– 27 ರಿಂದ ರಾಮನಗರದಿಂದ ಮೇಕೆದಾಟು ನಡಿಗೆ ಪ್ರಾರಂಭವಾಗುತ್ತದೆ
ಬೆಂಗಳೂರು: ಈಶ್ವರಪ್ಪನ್ನ ವಜಾ ಮಾಡಿದರೆ ಬಿಜೆಪಿಗೆ ಗೌರವ ಉಳಿದುಕೊಳ್ಳುತ್ತದೆ. ಬಿಜೆಪಿ ರಾಜ್ಯದ ನಾಯಕರು ಈಶ್ವರಪ್ಪ ಅವರನ್ನು ಸಮರ್ಥನೆ ಮಾಡಿಕೊಳ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ನಾನು ಅಭಿನಂದಿಸುತ್ತೇನೆ. ಕೊನೆಗೂ ಅವರಿಗೆ ಅರಿವು ಆಗಿದೆ. ಬಿಜೆಪಿ ರಾಜ್ಯದ ನಾಯಕರು ಈಶ್ವರಪ್ಪನನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಈಶ್ವರಪ್ಪನ್ನ ವಜಾ ಮಾಡಿದರೆ ಬಿಜೆಪಿಗೆ ಗೌರವ ಉಳಿದುಕೊಳ್ಳುತ್ತದೆ. ನಿನ್ನೆ ರಾಜ್ಯಪಾಲರ ಬಳಿ ಹೋಗಿ ವಜಾ ಮಾಡಿ ಎಂದು ಒತ್ತಾಯ ಮಾಡಿದ್ದೇವೆ. ರಾಜ್ಯಪಾಲರು ಏನ್ ತೀರ್ಮಾನ ಮಾಡುತ್ತಾರೆ ನೋಡೋಣ. ರಾಷ್ಟ್ರದ ಬಾವುಟಕ್ಕೆ ಅಗೌರವ ಮಾಡಬಾರದು. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಬೇಕು ಅಷ್ಟೆ ಎಂದಿದ್ದಾರೆ. ಇದನ್ನೂ ಓದಿ: ಆರೋಪಿಗಳು ಹರ್ಷನ ಮೇಲೆ 2016ರಿಂದಲೇ ಕಣ್ಣಿಟ್ಟಿದ್ದರು – ಹರ್ಷನ ಹತ್ಯೆಗೆ ಕಾರಣವೇನು?
ನೀರಿಗಾಗಿ ನಡಿಗೆಯನ್ನು ನಾವು ಎಲ್ಲಿ ನಿಲ್ಲಿಸಿದ್ದೇವೆಯೋ ಅಲ್ಲಿಂದ ಮತ್ತೆ 27 ರಿಂದ ರಾಮನಗರದಿಂದ ಪಾದಯಾತ್ರೆ ಆರಂಭ ಆಗುತ್ತೆ. ಈ ಹೋರಾಟಕ್ಕೆ ಯಾರಾದರೂ ಬರಬಹುದು. ಬಿಜೆಪಿ, ಸಿನಿಮಾ ಸ್ಟಾರ್‌ಗಳು, ಜೆಡಿಎಸ್ ನಾಯಕರು ಸಹ ಈ ಪಾದಯಾತ್ರೆಗೆ ಬರಬಹುದು. ಭಾನುವಾರ ಎಲ್ಲಾ ಸಂಘ ಸಂಸ್ಥೆಗಳ ಜೊತೆ ಸಭೆ ಇದೆ. ಅವರು ಈ ಪಾದಯಾತ್ರೆಗೆ ಬರಬಹುದು. ಇಡೀ ರಾಜ್ಯದ ನಾಯಕರು, ಹಾಗೂ ಜನರಿಗೆ ಪಾದಯಾತ್ರೆಗೆ ಆಹ್ವಾನ ನೀಡುತ್ತೇನೆ. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
ನೀರಿನ ಬಗ್ಗೆ ಗೊತ್ತಿಲ್ಲ, ಯಾವ ರಾಜ್ಯಕ್ಕೆ ಎಷ್ಟು ನೀರು ಹೋಗುತ್ತದೆ ಎಂದು ಗೊತ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತಾಗಿ ಮಾತನಾಡಿ, ಅವರ ಬಗ್ಗೆ ನಾನು ಮಾತನಾಡಲ್ಲ, ಕುಮಾರಸ್ವಾಮಿ ಅವರ ಬಳಿ ಟ್ರೈನಿಂಗ್ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.