– ನಾನು ಲಾ ಓದದಿದ್ದರೇ ಇವತ್ತು ಸಿಎಂ ಆಗುತ್ತಿರಲಿಲ್ಲ
ಮೈಸೂರು: ನಮ್ಮ ಅಪ್ಪ ನನಗೆ ಲಾ ಓದಿಸಲು ತಯಾರಿರಲಿಲ್ಲ. ಅದಕ್ಕೆ ಲಾ ಕಾಲೇಜ್ ಸೇರಿಸದಿದ್ದರೆ ನನ್ನ ಆಸ್ತಿ ಭಾಗ ನನಗೆ ಕೊಡು ಎಂದು ನಮ್ಮ ಅಪ್ಪನನ್ನು ಕೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ನಗರದಲ್ಲಿ ಬಿಸಿಎಂ ಹಾಸ್ಟೆಲ್ (BCM Hostel) ವಿದ್ಯಾರ್ಥಿಗಳ ಸಂಘ ಉದ್ಘಾಟಸಿ ಮಾತನಾಡಿದ ಅವರು, ನಮ್ಮ ಅಪ್ಪ ನನಗೆ ಲಾ (Law) ಓದಿಸಲು ತಯಾರಿರಲಿಲ್ಲ. ಅದಕ್ಕಾಗಿ ಲಾ ಕಾಲೇಜ್ ಸೇರಿಸದಿದ್ದರೆ ನನ್ನ ಆಸ್ತಿ ಭಾಗ ನನಗೆ ಕೊಡು ಎಂದು ನಮ್ಮ ಅಪ್ಪನನ್ನು ಕೇಳಿದ್ದೆ. ನಮ್ಮ ಊರಿನ ಶಾನಭೋಗ ಕುರುಬರೆಲ್ಲಾ ಲಾ ಓದುತ್ತಾರಾ ಅಂತಾ ಹೇಳುತ್ತಿದ್ದರು. ನಮ್ಮ ಅಪ್ಪ ಅದನ್ನೇ ಕೇಳಿಕೊಂಡು ಲಾ ಓದೋದು ಬೇಡ ಅಂತಿದ್ದ. ನಾನು ಲಾ ಓದದಿದ್ದರೆ ಇವತ್ತು ಸಿಎಂ ಆಗುತ್ತಿರಲಿಲ್ಲ. ಹಿಂದೆ ಗುರು, ಮುಂದೆ ಗುರಿ ಇರಬೇಕು. ಈಗ ಹಿಂದೆ ಗುರುವು ಇಲ್ಲ ಮುಂದೆ ಗುರಿಯೂ ಇಲ್ಲ. ಓದಿದವರು ಜಾತಿ ಮಾಡುವುದನ್ನು ಮೊದಲ ಬಿಡಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಿ ಎಂದರು.ಇದನ್ನೂ ಓದಿ: ದೊಡ್ಮನೆ ಶೋಗೂ ಮೊದಲೇ ಸ್ವರ್ಗ, ನರಕದ ಲುಕ್ ರಿವೀಲ್- ಸ್ಪರ್ಧಿಗಳು ಶಾಕ್
ಕರ್ಮ ಸಿದ್ಧಾಂತ, ಹಣೆಬರಹ ಅನ್ನುವುದೆಲ್ಲಾ ಸುಳ್ಳು. ಯಾವ ಧರ್ಮ, ಯಾವ ದೇವರು ಕರ್ಮ ಸಿದ್ಧಾಂತವನ್ನು ಬೆಂಬಲಿಸಲ್ಲ. ಮನುಷ್ಯನಿಗೆ ಅವಕಾಶ ಸಿಕ್ಕರೆ ಒಳ್ಳೆಯ ಶಿಕ್ಷಣ ಪಡೆದು ಒಳ್ಳೆಯ ಜೀವನ ಮಾಡುತ್ತಾನೆ. ನಾನು ಓದುವಾಗ ಹಿಂದುಳಿದವರಿಗೆ ಮೀಸಲಾತಿ ಇರಲಿಲ್ಲ. ಹೀಗಾಗಿ ನನಗೆ ಎಂಬಿಬಿಎಸ್ ಸೀಟು ಸಿಗಲಿಲ್ಲ. ಎಂಎಸ್ಸಿ ಸೀಟು ಸಿಗಲಿಲ್ಲ. ಸೀಟು ಸಿಗದೇ ಒಂದು ವರ್ಷ ಹೊಲ ಉಳುವ ಕೆಲಸ ಮಾಡಿದ್ದೆ. ಮೈಸೂರಿನಲ್ಲಿ ನಮ್ಮಪ್ಪ ಹಾಸ್ಟೆಲ್‌ಗೆ ಸೇರಿಸಲಿಲ್ಲ. ಇದರಿಂದ ನಾನೇ ರೂಂ ಮಾಡಿಕೊಂಡಿದ್ದೆ. ರೂಂನಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡ್ತಿದ್ದೆ ಎಂದು ಹೇಳಿದರು.
ಇದೇ ವೇಳೆ ಜಾತಿಗಣತಿ ಕುರಿತು ಮಾತನಾಡಿದ ಅವರು, ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಪರಿಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕ್ಯಾಬಿನೆಟ್‌ಗೆ ಇಟ್ಟು ಜಾರಿಗೆ ತರುತ್ತೇನೆ. ಜಾತಿಗಣತಿ ಜಾರಿಗೆ ತರುವುದು ನಮ್ಮ ಪಕ್ಷದ ಅಜೆಂಡಾ. ಜಾರಿ ಮಾಡೇ ಮಾಡುತ್ತೇನೆ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರ: ಕಥುವಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆ – ಉಗ್ರರಿಗಾಗಿ ಮುಂದುವರಿದ ಶೋಧ