ಅಯೋಧ್ಯೆ (ಉತ್ತರ ಪ್ರದೇಶ): ನಾನು ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ. ನನ್ನ ಪೂರ್ವಜರು, ಕುಟುಂಬ ಸದಸ್ಯರು, ಭಗವಾನ್ ರಾಮಲಲ್ಲಾನ ಆಶೀರ್ವಾದ ಎಂದಿಗೂ ನನ್ನ ಮೇಲಿದೆ ಎಂದು ರಾಮಲಲ್ಲಾನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ (Arun Yogiraj) ಭಾವುಕರಾಗಿ ನುಡಿದಿದ್ದಾರೆ.
ಕೆಲವೊಮ್ಮೆ ನಾನು ಕನಸಿನ ಲೋಕದಲ್ಲಿದ್ದೇನೆ ಎಂದು ನನಗೆ ಅನಿಸುತ್ತದೆ. ಇದು ನನ್ನ ಬದುಕಿನಲ್ಲಿ ಸ್ಮರಣೀಯ ದಿನ ಎಂದು ಅಯೋಧ್ಯೆ ರಾಮಮಂದಿರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ
- Advertisement -
- Advertisement -
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗಾಗಿ ರಾಷ್ಟ್ರವು ಕುತೂಹಲದಿಂದ ಕಾಯುತ್ತಿದೆ. ಅರುಣ್ ಯೋಗಿರಾಜ್ ಅವರು ಸಮರ್ಪಣೆ ಮತ್ತು ಸಾರ್ಥಕತೆಯ ಸಂಕೇತವಾಗಿ ಅಯೋಧ್ಯೆಯಲ್ಲಿ ನಿಂತಿದ್ದಾರೆ. ಈ ಸ್ಮರಣೀಯ ಘಳಿಗೆಯು ಯೋಗಿರಾಜ್ ಅವರ ಕುಶಲತೆ ಮತ್ತು ಶ್ರೀರಾಮನ ಭಕ್ತಿಗೆ ಸಾಕ್ಷಿಯಾಗಿದೆ.
- Advertisement -
- Advertisement -
ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ವಿಗ್ರಹ ಕೆತ್ತನೆಗಾಗಿ ಅವರು 6 ತಿಂಗಳು ತೆಗೆದುಕೊಂಡಿದ್ದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ತಾರಾ ದಂಡು: ಭಾಗಿಯಾದವರು ಯಾರೆಲ್ಲ?