿನ ವಿಚಾರವಾಗಿ ಲೋಕಸಭೆಯಲ್ಲಿ (Lok Sabha) ಚರ್ಚೆ ನಡೆಯಿತು. ಈ ವೇಳೆ ಅವರು ಚರ್ಚೆಗೆ ಉತ್ತರಿಸುತ್ತಾ, ದೇಶದಲ್ಲಿ ನಕ್ಸಲ್‌ ವಾದ (Naxalism) ಈಗ ಅಳಿವಿನ ಅಂಚಿನಲ್ಲಿದೆ. ಸಂಪೂರ್ಣ ಪ್ರಕ್ರಿಯೆಯು ಔಪಚಾರಿಕವಾಗಿ ಪೂರ್ಣಗೊಂಡ ನಂತರ ದೇಶಕ್ಕೆ ಅದನ್ನು ತಿಳಸಲಾಗುತ್ತದೆ. ಆದರೆ ಈಗ ನಾವು ನಕ್ಸಲ್ ಮುಕ್ತರಾಗಿದ್ದೇವೆ ಎಂದು ನಾನು ಹೇಳಬಲ್ಲೆ ಎಂದರು. ಇದನ್ನೂ ಓದಿ: ಕುಖ್ಯಾತ ನಕ್ಸಲ್‌ ನಾಯಕ ರಾಮಧೇರ್ ಮಜ್ಜಿ ಸೇರಿ 11 ಮಂದಿ ಶರಣು – ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ನಕ್ಸಲ್ ಮುಕ್ತ?

ಬಸ್ತಾರ್‌ನಿಂದ ನಕ್ಸಲ್‌ ವಾದವನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ. ಬಸ್ತಾರ್‌ನಾದ್ಯಂತ ಪ್ರತಿಯೊಂದು ಹಳ್ಳಿಯಲ್ಲಿಯೂ ಶಾಲೆಯನ್ನು ನಿರ್ಮಿಸಲು ಅಭಿಯಾನವನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ಹಳ್ಳಿಯಲ್ಲಿ ಪಡಿತರ ಅಂಗಡಿಯನ್ನು ತೆರೆಯಲು ಚಾಲನೆ ನೀಡಲಾಗಿದೆ. ಪ್ರತಿ ತಾಲೂಕು ಮತ್ತು ಪಂಚಾಯತ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರಿಗೆ ಆಧಾರ್ ಕಾರ್ಡ್‌ಗಳು ಮತ್ತು ಪಡಿತರ ಚೀಟಿಗಳನ್ನು ನೀಡಲಾಗಿದೆ. ಅವರು ಈಗ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Speaking in the Lok Sabha on India’s Decisive Fight Against Naxalism, under the Leadership of PM Shri @narendramodi Ji. https://t.co/nlr3ksjBfI

— Amit Shah (@AmitShah) March 30, 2026

ಬಸ್ತಾರ್‌ನ ಜನರ ಮೇಲೆ ‘ಕೆಂಪು ಭಯೋತ್ಪಾದನೆ’ಯ ನೆರಳು ಆವರಿಸಿದ್ದರಿಂದ ಅವರು ಹಿಂದುಳಿದಿದ್ದರು. ಅದಕ್ಕಾಗಿಯೇ ಅಭಿವೃದ್ಧಿ ಅವರನ್ನು ತಲುಪಲು ವಿಫಲವಾಗಿತ್ತು. ಇಂದು, ಆ ನೆರಳನ್ನು ತೆಗೆದುಹಾಕಲಾಗಿದೆ. ಬಸ್ತಾರ್ ಈಗ ಅಭಿವೃದ್ಧಿಯ ಹಾದಿಯಲ್ಲಿದೆ ಎಂದರು.

ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡಿ, ಸರ್ಕಾರವು ನಿಮ್ಮ ಪುನರ್ವಸತಿಯನ್ನು ಖಚಿತಪಡಿಸುತ್ತದೆ. ಆದಾಗ್ಯೂ, ನಿರಾಕರಿಸಿದರೆ ನಮ್ಮ ಸರ್ಕಾರದ ನೀತಿ ಸ್ಪಷ್ಟವಾಗಿದೆ. ಶರಣಾಗುವವರೊಂದಿಗೆ ನಾವು ಸಂವಾದಕ್ಕೆ ಮುಕ್ತರಾಗಿದ್ದೇವೆ. ಹಿಂಸೆಯನ್ನು ಆರಿಸಿಕೊಳ್ಳುವವರಿಗೆ ಸರಿಯಾದ ಉತ್ತರ ನೀಡಲಾಗುವುದು ಎಂದು ಬಸ್ತಾರ್‌ನಲ್ಲಿ ಸಾರ್ವಜನಿಕವಾಗಿ ಈ ಹಿಂದೆ ಹಲವು ಬಾರಿ ಹೇಳಿದ್ದೆ. ಈಗ ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ ಎಂದು ಎಚ್ಚರಿಕೆ ರವಾನಿಸಿದರು.

ಇದೇ ವೇಳೆ ಬಿಜೆಪಿ ಸದಸ್ಯರು ದೇಶದಲ್ಲಿ ಮಾವೋವಾದದ ಪ್ರಸರಣಕ್ಕೆ ಕಾಂಗ್ರೆಸ್‌ನ 60 ವರ್ಷಗಳ ಆಡಳಿತವನ್ನು ದೂಷಿಸಿದರು. ಮಾವೋವಾದಿ ಹಿಂಸಾಚಾರವು 20,000 ಯುವಜನರ ಜೀವ ಬಲಿ ತೆಗೆದುಕೊಂಡಿದೆ. ಅಲ್ಲದೇ 12.6 ಕೋಟಿ ಜನರನ್ನು ಬಾಧಿಸಿದೆ. ಬುಡಕಟ್ಟು ಜನಾಂಗದವರು ಮತ್ತು ಇತರ ಹಲವಾರು ಸಮುದಾಯಗಳು ಅಭಿವೃದ್ಧಿಯಿಂದ ವಂಚಿತರಾಗಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿದರು.

ಕಳೆದ 75 ವರ್ಷಗಳಲ್ಲಿ, ಕಾಂಗ್ರೆಸ್ ಪಕ್ಷವು 60 ವರ್ಷಗಳ ಕಾಲ ಆಡಳಿತ ನಡೆಸಿತ್ತು. ಹಾಗಾದರೆ, ಬುಡಕಟ್ಟು ಸಮುದಾಯಗಳು ಅಭಿವೃದ್ಧಿಯಿಂದ ವಂಚಿತರಾಗಲು ಕಾರಣವೇನು? ದೇಶದೊಳಗೆ, ಕಾಶ್ಮೀರ ಮತ್ತು ಈಶಾನ್ಯದಲ್ಲಿನ ಉಗ್ರ ಚಟುವಟಿಕೆಗಿಂತ ನಕ್ಸಲಿಸಂ ದೊಡ್ಡ ಸವಾಲನ್ನು ಒಡ್ಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಇದರ ಹೊರತಾಗಿಯೂ ಕಾಂಗ್ರೆಸ್‌ ಏನೂ ಕ್ರಮಕೈಗೊಂಡಿಲ್ಲ ಎಂದು ದೂರಿದರು. ಇದನ್ನೂ ಓದಿ: ಜಾರ್ಖಂಡ್‌ | ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ನಕ್ಸಲ್‌ ನಾಯಕರ ಎನ್‌ಕೌಂಟರ್‌

ಯಾರೇ ಅಸ್ತ್ರ ಹಿಡಿದರೂ ಸರ್ಕಾರ ಸಹಿಸಲ್ಲ. ಗುಂಡಿಗೆ ಗುಂಡೇ ಉತ್ತರ. ಶರಣಾಗಿ ಇಲ್ಲವೇ ಹತರಾಗಿ ಎಂದರು. ಅಲ್ಲದೆ, ಇಂದಿರಾ ಗಾಂಧಿ ಅವರು ನಕ್ಸಲ್ ಚಿಂತನೆಗಳಿಗೆ ಬಲಿಯಾಗಿದ್ದರು. ರಾಹುಲ್ ಗಾಂಧಿ ಕೂಡ ನಕ್ಸಲ್ ಬೆಂಬಲಿಗರ ಜೊತೆ ವೇದಿಕೆ ಹಂಚಿಕೊಳ್ತಾರೆ. 60 ವರ್ಷಗಳ ಕಾಲಗಳ ಕಾಂಗ್ರೆಸ್ ನಕ್ಸಲಿಸಂ ಹತ್ತಿಕ್ಕಲಿಲ್ಲ. ಛತ್ತೀಸ್‍ಗಡದಲ್ಲಿ ಕಾಂಗ್ರೆಸ್ ಸರ್ಕಾರದಿಂದಲೇ ನಕ್ಸಲರು ಬೇರುಬಿಟ್ಟಿದ್ದರು. ಬುಡುಕಟ್ಟು ಜನ ಉದ್ಧಾರ ಆಗಬಾರದಾ? ಅಂತ ಕಿಡಿಕಾರಿದರು. ಅಲ್ಲದೆ, ನಕ್ಸಲ್ ಮುಕ್ತ ಭಾರತ ಮಿಷನ್‍ನಲ್ಲಿ ಸಿಆರ್‌ಪಿಎಫ್, ರಾಜ್ಯಗಳ ಪೊಲೀಸರ ತ್ಯಾಗ ಅಪಾರ ಅಂತ ಗುಣಗಾನ ಮಾಡಿದರು.

TAGGED:Amit Shahlok sabhaMaoistNaxalism
Share This Article
Facebook Whatsapp Whatsapp Telegram

Cinema news

Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories
lyari in pakistan dhurandhar
ಧುರಂಧರ್‌ ಸಿನಿಮಾದಲ್ಲಿ ನಮಗೆ 500 ಕೋಟಿ ಕೊಡಿ – ಹಿಟ್‌ ಬೆನ್ನಲ್ಲೇ ಪಾಲು ಕೇಳಿದ ಪಾಕ್‌
Cinema Latest Top Stories
Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories

You Might Also Like

Mahavir Jayanti procession Burude case tableau attracts attention Belagavi
Belgaum

ಮಹಾವೀರ ಜಯಂತಿ ಮೆರವಣಿಗೆ – ಗಮನ ಸೆಳೆದ ಬುರುಡೆ ಕೇಸ್‌ ಟ್ಯಾಬ್ಲೋ

Public TV
By Public TV
19 minutes ago
Bagalkote By ElectionCM Siddaramaiah
Bagalkot

ಕಳ್ಳೆತ್ತುಗೆ ವೋಟು ಹಾಕಬೇಡಿ, ಉಳುವ ಎತ್ತಿಗೆ ಮತ ಹಾಕಿ: ಬಾಗಲಕೋಟೆಯಲ್ಲಿ ಸಿದ್ದು ಅಬ್ಬರ

Public TV
By Public TV
46 minutes ago
Sangamesh
Davanagere

ಪೈಲ್ವಾನ್ ಬಳಿಕ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಮನವೊಲಿಕೆಗೆ `ಕೈ’ ಕಸರತ್ತು

Public TV
By Public TV
1 hour ago
Artemis II 1
Latest

ಆರ್ಟೆಮಿಸ್-2 ಪಯಣಕ್ಕೆ ಕೌಂಟ್‌ಡೌನ್ – ಉಡಾವಣೆಗೂ ಮುನ್ನ ಸೂರ್ಯನ ಮೇಲೆ ನಾಸಾ ಕಣ್ಣಿಟ್ಟಿದ್ದು ಯಾಕೆ? ಮಿಷನ್‌ ಉದ್ದೇಶ ಏನು?

Public TV
By Public TV
1 hour ago
Bengaluru Kempegowda International Airport 3
Bengaluru City

ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ 50 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಸೀಜ್ – ಐವರು ಅರೆಸ್ಟ್

Public TV
By Public TV
2 hours ago
R Ashok 1
Bengaluru City

ಡಿಕೆಶಿಯಿಂದ ಕುರ್ಚಿ ಉಳಿಸಿಕೊಳ್ಳೋಕೆ ಸಿಎಂ ಐದೈದು ದಿನ ಉಪಚುನಾವಣೆ ಪ್ರಚಾರ ಮಾಡ್ತಿದ್ದಾರೆ – ಅಶೋಕ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?