ಬೆಂಗಳೂರು: ಧರ್ಮಸ್ಥಳಕ್ಕೆ (Dharmasthala) ಬರಲು ನಾನು ಸಿದ್ಧ ಎಂದು ಹೇಲುವ ಮೂಲಕ ಮಾಗಡಿ ಶಾಸಕ ಬಾಲಕೃಷ್ಣ (MLA Balakrishna) ಸವಾಲನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ವೀಕರಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಗಡಿ ಶಾಸಕ ಬಾಲಕೃಷ್ಣ ಸವಾಲು ಸ್ವೀಕಾರ ಮಾಡ್ತೀನಿ. ಧರ್ಮಸ್ಥಳಕ್ಕೆ ಬರಲು ನಾನು ಸಿದ್ಧ. ನಮ್ಮ ಕುಟುಂಬ ಯಾರ ಬಳಿಯೂ ಹಣ ತೆಗೆದುಕೊಂಡಿಲ್ಲ. ಚುನಾವಣೆ ಮಾಡೋವಾಗ ನಮ್ಮ ಮನೆಯಿಂದ ಹಣ ಖರ್ಚು ಮಾಡಿಲ್ಲ ಅಂತ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ನಾನು ಮಾಡಿದ ಕೆಲಸಕ್ಕೆ ವಂತಿಕೆ ಕೊಟ್ಟಿರೋದು. ನೀನು ನನ್ನ ಜೊತೆ ಕೆಲಸ ಮಾಡಿದ್ದೀಯಾ..?. 30 ಮಂತ್ರಿಗಳನ್ನ ಕರೆದುಕೊಂಡು ಬಾ. ವರ್ಗಾವಣೆಯಲ್ಲಿ ಹಣ ತೆಗೆದುಕೊಂಡಿಲ್ಲ ಅಂತ ಬಂದು ಪ್ರಮಾಣ ಮಾಡ್ಲಿ ಎಂದು ಪ್ರತಿ ಸವಾಲೆಸೆದರು.
Advertisement
Advertisement
5 ತಿಂಗಳಲ್ಲಿ ಸರ್ಕಾರದ ಅವಧಿಯಲ್ಲಿ ವರ್ಗಾವಣೆಯಲ್ಲಿ ಯಾರು ಹಣ ತೆಗೆದುಕೊಂಡಿಲ್ಲ ಅಂತ ಸಿಎಂ, ಡಿಸಿಎಂ ಸೇರಿ 30 ಜನ ಮಂತ್ರಿಗಳು ಬಂದು ಆಣೆ ಮಾಡಲಿ. ಸಿದ್ದರಾಮಯ್ಯ ಕಾಲದಲ್ಲಿ ವರ್ಗಾವಣೆಗೆ ಹಣ ಪಡೆದಿದ್ದಾರೆ. ಚುನಾವಣೆ ನಡೆಸಿದ್ದೇನೆ. ಆದರೆ ವರ್ಗಾವಣೆಯಲ್ಲಿ ಹಣ ವಸೂಲಿ ಮಾಡಿ ಪಕ್ಷ ಕಟ್ಟಿಲ್ಲ. ನಮ್ಮ ನಡವಳಿಕೆ ನೋಡಿ ಕೊಟ್ಟ ದೇಣಿಗೆಯಲ್ಲಿ ಚುನಾವಣೆ ಮಾಡಿದ್ದೇನೆ. ನಾನು ಆಸ್ತಿ ಖರೀದಿ ಬಗ್ಗೆ ಡಿಸಿಎಂ ಮಾತಾಡ್ತಾರೆ. ದೇವೇಗೌಡರನ್ನ ಕೇಳಿ ಅಂತಾರೆ. ರಾಜ್ಯದ ಜನರಿಗೆ ಹೇಳ್ತೀವಿ. ದೇವೇಗೌಡರು ಒಂದು ದಿನ ಅವರ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿಲ್ಲ. ನಾವು ಈಗ ಆಸ್ತಿ ಮಾಡಿಲ್ಲ. ತಪ್ಪು ದಾರಿಯಲ್ಲಿ ಹಣ ಸಂಪಾದನೆ ಮಾಡಿಲ್ಲ. ತಪ್ಪಾಗಿ ಹಣ ಮಾಡಿದ್ರೆ ತನಿಖೆ ಮಾಡಿ ವಶಪಡಿಸಿಕೊಳ್ಳಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
Advertisement
ಬಾಲಕೃಷ್ಣ ಹೇಳಿದ್ದೇನು..?: ಕುಮಾರಸ್ವಾಮಿ (HD Kumaraswamy) ಏನೇನೋ ಅರ್ಥವಿಲ್ಲದಂತೆ ಮಾತಾಡ್ತಾರೆ. ಯಾರ ಜಮೀನು ಮೌಲ್ಯ ವೃದ್ಧಿ ಮಾಡಿಕೊಳ್ತಾರೆ.? ಕುಮಾರಸ್ವಾಮಿ ಜಮೀನು ಇಲ್ಲವಾ..? ಕುಮಾರಸ್ವಾಮಿ ಕುಟುಂಬ ಏನು ಸತ್ಯ ಹರಿಶ್ಚಂದ್ರ ಕುಟುಂಬನಾ?. ಸರ್ಕಾರದ ಒಂದು ರೂಪಾಯಿ ದುಡ್ಡನ್ನ ನಾನು ಮತ್ತು ನನ್ನ ಕುಟುಂಬ ಬಳಸಿಕೊಂಡಿಲ್ಲ ಅಂತ ಕುಮಾರಸ್ವಾಮಿ ಧರ್ಮಸ್ಥಳದ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದ್ದರು.
ಪೊಲೀಸರ ವರ್ಗಾವಣೆಯನ್ನು ಬಿಟ್ಟಿಲ್ಲ. ಪೊಲೀಸರ ವರ್ಗಾವಣೆಯಲ್ಲೂ ಅವರ ಕುಟುಂಬ ದುಡ್ಡು ತೆಗೆದುಕೊಂಡಿದೆ. ಎಲ್ಲರೂ ಗಾಜಿನ ಮನೆಯಲ್ಲಿ ಇರೋದು. ಯಾರು ಕೂಡ ಸತ್ಯ ಹರಿಶ್ಚಂದ್ರರು ಇಲ್ಲ. ಅವಕಾಶ ಸಿಗದೇ ಇರೋನು ಸತ್ಯ ಹರಿಶ್ಚಂದ್ರ ಅಷ್ಟೆ. ಅವಕಾಶ ಸಿಕ್ಕಾಗ ಎಲ್ಲರೂ ಮಾಡಿದ್ದಾರೆ. ಕುಮಾರಸ್ವಾಮಿ ಯಾಕೆ ತಾಜ್ ನಲ್ಲಿ ಇದ್ದರು. ಕುಮಾರಸ್ವಾಮಿ ತಾಜ್ ವೆಸ್ಟ್ ಅಂಡ್ ನಲ್ಲಿ ಇದ್ದಿದ್ದು ಡೀಲ್ ಮಾಡಿಕೊಳ್ಳೋಕೆ. ಸಿದ್ದರಾಮಯ್ಯ ಇದ್ದರು ಅದಕ್ಕೆ ನಾನು ತಾಜ್‍ನಲ್ಲಿ ಇದ್ದೆ ಅಂತಾರೆ. ಕಾವೇರಿಗೆ ಯಾಕೆ ಕಾಯಬೇಕು. ಬೇರೆ ಬಂಗಲೆ ಇರಲಿಲ್ಲವಾ ಎಂದು ಪ್ರಶ್ನಿಸುವ ಮೂಲಕ ಹೆಚ್‍ಡಿಕೆ ವಿರುದ್ಧ ಕಿಡಿಕಾರಿದ್ದರು.
Web Stories