DistrictsKarnatakaLatestMain PostUdupi

ರಾಜ್ಯದಲ್ಲಿ ಹೊಸದಾಗಿ ನಾಯಕತ್ವ ಬಂದೇ ಬರುತ್ತದೆ: ರಘುಪತಿ ಭಟ್

- ನಾನು ಹೊಸಬನೂ ಅಲ್ಲ ಹಳಬನೂ ಅಲ್ಲ

ಉಡುಪಿ: ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ಹೊಸತಲ್ಲ. ಹೊಸಬರು ಬಂದು ಹೊಸ ನಾಯಕತ್ವ ಸೃಷ್ಟಿಯಾಗುತ್ತದೆ. ರಾಜ್ಯದಲ್ಲಿ ಹೊಸದಾಗಿ ನಾಯಕತ್ವ ಬಂದೇ ಬರುತ್ತದೆ. ಬಿಜೆಪಿ ಪಕ್ಷ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ನಾನು ಮಾನಸಿಕವಾಗಿ ತಯಾರಾಗಿದ್ದೇನೆ ಎಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರಾಜ್ಯ ಭೇಟಿ ಬಳಿಕ ಹೊಸತನದ ಘೋಷಣೆಯನ್ನು ಮಾಡಿ ಹೋಗಿದ್ದಾರೆ. ಮೈಸೂರಿನ ಕಾರ್ಯಕ್ರಮದ ನಂತರ ರಾಜ್ಯ ಬಿಜೆಪಿಯಲ್ಲಿ ಹೊಸತನ ಬಹಳ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ರಘುಪತಿ ಭಟ್, ನನ್ನನ್ನು ಬಿಟ್ಟು ಬೇರೆಯವರಿಗೆ ಅವಕಾಶ ಕೊಟ್ಟರೆ ಆ ನಿರ್ಧಾರವನ್ನು ಸ್ವೀಕರಿಸಿ ಅಭ್ಯರ್ಥಿಗಾಗಿ ಕೆಲಸ ಮಾಡುತ್ತೇನೆ. 2013ರಲ್ಲಿ ಮತ್ತೊಬ್ಬ ಅಭ್ಯರ್ಥಿ ಆಯ್ಕೆಯಾದಾಗ ನಾನು ಅವರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ. ವೈಯಕ್ತಿಕವಾಗಿ ಅಲ್ಲ, ಪಕ್ಷಕ್ಕೋಸ್ಕರ ಕೆಲಸ ಮಾಡುವ ಸ್ವಭಾವವನ್ನು ಇಟ್ಟುಕೊಂಡಿದ್ದೇನೆ ಎಂದರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು

ಮಾನಸಿಕವಾಗಿ ಸಿದ್ಧರಾಗಿ:
ಪಕ್ಷದ ಹಿರಿಯರು ತೀರ್ಮಾನ ಮಾಡಿದಂತೆ ಬಿಜೆಪಿಯಲ್ಲಿ ನಡೆಯುತ್ತದೆ. ಪಕ್ಷ ತೀರ್ಮಾನಿಸಿದಂತೆ ಟಿಕೆಟ್ ಕೊಡಲಾಗುತ್ತದೆ. ಮಾನಸಿಕವಾಗಿ ಸಿದ್ಧವಿರಬೇಕು. ನಮ್ಮ ಪಕ್ಷದಲ್ಲಿ ಯಾವುದನ್ನೂ ಬೇಕು ಅಂತ ಕೇಳಲಿಕ್ಕೆ ಇಲ್ಲ. ಬೇಡ ಅಂತ ಹೇಳಲಿಕ್ಕೂ ಇಲ್ಲ. ನಾನು ಹೊಸಬನೂ ಅಲ್ಲ ಹಳಬನೂ ಅಲ್ಲ. ನಾನು ಮಧ್ಯದಲ್ಲಿ ಇರುವ ಶಾಸಕ ನನಗಿಂತ ಬಹಳಷ್ಟು ಹಳೆಯ ಶಾಸಕರಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಹಣ ಇದ್ದವರು ಮಾತ್ರ ಸಿಎಂ ಆಗ್ತಾರೆ ಅನ್ನೋದು ಇತಿಹಾಸದಲ್ಲೇ ಇಲ್ಲ – ಯತ್ನಾಳ್‍ಗೆ ಶ್ರೀರಾಮುಲು ತಿರುಗೇಟು

ಬಿಜೆಪಿಯಲ್ಲಿ 5-6 ಬಾರಿ ಗೆದ್ದವರಿದ್ದಾರೆ. ನಮ್ಮಲ್ಲಿ ಯಾವತ್ತು ಹೊಸತನ ಇದ್ದೇ ಇದೆ. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಆಂತರಿಕ ಚರ್ಚೆ ನಡೆಯುತ್ತದೆ. ಜನಾಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆಗಳು ನಮ್ಮ ಪಕ್ಷದಲ್ಲಿ ಇದೆ. ಕಾರ್ಯಕರ್ತರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಪದ್ಧತಿ ಬಿಜೆಪಿಯಲ್ಲಿದೆ. ಜನರ ಜೊತೆ ಇದ್ದ ಶಾಸಕರಿಗೆ ಸಮಸ್ಯೆ ಆಗುವುದಿಲ್ಲ. ಜನರಿಂದ ದೂರ ಇದ್ದವರಿಗೆ ಸಮಸ್ಯೆಯಾಗಬಹುದು. 2004ರಲ್ಲಿ ಹೊಸಬನಾಗಿದ್ದ ನನಗೆ ಅವಕಾಶ ಕೊಟ್ಟರು ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published.

Back to top button